ನಿಮ್ಮ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ಇರಬೇಕು ಎಂದರೆ ಮಲಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ ಸಾಕು. ಜೀವನದಲ್ಲಿ ಹಣ ಐಶ್ವರ್ಯ ತುಂಬಿ ತುಳುಕುತ್ತದೆ.
ಎಲ್ಲಾ ಮನುಷ್ಯರು ಕಷ್ಟಪಡುವುದು ಒಳ್ಳೆಯ ಜೀವನ ನಡೆಸುವ ಸಲುವಾಗಿ. ಜೀವನದಲ್ಲಿ ಚೆನ್ನಾಗಿರಬೇಕು, ಸುಖ ಶಾಂತಿ ಇರಬೇಕು ಎಂದರೆ ಭೌತಿಕ ಪ್ರಪಂಚದಲ್ಲಿ ಚೆನ್ನಾಗಿರಬೇಕು ಎಂದರೆ ಲಕ್ಷ್ಮೀದೇವಿಯ ಕೃಪೆ ಬಹಳ ಮುಖ್ಯವಾದದ್ದು. ಲಕ್ಷ್ಮೀದೇವಿಯ ಕೃಪೆ ಇದ್ದರೆ ನೀವು ಜೀವನದಲ್ಲಿ ಯಶಸ್ಸು ಗಳಿಸಬಹುದು. ನೀವು ಅಂದುಕೊಂಡಿದ್ದೆಲ್ಲವನ್ನು ಸಂಪಾದಿಸಿಕೊಳ್ಳಬಹುದು. ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಜನರು ಅನೇಕ ಪೂಜೆ ಪುನಸ್ಕಾರ, ವ್ರತಗಳನ್ನು ಮಾಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಕೆಲವು ಮಾರ್ಗಗಳಿವೆ, ಅವುಗಳನ್ನು ಅನುಸರಿಸಿದರೆ ಸಾಕು, ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ದೊರೆಯುತ್ತದೆ.
ಲಕ್ಷ್ಮೀದೇವಿಯ ಕೃಪೆ ಪಡೆಯಲು ನೀವು, ಪ್ರತಿದಿನ ರಾತ್ರಿ ಮಲಾಗುವುದಕ್ಕಿಂತ ಮೊದಲು ಕೆಲವು ಕೆಲಸಗಳನ್ನು ಮಾಡಿ. ಆ ರೀತಿ ಮಾಡುವುದರಿಂದ ಲಕ್ಷ್ಮಿದೇವಿಗೆ ಸಂತೋಷವಾಗುತ್ತದೆ, ಹಾಗೂ ಲಕ್ಷ್ಮೀದೇವಿಯ ಕೃಪೆ ನಿಮಗೆ ಸಿಗುತ್ತದೆ. ಅವುಗಳನ್ನು ಈಗ ನಿಮಗೆ ತಿಳಿಸುತ್ತೇವೆ.. ರಾತ್ರಿ ಮಲಗುವ ಮೊದಲು ನಿಮ್ಮ ಸ್ನಾನಗೃಹದಲ್ಲಿ ಒಂದು ಬಕೆಟ್ ನಲ್ಲಿ ನೀರು ತುಂಬಿಸಿ, ಇಡಿ. ಇದು ಲಕ್ಷ್ಮಿದೇವಿಯನ್ನು ಸಂತೋಷಪಡಿಸುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ.
ರಾತ್ರಿ ಮಲಾಗುವುದಕ್ಕಿಂತ ಮೊದಲು ನಿಮ್ಮ ಅಡುಗೆ ಮನೆಯಲ್ಲಿ ಒಂದು ಬಕೆಟ್ ನೀರನ್ನು ತುಂಬಿಸಿ ಇಡಿ. ಈ ರೀತಿ ಮಾಡುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಹಣದ ಸಮಸ್ಯೆ ಇರುವವರಿಗೆ ಎಲ್ಲಾ ರೀತಿಯಲ್ಲೂ ಅದು ಬಗೆಹರಿಯುತ್ತದೆ. ವಾಸ್ತು ಪ್ರಕಾರ, ಪ್ರತಿದಿನ ಸಂಜೆ ಮನೆಯ ಹೊರಗಡೆ ಭಾಗದಲ್ಲಿ ದೀಪ ಬೆಳಗಿಸುವುದರಿಂದ ಲಕ್ಷ್ಮೀದೇವಿಗೆ ಸಂತೋಷ ಆಗುತ್ತದೆ. ಇಡೀ ರಾತ್ರಿ ಈ ದೀಪಾ ಉರಿಯುತ್ತಿರಬೇಕು. ಅದು ಸಾಧ್ಯವಾಗದೆ ಹೋದರೆ ಸಂಜೆ ಸಮಯದಲ್ಲಿ ದೀಪ ಉರಿಯಲು ಬಿಡಿ. ನಂತರ ಅದೇ ದಿಕ್ಕಿನಲ್ಲಿ ದೀಪ ಬೆಳಗಿಸಿ, ಈ ರೀತಿ ಮಾಡುವುದದಿಂದ ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.