ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮರ್ಮಾಘಾತ? ಭಾರತ ವಿರುದ್ದದ ಪಂದ್ಯಕ್ಕೂ ಮುನ್ನವೇ ಬಲಾಢ್ಯ ಆಟಗಾರ ಔಟ್. ಯಾಕೆ ಗೊತ್ತೇ?

8

Get real time updates directly on you device, subscribe now.

ಎಲ್ಲಾ ಕ್ರಿಕೆಟ್ ಪ್ರಿಯರ ಕಣ್ಣು ಈಗ ಏಷ್ಯಾಕಪ್ ಪಂದ್ಯಗಳ ಮೇಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಏಷ್ಯಾಕಪ್ ಪಂದ್ಯಗಳು ಯು.ಎ.ಇ ನಲ್ಲಿ ಶುರುವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಗಳು ಯು.ಎ.ಇ ಗೆ ಶಿಫ್ಟ್ ಆಗಿದೆ. ಆಗಸ್ಟ್ 28ರಂದು ಭಾರತದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡ ಭರ್ಜರಿಯಾಗಿ ತಯಾರಿ ನಡೆಸಿದೆ. ಈಗಾಗಲೇ ಬಿಸಿಸಿಐ ಏಷ್ಯಾಕಪ್ ನಲ್ಲಿ ಆಡುವ ತಂಡದ ಪ್ಲೇಯರ್ ಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ.

ಆದರೆ ಈ ಸಮಯದಲ್ಲಿ ಪಾಕಿಸ್ತಾನ್ ತಂಡಕ್ಕೆ ದೊಡ್ಡ ಆಘಾತ ನಡೆದಿದೆ. ಅದೇನೆಂದರೆ, ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯಗಳಲ್ಲಿ ಪಾಕಿಸ್ತಾನದ ಬಲಿಷ್ಠ ಆಟಗಾರ, ಪಂದ್ಯ ಶುರುವಾಗುವ ಮೊದಲೇ ತಂಡದಿಂದ ಹೊರಬಂದಿದ್ದಾರೆ. ಪಾಕಿಸ್ತಾನ್ ತಂಡದ ಸ್ಟಾರ್ ಬೌಲರ್ ಆಗಿರುವ ಶಾಹೀನ್ ಅಫ್ರಿದಿ ಅವರು ಏಷ್ಯಾಕಪ್ ನಲ್ಲಿ ಪಾಕಿಸ್ತಾನ್ ತಂಡದಲ್ಲಿ ಆಡಲು ಸಾಧ್ಯ ಆಗುವುದಿಲ್ಲ ಎನ್ನಲಾಗಿದೆ. ಅದಕ್ಕೆ ಕಾರಣ ಏನೆಂದರೆ, ಶಾಹೀನ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಅದರಿಂದ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ.

ಗಾಯದಿಂದ ಚೇತರಿಸಿಕೊಳ್ಳಲು ಶಾಹೀನ್ ಅಫ್ರಿದಿ ಅವರಿಗೆ ಇನ್ನು ಸಮಯ ಬೇಕು ಎಂದು ವೈದ್ಯರು ತಿಳಿಸಿದ್ದು, ಅದರಿಂದಾಗಿ, ಅವರು ಏಷ್ಯಾಕಪ್ ನ ಭಾರತದ ಜೊತೆಗಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಇದರ ಬಗ್ಗೆ ಪಾಕಿಸ್ತಾನ್ ತಂಡದ ಕ್ಯಾಪ್ಟನ್ ಬಾಬರ್ ಆಜಮ್ ಅವರು ಮಾತನಾಡಿ, ವೈದ್ಯರು ಅಫ್ರಿದಿ ಅವರ ಕಡೆಗೆ ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಭಾರತ ತಂಡಕ್ಕೆ ದೊಡ್ಡ ಪ್ಲಸ್ ಆಗುವುದರಲ್ಲಿ ಸಂದೇಹ ಇಲ್ಲ ಎನ್ನುತ್ತಿವೆ ಮೂಲಗಳು.

Get real time updates directly on you device, subscribe now.