ತೆಳ್ಳಗಿನ ಸೀರೆಯಲ್ಲಿ ಕಾಣಿಸಿಕೊಂಡು ಇಂಟರ್ನೆಟ್ ಅನ್ನು ಶೇಕ್ ಮಾಡಿದ ರಮ್ಯಾ ಕೃಷ್ಣ: ಸೌಂರ್ದರ್ಯ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು. ಹೇಗಿದೆ ಗೊತ್ತೇ ವಿಡಿಯೋ??

47

Get real time updates directly on you device, subscribe now.

ಒಂದು ಕಾಲದಲ್ಲಿ ಹಿರಿಯ ನಟಿಯಾಗಿದ್ದ ರಮ್ಯಾ ಕೃಷ್ಣ ತಮ್ಮ ಸೌಂದರ್ಯದಿಂದಲೇ ಹುಡುಗರ ಮನ ಕದ್ದ ಮುದ್ದು ನಟಿ. ಇವರು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಮ್ಯಾ ಕೃಷ್ಣ ನಾಯಕಿಯಾಗಿ ಮಾತ್ರವಲ್ಲದೆ ಖಳನಾಯಕಿಯಾಗಿಯೂ ರಂಜಿಸಿದ್ದಾರೆ. ನೀಲಾಂಬರಿಯಾಗಿ, ಶಿವಗಾಮಿಯಾಗಿ, ಯಾವುದೇ ಪಾತ್ರದ ಪರಕಾಯ ಪ್ರವೇಶಿಸಿ ಆ ಪಾತ್ರಕ್ಕೆ ಹೊಸ ಅರ್ಥವನ್ನು ನೀಡುತ್ತಾರೆ. ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ರಂಜಿಸಿದ ರಮ್ಯಾ ಕೃಷ್ಣ ಬಂಗಾರ್ರಾಜು ಅಂತಹ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಸದ್ದು ಮಾಡಿದ್ದರು. ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗ್ನಾಥ್ ನಿರ್ದೇಶನದ ಇತ್ತೀಚಿನ ಸಿನಿಮಾ ಲೈಗರ್ ನಲ್ಲಿ ಅವರು ಮತ್ತೊಂದು ಶಕ್ತಿಶಾಲಿ ಪಾತ್ರದ ಮೂಲಕ ತೆರೆಮೇಲೆ ಬರಲಿದ್ದಾರೆ.

ಲೈಗರ್ ಸಿನಿಮಾಗೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟೀಸರ್ ಚಿತ್ರದ ಬಗ್ಗೆ ಮತ್ತಷ್ಟು ಹೈಪ್ ತಂದಿದೆ. ರಿಲೀಸ್ ಆಗಿರುವ ಟ್ರೈಲರ್ ಸಿನಿಮಾ ರೇಂಜ್ ಏನು ಎನ್ನುವುದನ್ನು ತೋರಿಸಿದೆ. ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ಟ್ರೇಲರ್‌ ನಲ್ಲಿ ವಿಜಯ್ ಅವರ ಮೇಕ್ ಓವರ್ ಮತ್ತು ಡೈಲಾಗ್ ಡೆಲಿವರಿ ಪ್ರೇಕ್ಷಕರನ್ನು ಆಕರ್ಷಿಸಿತು. ಮತ್ತೊಂದೆಡೆ, ನೆಟ್ಟಿಗರು ಹಿರಿಯನಟಿ ರಮ್ಯಾ ಕೃಷ್ಣ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊಗಳುತ್ತಿದ್ದಾರೆ. ಇದರಲ್ಲಿ ವಿಜಯ್ ಅವರ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಮ್ಯಾ ಕೃಷ್ಣ ಜೊತೆಗೆ ವಿಜಯ್ ಮತ್ತು ಅನನ್ಯಾ ಪಾಂಡೆ ಇತ್ತೀಚಿನ ಫೋಟೋಗಳಿಗೆ ಪೋಸ್ ನೀಡಿದ್ದು, ರಮ್ಯಾ ಕೃಷ್ಣ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಟುಡಿಯೋ ಹೊರಗೆ ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿದ್ದಂತೆ ಸ್ಟುಡಿಯೋದಲ್ಲಿ ಕ್ರೇಜ್ ಹೆಚ್ಚಾಗಿತ್ತು. ತೆಳ್ಳಗಿನ ಸೀರೆಯುಟ್ಟ ರಮ್ಯಕೃಷ್ಣರ ಸೊಬಗು ಮೈಮರೆಯುವ ಹಾಗಿತ್ತು. ಶಿವಗಾಮಿ ಪಾತ್ರದ ನಟಿ ಸೀರೆಯನ್ನು ಅಡ್ಜಸ್ಟ್ ಮಾಡಿಕೊಂಡು ಕೂದಲನ್ನು ಸರಿಪಡಿಸಿಕೊಂಡಾಗ ಇನ್ನು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಗಾಳಿಗೆ ಸೀರೆ ಹಾರಿದರಿಂದ ನಟಿ ರಮ್ಯಕೃಷ್ಣ ಕೊಂಚ ಮುಜುಗರಕ್ಕೊಳಗಾದಂತಿದೆ. ಇದರಲ್ಲಿ ನೀಲಿ ಮತ್ತು ಕೆಂಪು ಮಿಶ್ರಿತ ಡಿಸೈನರ್ ಸೀರೆಯಲ್ಲಿ ರಮ್ಯಕೃಷ್ಣ ಮಿಂಚಿದ್ದಾರೆ. ಈ ಸೀರೆ ಜಾರುತ್ತಿರುವಾಗ ರಮ್ಯಕೃಷ್ಣ ಸಂಕಷ್ಟದಲ್ಲಿರುವ ಪೋಸ್‌ಗಳು ನೆಟ್ಟಿಗರ ಹುಚ್ಚೆಬ್ಬಿಸುತ್ತಿವೆ. ಆದರೆ ಈ ವಯಸ್ಸಿಗೆ ಇಂತಹ ಸೌಂದರ್ಯ ಬೇಕೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ರಮ್ಯಾ ಕೃಷ್ಣ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Get real time updates directly on you device, subscribe now.