ನಿಮ್ಮಲ್ಲಿ ಗುಣಗಳಿದ್ದರೆ ಸಾಕು, ಶನಿ ದೇವನ ಕೃಪೆ ನಿಮ್ಮ ಮೇಲಿರುತ್ತದೆ, ಬೇರೆ ಏನು ಬೇಡ, ಜಸ್ಟ್ ಹೀಗೆ ಮಾಡಿ ಸಾಕು.
ಈ ಭೂಮಂಡಲದಲ್ಲಿ ಶನಿದೇವರನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಒಬ್ಬ ಮನುಷ್ಯಬ ಕರ್ಮದ ಅನುಸಾರ ಶನಿದೇವರು ಪ್ರತಿಯೊಬ್ಬರಿಗೂ ಕರ್ಮದ ಫಲವನ್ನು ನೀಡುತ್ತಾನೆ. ಜೀವಿತಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ಶನಿದೇವರು ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಆದರೆ ತಪ್ಪುಗಳನ್ನೇ ಮಾಡುತ್ತಾ ಬರುವವರ ಮೇಲೆ ಶನಿದೇವರ ವಕ್ರ ದೃಷ್ಟಿ ಶುರುವಾಗುತ್ತದೆ. ಒಂದು ವೇಳೆ ಶನಿದೇವರ ವಕ್ರದೃಷ್ಟಿ ಶುರುವಾದರೆ, ಆ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ತಾನು ಮಾಡುವ ಕೆಲಸದ ಮೇಲೆ ಕಾಳಜಿ ವಹಿಸಬೇಕು.
ಒಂದು ವೇಳೆ ಒಬ್ಬ ವ್ಯಕ್ತಿ ಮಾಡುವ ಒಳ್ಳೆಯ ಕೆಲಸದಿಂದ ಶನಿದೇವರ ಆಶೀರ್ವಾದ ಆತನಿಗೆ ಲಭಿಸಿದರೆ, ಆ ವ್ಯಕ್ತಿ ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುವುದಿಲ್ಲ. ನೀವು ಶನಿದೇವರ ಆಶೀರ್ವಾದ ಮತ್ತು ಅನುಗ್ರಹವನ್ನು ಯಾವ ರೀತಿ ಪಡೆಯಬಹುದು ಎಂದು ಇಂದು ತಿಳಿಸುತ್ತೇವೆ ನೋಡಿ…
*ಹಿರಿಯರ ಶ್ರಾದ್ಧ ಮಾಡುವವರ ಮೇಲೆ ಶನಿದೇವರ ಕೃಪೆ ಇರುತ್ತದೆ. ಪೂರ್ವಜರಿಗೆ ಶ್ರಾದ್ಧ ಮಾಡುವುದರಿಂದ ಶನಿದೇವರು ಸಂತುಷ್ಟನಾಗುತ್ತಾನೆ. ಹಾಗಾಗಿ ಪಿತೃಪಕ್ಷದ ಶನಿವಾರ, ಮತ್ತು ಅಮಾವಾಸ್ಯೆ ದಿನದಂದು ಶನಿಯ ಆರಾಧನೆ ಮಾಡುವುದು ಒಳ್ಳೆಯದು.
*ಶನಿದೇವರಿಗೆ ಸ್ವಚ್ಛತೆ ಅಂದ್ರೆ ಬಹಳ ಇಷ್ಟ, ಹಾಗಾಗಿ ನಿಮ್ಮ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ದೈಹಿಕವಾಗಿ ಆರೋಗ್ಯದಿಂದ ಇರಿ. ಆಗಾಗ ಉಗುರುಗಳನ್ನು ಸ್ವಚ್ಛ ಮಾಡಿ, ಉಗುರು ಬೆಳೆಯಲು ಬಿಡಬೇಡಿ. ಶುಚಿಯಾಗಿ ಸದಾ ಇರುವವರಿಗೆ ಶನಿದೇವರು ತೊಂದರೆ ಕೊಡುವುದಿಲ್ಲ.
*ಅರಳಿ ಮರದ ಕೆಳಗೆ ಶನಿವಾರ ದೀಪಾ ಹಚ್ಚುತ್ತಾರೆ, ಯಾಕೆಂದರೆ ಅರಳಿ ಮರಕ್ಕೆ ಪೂಜೆ ಮಾಡುವುದರಿಂದ ಶನಿದೇವರಿಗೆ ಸಂತೋಷ ಆಗುತ್ತದೆ ಎಂದು ಹೇಳುತ್ತಾರೆ. ಅರಳಿ ಗಿಡವನ್ನು ನೆಡುವುದರಿಂದ ಸಹ ಶನಿದೇವರಿಗೆ ಸಂತೋಷವಾಗಿ, ಅವರ ಆಶೀರ್ವಾದ ದೊರೆಯುತ್ತದೆ.
*ಶನಿವಾರದ ದಿನ ನೀವು ಉಪವಾಸ ಮಾಡಿ ಶನಿದೇವರ ಆಶೀರ್ವಾದ ಪಡೆಯಬಹುದು. ಈ ದಿನ ಕಷ್ಟದಲ್ಲಿ ಇರುವವರಿಗೆ, ಹಾಗೂ ನಿರ್ಗತಿಕರಿಗೆ ದಾನ ಮಾಡುವುದರಿಂದಾಗಿ ಶನಿದೇವರ ಆಶೀರ್ವಾದದ ಮಳೆ ನಿಮ್ಮ ಮೇಲೆ ಹರಿಯುತ್ತದೆ. ನಿಮ್ಮ ಮನೆಯಲ್ಲಿ ಯಾವುದಕ್ಕೂ ಕೊರತೆ ಆಗುವುದಿಲ್ಲ.