ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಮತ್ತೊಂದು ಪ್ರೇಮ್ ಕಹಾನಿ: ನಟನ ಹಿಂದೆ ಬಿದ್ದ ಸಾನಿಯಾ: ರಾಕೇಶ್ ಅಲ್ಲ, ಮತ್ಯಾರು ಗೊತ್ತೇ??
ಬಿಗ್ ಬಾಸ್ ಮನೆ ಎಂದರೆ ಸದಾ ಎಕ್ಸೈಟಿಂಗ್ ಆಗಿರುತ್ತದೆ. ಅದರಲ್ಲೂ ಬಿಗ್ ಬಾಸ್ ಮನೆಯೊಳಗೆ ನಡೆಯುವ ಲವ್ ಸ್ಟೋರಿಗಳು ಎಲ್ಲರನ್ನು ಹೆಚ್ಚು ಆಕರ್ಷಿಸುತ್ತದೆ ಎಂದರೆ ತಪ್ಪಾಗುವುದಿಲ್ಲ. ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಈಗಷ್ಟೇ ಶುರುವಾಗಿದ್ದು, ಶುರುವಾದ ಒಂದೇ ವಾರದಲ್ಲಿ ಸಾಕಷ್ಟು ಫೀಲಿಂಗ್ಸ್ ಗಳನ್ನು ನೋಡುವ ಅವಕಾಶ ಸಿಕ್ಕಿದೆ. ಮನೆಯಲ್ಲಿ ಈಗಾಗಲೇ ಜಗಳ, ನೋವು, ಅಳು, ಮುನಿಸು, ಕೋಪ, ಪ್ರೀತಿ ಇದೆಲ್ಲವನ್ನು ನೋಡಿದ್ದೇವೆ.
ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಒಂದು ಲವ್ ಸ್ಟೋರಿ ಶುರುವಾಗಿದೆ. ಅದು ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ನಡುವೆ. ಇವರಿಬ್ಬರ ನಡುವೆ ನಡೆಯುತ್ತಿರುವ ಮಾತುಕತೆಗಳು, ಇಬ್ಬರ ನಡವಳಿಕೆ ಎಲ್ಲವೂ ಸಹ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವುದನ್ನು ತೋರಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಇವರಿಬ್ಬರ ಲವ್ ಬಗ್ಗೆ ಚರ್ಚೆಯಾಗುತ್ತಿದೆ. ಇವರಿಬ್ಬರ ಪ್ರೀತಿ ಒಂದು ಕಡೆಯಾದರೆ, ಮತ್ತೊಂದು ಕಡೆ ಇನ್ನೊಂದು ಹೊಸ ಪ್ರೀತಿಯ ಕಥೆ ಶುರುವಾಗಿದೆ. ಅದು ಪುಟ್ಟಗೌರಿ ಮದುವೆ ಖ್ಯಾತಿಯ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಅವರದ್ದು.
ಸಾನ್ಯಾ ಅಯ್ಯರ್ ಮತ್ತು ತುಳು ನಾಡಿನ ಸ್ಟಾರ್ ಹಾಗೂ ಮಾಜಿ ರೇಡಿಯೋ ಜಾಕಿ ರೂಪೇಶ್ ಶೆಟ್ಟಿ ನಡುವೆ ಕುಚ್ ಕುಚ್ ಶುರುವಾಗಿದೆ. ಇಬ್ಬರ ನಡುವೆ ನಡೆದಿರುವ ಮಾತುಕತೆ ಹಾಗೂ ಇಬ್ಬರು ಜೊತೆ ಜೊತೆಯಾಗಿ ಇರುತ್ತಿರುವುದನ್ನು ನೋಡಿದರೆ, ಇವರಿಬ್ಬರ ನಡುವೆ ಸಹ ಪ್ರೀತಿ ಚಿಗುರೊಡೆದಿರಬಹುದೇ ಎನ್ನುವ ಹಾಗಿದೆ. ಆದರೆ ಈ ವಿಚಾರದ ಬಗ್ಗೆ ಇವರಿಬ್ಬರು ಏನನ್ನು ಮಾತನಾಡುತ್ತಿಲ್ಲ, ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ. ಆದರೆ ಇಬ್ಬರನ್ನು ನೋಡಿದರೆ, ಜಸ್ಟ್ ಫ್ರೆಂಡ್ಸ್ ಮಾತ್ರ ಅಲ್ಲ ಎನ್ನುವುದು ಗೊತ್ತಾಗುತ್ತಿದೆ.