ಹುಡುಗುರ ಹೃದಯ ಕದಿಯುವಂತೆ ದುಬಾರಿ ಸೀರೆಯಲ್ಲಿ ಮಿಂಚಿದ ನಮ್ರತಾ ಗೌಡ: ಈ ಸೀರೆಯ ಬೆಲೆ ಎಷ್ಟು ಗೊತ್ತೇ??

36

Get real time updates directly on you device, subscribe now.

ನಾಗಿಣಿ ಸೀರಿಯಲ್ ಮೂಲಕ ಸಧ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿರುವ ನಟಿ ನಮ್ರತಾ ಗೌಡ. ನಾಗಿಣಿ ಧಾರಾವಾಹಿಯಲ್ಲಿ ಪಾತ್ರಕ್ಕೆ ತಕ್ಕಂತೆ ಇವರು ಧರಿಸುವ ಉಡುಪುಗಳು ಹಾಗೂ ಅಲಂಕಾರಿಕ ವಸ್ತುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾಗಿಣಿ ಪಾತ್ರದಲ್ಲಿ ಬಹಳ ಟ್ರಡಿಷನಲ್ ಉಡುಪಿನಲ್ಲಿ ಆಧುನಿಕವಾದ ಆಭರಣಗಳನ್ನು ಧರಿಸಿ ಬಹಳ ಟ್ರೆಂಡಿ ಆಗಿ ಕಾಣಿಸಿಕೊಳ್ಳುತ್ತಾರೆ ನಮ್ರತಾ. ನಮ್ರತಾ ಅವರು ಹೇಳುವ ಪ್ರಕಾರ ನಾಗಿಣಿ ಅವರ ಡ್ರೀಮ್ ರೋಲ್ ಅಂತೆ. ಹಾಗಾಗಿ ಬಹಳ ಸಂತೋಷದಿಂದ ಆಸಕ್ತಿಯಿಂದ ನಟಿಸುತ್ತಿದ್ದಾರೆ ನಮ್ರತಾ.

ಈ ಹಿಂದೆ ನಮ್ರತಾ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ನಟಿಸಿದ್ದರು. ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಕೂಡ ಬಹಳ ಜನಪ್ರಿಯತೆ ಗಳಿಸಿದ್ದರು ನಮ್ರತಾ. ನಮ್ರತಾರಿಗೆ ಬಣ್ಣದ ನಂಟು ಹೊಸದಲ್ಲ. ಈ ಹುಡುಗಿ ಮೂರು ವರ್ಷದವರಿದ್ದಾಗಲೇ ನಟನೆ ಆರಂಭಿಸಿದ್ದಾರೆ. ಇಂದು ಶಿವಾನಿ ಪಾತ್ರದ ಮೂಲಕ ಭಾರಿ ಫೇಮಸ್ ಆಗಿದ್ದಾರೆ. ಇವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಫೋಟೋಗಳು ಅದರಲ್ಲಿ ಧರಿಸುವ ಡ್ರೆಸ್ ಗಳು ಇದೆಲ್ಲವೂ ಸಹ ಭಾರಿ ವೈರಲ್ ಆಗುತ್ತದೆ. ಇತ್ತೀಚೆಗೆ ನಡೆದ ವರಮಹಾಲಕ್ಷ್ಮಿ ಹಬ್ಬದಂದು ನಮ್ರತಾ ಅವರು ಧರಿಸಿದ್ದ ಸೀರೆ ಬಹಳಷ್ಟು ಜನರನ್ನು ಆಕರ್ಷಿಸಿತ್ತು.

ನಮ್ರತಾ ಅವರು ಸ್ಟೈಲ್ ಐಕಾನ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸೀರೆ ಅಥವಾ ಇನ್ಯಾವುದೇ ಮಾಡರ್ನ್ ಡ್ರೆಸ್ ಆಗಲಿ, ನಮ್ರತಾ ಧರಿಸಿದರೆ ಬಹಳ ಸುಂದರವಾಗಿ ಕಾಣುತ್ತಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಇವರು ಧರಿಸಿದ್ದ ಸೀರೆಯನ್ನು, ಹಾಗೂ ಅದರ ಬ್ಲೌಸ್ ಅನ್ನು ಸ್ವಿಚ್ ಮಾಡಿಸಿದ್ದ ಬೆಂಗಾಲಿ ಸ್ಟೈಲ್, ಬೆಂಗಾಲಿ ಬಫ್ ಎಲ್ಲವು ಸಹ ಜನರನ್ನು ಆಕರ್ಷಿಸಿದ್ದು, ಅದರ ಬೆಲೆ ಎಷ್ಟು ಎಂದು ತಿಳಿಯಲು ಜನರು ಉತ್ಸುಕರಾಗಿದ್ದಾರೆ. ನಮ್ರತಾ ಅವರು ತಾವು ಯಾವಾಗಲೂ ಸ್ವಿಚ್ ಮಾಡಿಸುವ ಟೈನಾಟ್ ಫ್ಯಾಶನ್ ಸಂಸ್ಥೆಯಲ್ಲಿ ಬ್ಲೌಸ್ ಸ್ವಿಚ್ ಮಾಡಿಸಿದ್ದು, ಆ ಬ್ಲೌಸ್ ನ ಬೆಲೆ 1,500 ರೂಪಾಯಿ ಆಗಿದೆ. ನೀವು ಕೂಡ ಸುಲಭವಾಗಿ ಇದನ್ನು ಪಡೆಯಬಹುದು.

Get real time updates directly on you device, subscribe now.