ದಾಂಪತ್ಯ ಜೀವನಕ್ಕೆ ಕಾಲಿಟ್ಟ ರವಿಚಂದ್ರನ್ ರವರ ಪುತ್ರ ಮನೋರಂಜನ್: ಹೇಗಿತ್ತು ಗೊತ್ತೇ ಸಂಭ್ರಮ??
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ರವಿಚಂದ್ರನ್ ಅವರ ಮದುವೆ ಇಂದು ನೆರವೇರಿದೆ. ರವಿಚಂದ್ರನ್ ಅವರು ಅದ್ಧೂರಿಯಾಗಿ ಮಗನ ಮದುವೆ ಮಾಡಿದ್ದಾರೆ. ಸಂಗೀತ ಎನ್ನುವ ಹುಡುಗಿಯ ಜೊತೆಗೆ ಮಗನ ಮಾಡಿದ್ದಾರೆ ಕ್ರೇಜಿಸ್ಟಾರ್. ಶನಿವಾರ ಸಂಜೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಮನೋರಂಜನ್ ಸಂಗೀತ ದಂಪತಿಯ ಆರತಕ್ಷತೆ ಅದ್ಧೂರಿಯಾಗಿ ನಡೆದಿದ್ದು, ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಹಾಗು ಕ್ರೇಜಿಸ್ಟಾರ್ ಅವರ ಆಪ್ತರು ಮದುವೆಯಲ್ಲಿ ಭಾಗಿಯಾಗಿದ್ದರು.
ನಟ ಶಿವ ರಾಜ್ ಕುಮಾರ್ ಅವರ ಕುಟುಂಬ, ರಾಘವೇಂದ್ರ ರಾಜ್ ಕುಮಾರ್ ಅವರ ಕುಟುಂಬ, ನಟ ಖುಷ್ಬೂ ಹಾಗೂ ಕನ್ನಡ ಮತ್ತು ಬೇರೆ ಭಾಷೆಯ ಗಣ್ಯರಿಗೆ ಆಮಂತ್ರಣ ನೀಡಲಾಗಿತ್ತು. ಇಂದು ಭಾನುವಾರ ಸಂಗೀತ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ ಮನೋರಂಜನ್. ಈ ಜೋಡಿಯ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ನಾಳೆ ನಂದಿ ಬೆಟ್ಟದ ಬಳಿ ಇರುವ ಐಷಾರಾಮಿ ಹೋಟೆಲ್ ನಲ್ಲಿ ಮತ್ತೊಂದು ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಗೆ ಸಾಕಷ್ಟು ಗಣ್ಯರು ಆಗಮಿಸುತ್ತಾರೆ ಎನ್ನಲಾಗಿದೆ.
ಮನೋರಂಜನ್ ಅವರು ಮದುವೆ ಆಗಿರುವ ಹುಡುಗಿ ಸಂಗೀತ, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮನೋರಂಜನ್ ಅವರು ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ, ಸಾಹೇಬ, ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮನೋರಂಜನ್. 2019ರಲ್ಲಿ ರವಿಚಂದ್ರನ್ ಅವರು ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು. ರವಿಚಂದ್ರನ್ ಅವರ ಎರಡನೇ ಮಗ, ವಿಕ್ರಂ ರವಿಚಂದ್ರನ್ ಅವರು ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.