ತಂಡದಲ್ಲಿ ಆ ಒಬ್ಬ ಬೌಲರ್ ಇರಲೇಬೇಕು, ಆರಂಭದಲ್ಲಿ ವಿಕೆಟ್ ಬೇಕು ಎಂದರೆ ಈತನನ್ನು ಆಯ್ಕೆ ಮಾಡಿ ಎಂದ ಬಾಲಾಜಿ, ಭುವಿ ಅಲ್ಲವಂತೆ ಮತ್ಯಾರು ಗೊತ್ತೇ??

39

Get real time updates directly on you device, subscribe now.

ಆಗಸ್ಟ್ 27ರಿಂದ ಟಿ20 ಪಂದ್ಯಗಳು ಯುಎಇ ನಲ್ಲಿ ಶುರುವಾಗಲಿದ್ದು, ಆಗಸ್ಟ್ 28ರಂದು ಭಾರತ ತಂಡ ಮತ್ತು ಪಾಕಿಸ್ತಾನ್ ತಂಡಗಳ ವಿರುದ್ಧದ ಪಂದ್ಯಗಳು ನಡೆಯಲಿದೆ. ಈ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರ ಮತ್ತು ಮೊಹಮ್ಮದ್ ಶಮಿ ಇಬ್ಬರ ಅನುಪಸ್ಥಿತಿ ಇದೆ. ಜಸ್ಪ್ರೀತ್ ಬುಮ್ರ ಅವರು ಇಂಜೂರಿ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಈ ಸಮಯದಲ್ಲಿ ಭಾರತ ತಂಡ ಶಮಿ ಅವರನ್ನು ಪರಿಗಣಿಸಲಿಲ್ಲ. ಬೇರೆ ಆಟಗಾರರು ಈಗ ಭಾರತ ಕ್ರಿಕೆಟ್ ತಂಡದಲ್ಲಿದ್ದಾರೆ. ಇದೀಗ ಸಿ.ಎಸ್.ಕೆ ತಂಡದ ಬೌಲಿಂಗ್ ಕೋಚ್ ಬಾಲಾಜಿ ಅವರು ಇದರ ಬಗ್ಗೆ ಮಾತನಾಡಿದ್ದು, ದೀಪಕ್ ಚಹಾರ್ ಅವರನ್ನು ಈ ಸಮಯದಲ್ಲಿ ಭಾರತ ತಂಡದ ಪರವಾಗಿ ಆಯ್ಕ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.

“ಯುಎಇ ನಲ್ಲಿ ಆಪೋಸಿಟ್ ತಂಡದ ವಿರುದ್ಧ ನಡೆಯುವ ಪಂದ್ಯಗಳಿಗೆ, ಆರಂಭಿಕ ಓವರ್ ಗಳಲ್ಲಿ ವಿಕೆಟ್ಸ್ ಪಡೆಯುವ ಬೌಲರ್ ಬೇಕು. ಹೊಸ ಚೆಂಡಿನ ಕೌಶಲ್ಯತೆ ಇರಬೇಕು. ಈ ಸಮಯದಲ್ಲಿ ದೀಪಕ್ ಚಹಾರ್ ಅವರನ್ನು ಆಯ್ಕೆಮಾಡಿಕೊಳ್ಳಬಹುದಿತ್ತು, ಅವರು ಆರಂಭಿಕ ಓವರ್ ಗಳಲ್ಲಿ ವಿಕೆಟ್ ಪಡೆಯುತ್ತಾರೆ. ಆದರೆ ಈಗಾಗಲೇ ಸಾಕಷ್ಟು ಬೌಲರ್ ಗಳಿದ್ದು, ಅವರ ನಡುವೆ ಪೈಪೋಟಿ ಇದೆ. ಬುಮ್ರ ಮತ್ತು ಶಮಿ ಕೆಲಸವನ್ನು ಚಹಾರ್ ಮಾಡುತ್ತಾರೆ. ಗಾಯದ ಕಾರಣ ದೀಪಕ್ ಚಹಾರ್ 6 ತಿಂಗಳ ಕಾಲ ಹೊರಗೆ ಇರುವ ಹಾಗೆ ಆಯಿತು. ಅವರು ಕಠಿಣ ಪರಿಶ್ರಮ ಹಾಕುವ ಆಟಗಾರ, ಗಾಯದಿಂದ ಈಗ ಬಹಳಷ್ಟು ಸುಧಾರಣೆ ಕಂಡಿದ್ದಾರೆ..

ಬೇರೆಯವರಿಗೆ ಅವಕಾಶ ಸಿಕ್ಕಿರುವುದರಿಂದ ಚಹಾರ್ ಅವಕಾಶಕ್ಕಾಗಿ ಕಾಯಬೇಕು. ಇವರು ಯಾವಾಗಲೂ ಕೆಲಸ ಮಾಡುತ್ತಾರೆ. ವೇಗಿ ಬೌಲರ್ ಗಳ ವಿಚಾರದಲ್ಲಿ ಇವರು ಅಸಾಧಾರಣ ಪ್ಲೇಯರ್..” ಎಂದು ಹೇಳಿದ್ದಾರೆ. ಇನ್ನು ದೀಪಕ್ ಚಹಾರ್ ಅವರು ಜಿಂಬಾಬ್ವೆ ವಿರುದ್ಧದ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ 3 ವಿಕೆಟ್ ಗಳನ್ನು ಪಡೆದು, ಉತ್ತಮ ಪ್ರದರ್ಶನ ನೀಡಿದರು. ಆದರೆ 2ನೇ ಪಂದ್ಯಕ್ಕೆ ಅವರನ್ನು ಹೊರಗಿಡಲಾಯಿತು. ಬಳಿಕ 3ನೇ ಹಾಗೂ ಕೊನೆಯ ಪಂದ್ಯಕ್ಕೆ ಕಂಬ್ಯಾಕ್ ಮಾಡಿ, ಇನ್ನೆರಡು ವಿಕೆಟ್ ಗಳನ್ನು ಪಡೆದರು. ಆದರೆ ಏಷ್ಯಾಕಪ್ ಪಂದ್ಯಗಳಿಂದ ಚಹಾರ್ ಅವರನ್ನು ಹೊರಗೆ ಇಟ್ಟಿರುವುದು ಅಭಿಮಾನಿಗಳ ಕೋಪಕ್ಕೂ ಕಾರಣವಾಗಿದೆ..

Get real time updates directly on you device, subscribe now.