ಯಾವ ಹುಡುಗಿ ನೋಡಿದರೂ ಈ ರಾಶಿ ಹುಡುಗರ ಹಿಂದೆ ಬೀಳುತ್ತಾರೆ. ಹುಡಿಗಿಯರನ್ನು ಪ್ರೀತಿಯಲ್ಲಿ ಬೀಳಿಸುವ ಮಚ್ಚೆ ಇಟ್ಟುಕೊಂಡೆ ಹುಟ್ಟಿರುವ ರಾಶಿಗಳು ಯಾವ್ಯಾವು ಗೊತ್ತೇ??

53

Get real time updates directly on you device, subscribe now.

ಮದುವೆ ಬಗ್ಗೆ ಪ್ರತೀಯೊಬ್ಬ ಹುಡುಗ ಹುಡುಗಿ ತಮ್ಮದೇ ಆದ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಹುಡುಗಿಯರಿಗೆ ಮದುವೆ ಬಗ್ಗೆ ಆಸೆ ಕನಸುಗಳು ಹೆಚ್ಚಾಗಿರುತ್ತದೆ. ತಾವು ಪ್ರೀತಿಸುವ ಮದುವೆ ಆಗುವ ಹುಡುಗ ಇದೇ ರೀತಿ ಇರಬೇಕು ಎಂದು ನಿರೀಕ್ಷೇ ಇಟ್ಟುಕೊಂಡಿರುತ್ತಾರೆ. ಆದರೆ ಸಿಗುವ ಹುಡುಗರು ಅದೇ ರೀತಿ ಇರುತ್ತಾರೆ ಎಂದು ಹೇಳಲು ಆಗುವುದಿಲ್ಲ. ಆದರೆ ಕೆಲವೊಬ್ಬ ಹುಡುಗರು ಅವರ ಸ್ವಭಾವ ಹೇಗಿರುತ್ತದೆ ಎಂದರೆ ಹುಡುಗಿಯರೇ ಅವರ ಹಿಂದೆ ಬೀಳುತ್ತಾರೆ. ಅಂತಹ ಒಳ್ಳೆಯ ಮನಸ್ಸಿನ ಹುಡುಗರಾಗಿರುತ್ತಾರೆ. ಅಂತಹ ಒಳ್ಳೆಯ ಸ್ವಭಾವ ಇರುವ ರಾಶಿಯ ಹುಡುಗರು ಯಾರೆಲ್ಲಾ ಇರುತ್ತಾರೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯವರಿಗೆ ಹುಡುಗಿಯರನ್ನು ಇಂಪ್ರೆಸ್ ಮಾಡಲು ವಿಶೇಷವಾಗಿ ಏನು ಮಾಡುವ ಅವಶ್ಯಕತೆ ಇಲ್ಲ. ಇವರ ಗುಣ ಸ್ವಭಾವಕ್ಕೆ ಮತ್ತು ಮಾತನಾಡುವ ರೀತಿಗೆ ಹುಡುಗಿಯರೇ ಇವರ ಹಿಂದೆ ಬೀಳುತ್ತಾರೆ. ಈ ರಾಶಿಯವರು ಬಹಳ ಮೃದು ಸ್ವಭಾವದವರಾಗಿರುತ್ತಾರೆ, ಜೊತೆಗೆ ಸಂದರ್ಭಗಳಲ್ಲಿ ಬಹಳ ರೊಮ್ಯಾಂಟಿಕ್ ಆಗಿರುತ್ತಾರೆ.ಹುಡುಗಿಯರ ಹೇಗಿರಬೇಕು ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿರುವ ಇವರು, ಭಾವನಾತ್ಮಕವಾಗಿ ಹುಡುಗಿಯರನ್ನು ಅರ್ಥಮಾಡಿಕೊಳ್ಳುತ್ತಾರೆ. ಶೇ.100 ರಷ್ಟು ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇವರಲ್ಲಿ ಇರುವುದರಿಂದ ಹುಡುಗಿಯರು ಇವರ ಹಿಂದೆ ಬೀಳುತ್ತಾರೆ..

