ಮುಂದಿನ ಭವಿಷ್ಯದ ಬಗ್ಗೆ ಎಲ್ಲಾ ಪ್ಲಾನ್ ಹಾಗೂ ಆಲೋಚನೆಗಳನ್ನು ತೆರೆದಿಟ್ಟ ರೋಹಿತ್ ಶರ್ಮ. ಹೇಳಿದ್ದೇನು ಗೊತ್ತೇ??
ಭಾರತ ಕ್ರಿಕೆಟ್ ತಂಡ ಈಗ ಸ್ವಲ್ಪ ಕಷ್ಟದ ಪರಿಸ್ಥಿತಿಯಲ್ಲೇ ಇದೆ ಎಂದರೆ ತಪ್ಪಾಗುವುದಿಲ್ಲ. ಸ್ಟಾರ್ ಆಟಗಾರರು ಇಂಜುರಿ ಇಂದ ತಂಡದಿಂದ ಹೊರಗೆ ಉಳಿದಿದ್ದಾರೆ. ಇನ್ನೇನು ಈ ತಿಂಗಳು ಆಗಸ್ಟ್ 27ರಿಂದ ಏಷ್ಯಾಕಪ್ ಪಂದ್ಯಗಳು ಶುರುವಾಗುತ್ತಿದ್ದು, 15 ಪ್ಲೇಯರ್ ಗಳ ತಂಡವನ್ನು ಬಿಸಿಸಿಐ ತಂಡ ಪ್ರಕಟಣೆ ಮಾಡಿದೆ. ಈ ಬಾರಿ ಬಿಸಿಸಿಐ ಆಯ್ಕೆ ಮಾಡಿರುವ ತಂಡ ಹೇಳಿಕೊಳ್ಳುವ ಹಾಗಿಲ್ಲ, ತಂಡದಲ್ಲಿ ಕೆಲವು ಆಟಗಾರರನ್ನು ಯಾಕೆ ಆಯ್ಕೆ ಮಾಡಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಕ್ರಿಕೆಟ್ ಪ್ರಿಯರು.
ನಮಗೆಲ್ಲ ಗೊತ್ತಿರುವ ಹಾಗೆ ರೋಹಿತ್ ಶರ್ಮಾ ಅವರು ಇಂಜೂರಿ ಕಾರಣದಿಂದ ಭಾರತ ತಂಡದಿಂದ ಹೊರಗಿದ್ದರು ಪಂದ್ಯಗಳನ್ನು ಆಡಲಿಲ್ಲ. ಇದೀಗ ಏಷ್ಯಾಕಪ್ ಪಂದ್ಯಗಳಿಗೆ ರೋಹಿತ್ ಶರ್ಮಾ ಅವರು ಆಯ್ಕೆಯಾಗಿದ್ದಾರೆ. ರೋಹಿತ್ ಅವರು ಕ್ಯಾಪ್ಟನ್ ಆಗಿದ್ದು, ಕೆ.ಎಲ್.ರಾಹುಲ್ ಅವರು ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರು ತಂಡದಲ್ಲಿ ತಮ್ಮ ಫ್ಯುಚರ್ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ, ಭಾರತ ತಂಡದಲ್ಲಿ ಬೆಂಚ್ ಸ್ಟ್ರೇನ್ಥ್ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹೆಚ್ಚು ಪಂದ್ಯಗಳಲ್ಲಿ ಆಡಲಿದ್ದೇವೆ, ಅದರಿಂದ ಇಂಜುರಿ ಹಾಗೂ ವರ್ಕ್ ಲೋಡ್ ಎರಡು ಸಹ ಹೆಚ್ಚಾಗುತ್ತದೆ. ಇದರಿಂದಾಗಿ ಆಟಗಾರರ ರೊಟೇಶನ್ ಪಾಲಿಸಿ ಶುರು ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ ಬೆಂಚ್ ಸ್ಟ್ರೇನ್ಥ್ ಹೆಚ್ಚಿಸುತ್ತಾ ಇದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಆಟಗಾರರಿಗೆ ಒತ್ತಡವನ್ನು ಕಡಿಮೆ ಮಾಡುವ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ರೋಹಿತ್ ಶರ್ಮಾ ಅವರು. ಈ ಮೂಲಕ ಮುಂದಿನ ಪ್ಲಾನ್ ಗಳನ್ನು ಹೇಳಿದ್ದಾರೆ.