ಭಾರತ ತಂಡ ಈ ಬಾರಿ ಏಷ್ಯಾ ಕಪ್ ಗೆಲ್ಲಬೇಕು ಎಂದ ಈ ಮೂವರು ಮಿಂಚಲೇಬೇಕು. ಯಾರ್ಯಾರು ಗೊತ್ತೇ??

23

Get real time updates directly on you device, subscribe now.

ಏಷ್ಯಾಕಪ್ ಟೂರ್ನಿ ಪಂದ್ಯಗಳು ಆಗಸ್ಟ್ 27ರಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯ ಶ್ರೀಲಂಕಾ ವರ್ಸಸ್ ಅಫ್ಘಾನಿಸ್ಥಾನ್ ನಡುವೆ ನಡೆಯಲಿದ್ದು, ಭಾರತ ತಂಡದ ಮೊದಲ ಪಂದ್ಯ ಆಗಸ್ಟ್ 28ರಂದು, ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಏಷ್ಯಾಕಪ್ ನಲ್ಲಿ ಒಟ್ಟು 6 ತಂಡಗಳು ಸ್ಪರ್ಧಿಸುತ್ತಿದೆ. ನಮ್ಮ ಭಾರತ ತಂಡ ಗೆಲ್ಲಲೇಬೇಕು ಎಂದು ಪಣ ತೊಟ್ಟು, ಸ್ಟ್ರಾಂಗ್ ಟೀಮ್ ರೆಡಿ ಮಾಡಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಪಂದ್ಯಗಳು ನಡೆಯಲಿದೆ. ಭಾರತ ತಂಡ ಈ ಬಾರಿ ಗೆಲ್ಲಲೇಬೇಕು ಎಂದುಕೊಂಡಿದ್ದು, ತಂಡದಲ್ಲಿರುವ ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ, ಭಾರತ ಏಷ್ಯಾಕಪ್ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.

ಮೊದಲ ಆಟಗಾರ, ಕಿಂಗ್ ಕೋಹ್ಲಿ. ವಿರಾಟ್ ಕೋಹ್ಲಿ ಅವರು ಫಾರ್ಮ್ ಕಳೆದುಕೊಂಡಿರುವುದು ಎಲ್ಲರಿಗೂ ಬೇಸರ ತರಿಸಿದೆ. ವಿರಾಟ್ ಕೋಹ್ಲಿ ಅವರು ಒಂದು ತಿಂಗಳ ವಿಶ್ರಾಂತಿ ಪಡೆದು, ಇದೀಗ ಭಾರತ ತಂಡಕ್ಕೆ ಮರಳಿ ಬಂದಿದ್ದಾರೆ. ಅವರನ್ನು ಪ್ರೂವ್ ಮಾಡಿಕೊಂಡು, ಮತ್ತೊಮ್ಮೆ ಫಾರ್ಮ್ ಗೆ ಬರಲು ಏಷ್ಯಾಕಪ್ ಪಂದ್ಯಗಳು ವಿರಾಟ್ ಕೋಹ್ಲಿ ಅವರಿಗೆ ಒಂದು ಒಳ್ಳೆಯ ಅವಕಾಶ ಆಗಿದ್ದು, ವಿರಾಟ್ ಅವರು ಅದಕ್ಕಾಗಿ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದಾರೆ. ಪಂದ್ಯಗಳಲ್ಲಿ ವಿರಾಟ್ ಅವರ 71ನೇ ಸೆಂಚುರಿ ನೋಡಲು ಎಲ್ಲರೂ ಕಾಯುತ್ತಿದ್ದಾರೆ..

ಎರಡನೇ ಆಟಗಾರ ದಿನೇಶ್ ಕಾರ್ತಿಕ್.. 2022ರಲ್ಲಿ ದಿನೇಶ್ ಕಾರ್ತಿಕ್ ಅವರು ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ದಿನೇಶ್ ಅವರು ಆರ್.ಸಿ.ಬಿ ತಂಡದ ಪರವಾಗಿ ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ಅವರು ಅದ್ಭುತವಾದ ಪ್ರದರ್ಶನ ನೀಡಿ, ಫಿನಿಷರ್ ಸ್ಥಾನದಲ್ಲಿದ್ದರು. ಅದರಿಂದಾಗಿಯೇ ಟೀಮ್ ಇಂಡಿಯಾಗೆ ಮರಳಿ ಬಂದಿರುವ ದಿನೇಶ್ ಕಾರ್ತಿಕ್, ಇದೀಗ ಏಷ್ಯಾಕಪ್ ಪಂದ್ಯದಲ್ಲೂ ಭಾರತ ತಂಡಕ್ಕೆ ಸೆಲೆಕ್ಟ್ ಆಗಿದ್ದಾರೆ. ಫಿನಿಶರ್ ಆಗಿ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್ ಅವರ ಮೇಲೆ ಭಾರಿ ಭರವಸೆ ಇದೆ.

ಮೂರನೆಯವರು, ಆಲ್ ರೌಂಡರ್ ರವೀಂದ್ರ ಜಡೇಜಾ.. ಆಲ್ ರೌಂಡರ್ ಆಗಿರುವ ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇನ್ನಷ್ಟು ಒಳ್ಳೆಯ ಪ್ರದರ್ಶನ ನೀಡಬೇಕಿದೆ. ಇವರ ಬ್ಯಾಟಿಂಗ್ ಪ್ರದರ್ಶನ ಇತ್ತೀಚೆಗೆ ಒಳ್ಳೆಯ ರೀತಿಯಲ್ಲಿ ತಂಡಕ್ಕೆ ಸಹಾಯ ಆಗುತ್ತಿದೆ. ಅದೇ ರೀತಿ ಬೌಲಿಂಗ್ ನಲ್ಲಿ ಸಹ ಜಡೇಜಾ ಅವರು ಆಕ್ರಮಣಕಾರಿಯಾಗಿದ್ದರೆ ಭಾರತ ತಂಡಕ್ಕೆ ನೆರವಾಗುವುದು ಖಂಡಿತ. ಹಾಗಾಗಿ ರವೀಂದ್ರ ಜಡೇಜಾ ಅವರ ಮೇಲೆ ಸಹ ಎಲ್ಲರಿಗೂ ಉತ್ತಮವಾದ ನಿರೀಕ್ಷೆ ಇದೆ. ಪಂದ್ಯಗಳಲ್ಲಿ ಇವರ ಆಲ್ ರೌಂಡರ್ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.