ಸಿಂಹ ರಾಶಿ :- ಬಹಳ ರೊಮ್ಯಾಂಟಿಕ್ ಆಗಿರುವ ಸಿಂಹ ರಾಶಿಯವರು, ಸಂಬಂಧಕ್ಕೆ ಬೆಲೆ ನೀಡುತ್ತಾರೆ. ಹುಡುಗಿಯರು ಇವರೊಂದಿಗೆ ನಾಚಿಕೆ ಪಟ್ಟುಕೊಳ್ಳದೆ, ಇವರ ಜೊತೆಗೆ ಸಂಬಂಧದಲ್ಲಿ ಇರಲು ಇಷ್ಟಪಡುತ್ತಾರೆ. ಇವರ ವಿದ್ಯಾಭ್ಯಾಸ ಚೆನ್ನಾಗಿರುವುದರಿಂದ ಕೇಂದ್ರ ಬಿಂದು ಆಗಿರುತ್ತಾರೆ. ಇವರ ನಡೆ ನುಡಿ ಮತ್ತು ಲುಕ್ಸ್ ಸಹ ಆಕರ್ಷಕವಾಗಿರುತ್ತದೆ. ಮೊದಲ ನೋಟದಲ್ಲೇ ಹುಡುಗಿಯರನ್ನು ಸೆಳೆದುಕೊಳ್ಳುತ್ತಾರೆ.

ತುಲಾ ರಾಶಿ :- ಸಾಮಾನ್ಯವಾಗಿ ಪ್ರೀತಿ ಪಡೆದುಕೊಳ್ಳುವವರೆಗೂ ಒಂದು ಥರಾ ಇರುತ್ತಾರೆ. ಪ್ರೀತಿ ಸಿಕ್ಕಿದ ಬಳಿಕ ಬೇರೆ ಥರ ಇರುತ್ತಾರೆ. ಆದರೆ ತುಲಾ ರಾಶಿಯವರು ಆ ರೀತಿ ಅಲ್ಲ, ಪ್ರೀತಿ ಮತ್ತು ಕೆಲಸ ಎರಡನ್ನು ಸಮನಾಗಿ ನೋಡಿಕೊಳ್ಳುತ್ತಾರೆ. ಬಹಳ ಫ್ರೆಂಡ್ಲಿ ಆಗಿರುವ ಇವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ, ಹಾಗಾಗಿ ಎಲ್ಲರೂ ಇವರೊಡನೆ ಸ್ನೇಹ ಬೆಳೆಸಲು ಇಷ್ಟಪಡುತ್ತಾರೆ. ಇವರ ಜೊತೆ ಸ್ನೇಹ ಶುರುವಾದ ಬಳಿಕ ಹುಡುಗ ಅಥವಾ ಹುಡುಗಿ ಯಾರೇ ಇದ್ದರು ಅವರಿಗೆ ತಕ್ಕ ಹಾಗೆ, ಹೊಂದಿಕೊಳ್ಳುತ್ತಾರೆ.

ಮಕರ ರಾಶಿ :- ಮೊದಲ ಸಾರಿ ಕಂಡ ಕೂಡಲೇ ಹುಡುಗಿಯರನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇವರ ಜೊತೆಗೆ ಸ್ನೇಹ ಬೆಳಿಸಿದ ಬಳಿಕ, ಇವರಲ್ಲಿನ ಆಕರ್ಷಕ ಸ್ವಭಾವ ವ್ಯಕ್ತಿತ್ವ, ಹುಡುಗಿಯರು ಇವರಿಗೆ ಶರಣಾಗುವ ಹಾಗೆ ಮಾಡುತ್ತದೆ. ಇವರ ಗುಣ ಸ್ವಭಾವ ಇಷ್ಟಪಡುವ ಹುಡುಗಿಯರು, ಇವರ ಜೊತೆ ಇದ್ದರೆ ಸಾಕು ಎಂದು ಬಯಸುತ್ತಾರೆ. ಇವರದ್ದು ಆಕರ್ಷಕ ವ್ಯಕ್ತಿತ್ವ. ಹುಡುಗಿಯರನ್ನು ಸೆಳೆಯುವ ನಾಲ್ಕು ರಾಶಿಯ ವ್ಯಕ್ತಿಗಳು ಇವರೇ ಆಗಿದ್ದಾರೆ.

Get real time updates directly on you device, subscribe now.