ಏಷ್ಯಾ ಕಪ್ ನಲ್ಲಿ ಬದಲಾವಣೆ ಮೇಲೆ ಬದಲಾವಣೆ: ಈ ಬಾರಿಯ ಟೂರ್ನಿಯಲ್ಲಿ ಏನೆಲ್ಲಾ ಬದಲಾಗಲಿದೆ ಗೊತ್ತೇ??

27

Get real time updates directly on you device, subscribe now.

ಪ್ರಸ್ತುತ ಕ್ರಿಕೆಟ್ ಪ್ರೇಮಿಗಳ ಕಣ್ಣು ಏಷ್ಯಾಕಪ್ ಮೇಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾಕಪ್ ಪಂದ್ಯಗಳು ಶುರುವಾಗಲಿದ್ದು, ಈಗಾಗಲೇ ಆಯ್ಕೆ ಸಂಸ್ಥೆಯು ಏಷ್ಯಾಕಪ್ ಗೆ ಸೆಲೆಕ್ಟ್ ಆಗಿರುವ 15 ಆಟಗಾರರ ತಂಡವನ್ನು ಪ್ರಕಟಣೆ ಮಾಡಿದೆ. ಆಯ್ಕೆ ಪ್ರಕ್ರಿಯೆ ಬೇರೆ ರೀತಿಯೇ ಆಗಿದ್ದರು ಸಹ, ಎಲ್ಲರೂ ಈಗ ಪಂದ್ಯಗಳು ಶುರುವಾಗಿ, ಭಾರತ ತಂಡದ ಪ್ರದರ್ಶನ ಹೇಗಿರುತ್ತದೆ ಎಂದು ನೋಡಲು ಕಾಯುತ್ತಿದ್ದಾರೆ. ಈ ಪಂದ್ಯಗಳು ಕೊನೆಯದಾಗಿ ನಡೆದಿದ್ದು 2018 ರಲ್ಲಿ, 2020ರಲ್ಲಿ ಮತ್ತೊಮ್ಮೆ ನಡೆಯಬೇಕಿದ್ದ ಏಷ್ಯಾಕಪ್, ಕರೊನಾ ಕಾರಣದಿಂದ ಆಗ ನಡೆಯದೆ, ಎರಡು ವರ್ಷಗಳ ಬಳಿಕ ನಡೆಯುತ್ತಿದೆ. ಈಗ ಏಷ್ಯಾಕಪ್ ನಲ್ಲಿ ಏನೆಲ್ಲಾ ಬದಲಾವಣೆಗಳು ಆಗಿದೆ ಎಂದು ತಿಳಿಸುತ್ತೇವೆ ನೋಡಿ..

ಏಷ್ಯಾಕಪ್ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಬೇಕಿತ್ತು, ಆದರೆ ಅಲ್ಲಿ ಆರ್ಥಿಕ ಬಿಕ್ಕಟ್ಟು ನಡೆಯುತ್ತಿರುವ ಕಾರಣ, ಪಂದ್ಯಗಳು ಕೊನೆಯ ಕ್ಷಣದಲ್ಲಿ ಯುಎಇ ಗೆ ಶಿಫ್ಟ್ ಆಗಿದೆ. ಇಷ್ಟು ಸಮಯ ಓಡಿಐ ಪಂದ್ಯಗಳ ಮೂಲಕ ಏಷ್ಯಾಕಪ್ ನಡೆಯುತ್ತಿತ್ತು, ಆದರೆ ಈಗ ಟಿ20 ವಿಶ್ವಕಪ್ ಗಿಂತ ಮೊದಲು ಏಷ್ಯಾಕಪ್ ನಡೆಯುತ್ತಿರುವ ಕಾರಣ, ಟಿ20 ರೀತಿಯಲ್ಲಿ ನಡೆಯಲಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 11ರ ವರೆಗೂ ಏಷ್ಯಾಕಪ್ ಪಂದ್ಯಾವಳಿ ನಡೆಯಲಿದೆ. 6 ತಂಡಗಳು ಕಣಕ್ಕೆ ಇಳಿಯಲಿದ್ದು, 5 ತಂಡ ಈಗಾಗಲೇ ಸೆಲೆಕ್ಟ್ ಆಗಿ, 6ನೇ ತಂಡ ಸೆಲೆಕ್ಟ್ ಅರ್ಹತಾ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಪಾಲ್ಗೊಳ್ಳುವ 6 ತಂಡಗಳನ್ನು 2 ಗುಂಪುಗಳಾಗಿ ಮಾಡಿದ್ದು, ಒಂದೊಂದು ಗುಂಪಿನಲ್ಲಿ 3 ತಂಡಗಳಿವೆ.

ಪ್ರತಿ ಗುಂಪಿನ ಒಂದೊಂದು ತಂಡವು, ಎರಡು ತಂಡಗಳ ವಿರುದ್ಧ ಒಂದು ಪಂದ್ಯ ಆಡಲಿದೆ. ಈ ಮೂಲಕ ಅಗ್ರಸ್ಥಾನದಲ್ಲಿ ಬರುವ 2 ತಂಡಗಳು, ಸೂಪರ್ 4 ಹಂತವನ್ನು ತಲುಪುತ್ತವೆ. ಈ ಹಂತದಲ್ಲಿ ಎಲ್ಲ ತಂಡವು ಇತರ ಮೂರು ತಂಡಗಳ ವಿರುದ್ಧ ಒಂದು ಪಂದ್ಯ ಅಡುತ್ತದೆ. ಇದರಲ್ಲಿ 2 ತಂಡಗಳು ಫೈನಲ್ ಪ್ರವೇಶ ಪಡೆದು, ಫೈನಲ್ ತಲುಪುತ್ತದೆ. ಸೆಪ್ಟೆಂಬರ್ 11ರಂದು ಫೈನಲ್ಸ್ ಪಂದ್ಯ ನಡೆಯಲಿದೆ. ಭಾರತ ಪಾಕಿಸ್ತಾನದ ನಡುವೆ 2 ಪಂದ್ಯಗಳು ನಡೆಯುತ್ತದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ್ ಮತ್ತು ಕ್ವಾಲಿಫೈಯರ್ ತಂಡ ಇರುತ್ತದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಗಾನಿಸ್ತಾನ್ ತಂಡ ಇದೆ. ಇದಕ್ಕಿಂತ ಮೊದಲು ಜಿಂಬಾಬ್ವೆ ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಅದಕ್ಕೆ ಕೆ.ಎಲ್.ರಾಹುಲ್ ನಾಯಕತ್ವದ ಭಾರತ ತಂಡ ಈಗಾಗಲೇ ಜಿಂಬಾಬ್ವೆ ತಲುಪಿದೆ. ಈ ಪಂದ್ಯಗಳು ಮುಗಿದ ಬಳಿಕ, ದುಬೈ ಗೆ ಹಾರಲಿದ್ದಾರೆ ರಾಹುಲ್.

Get real time updates directly on you device, subscribe now.