ಕೊನೆಗೂ ಕೊಹ್ಲಿ ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ: ಏಷ್ಯಾ ಕಪ್ ಗೆ ಭರ್ಜರಿ ತಯಾರಿ ಆರಂಭ ಮಾಡಿದ ಕಿಂಗ್ ಕೊಹ್ಲಿ
ಭಾರತ ಕ್ರಿಕೆಟ್ ತಂಡದ ಕಿಂಗ್ ಕೋಹ್ಲಿ ಅವರ ಅಭಿಮಾನಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ವಿರಾಟ್ ಕೋಹ್ಲಿ ಅವರು ಒಂದು ತಿಂಗಳ ಬಳಿಕ ಇದೀಗ ನ್ಯಾಷನಲ್ ಟೀಮ್ ಗೆ ಬಂದಿದ್ದಾರೆ. ವಿರಾಟ್ ಕೋಹ್ಲಿ ಅವರು ಕೆಲ ಸಮಯದಿಂದ ಕಳಪೆ ಫಾರ್ಮ್ ಇಂದ ಬಳಲುತ್ತಿದ್ದಾರೆ, ಜೊತೆಗೆ ವಿರಾಟ್ ಅವರ ವೈಫಲ್ಯದಿಂದ ಟೀಕೆಗಳನ್ನು ಸಹ ಅನುಭವಿಸಿದ್ದಾರೆ. ಇಂಗ್ಲೆಂಡ್ ಟೂರ್ ನಲ್ಲಿ ವಿರಾಟ್ ಕೋಹ್ಲಿ ಅವರು ಭಾಗವಹಿಸಿ, ಪಂದ್ಯಗಳಲ್ಲಿ ಪಾಲ್ಗೊಂಡರು, ಆದರೆ ವಿರಾಟ್ ಅವರು ಆ ಪಂದ್ಯಗಳಲ್ಲಿ ಸಹ ವೈಫಲ್ಯ ಅನುಭವಿಸಿದರು.
ಅದಾದ ಬಳಿಕ ನಡೆದ ವೆಸ್ಟ್ ಇಂಡೀಸ್ ಟೂರ್ ನಲ್ಲಿ ವಿರಾಟ್ ಕೋಹ್ಲಿ ಅವರು ಭಾಗವಹಿಸಿಲಿಲ್ಲ. ಒಂದು ತಿಂಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆದರು ವಿರಾಟ್ ಕೋಹ್ಲಿ. ಆದರೆ ಈಗ ಏಷ್ಯಾಕಪ್ ಪಂದ್ಯಗಳಿಗೆ ವಿರಾಟ್ ಕೋಹ್ಲಿ ಅವರನ್ನು ಬಿಸಿಸಿಐ ಸೆಲೆಕ್ಟ್ ಮಾಡಿದೆ. ವಿರಾಟ್ ಅವರು ವೈಫಲ್ಯ ಅನುಭವಿಸುತ್ತಿದ್ದರು ಸಹ ಹಿರಿಯ ಆಟಗಾರನ ಮೇಲೆ ನಂಬಿಕೆ ಇಟ್ಟು, ಬಿಸಿಸಿಐ ವಿರಾಟ್ ಅವರನ್ನು ಸೆಲೆಕ್ಟ್ ಮಾಡಿದೆ. ಇದೀಗ ವಿರಾಟ್ ಅವರು ಆಗಸ್ಟ್ 11ರಿಂದ ಏಷ್ಯಾಕಪ್ ಪಂದ್ಯಗಳಿಗೆ ಅಭ್ಯಾಸ ಶುರುಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಒಂದು ತಿಂಗಳ ಬಳಿಕ ವಿಶ್ರಾಂತಿ ಪಡೆದು ವಿರಾಟ್ ಅವರು ತಂಡಕ್ಕೆ ಮರಳಿದ್ದಾರೆ. ಈ ಹಿಂದೆ ವಿರಾಟ್ ಕೋಹ್ಲಿ ಅವರು, ತಮ್ಮ ಗುರಿ ಭಾರತ ತಂಡವು ಏಷ್ಯಾಕಪ್ ಪಂದ್ಯಗಳು ಮತ್ತು ಟಿ20 ವರ್ಲ್ಡ್ ಕಪ್ ಗೆಲ್ಲುವುದಕ್ಕೆ ಸಹಾಯ ಮಾಡುವುದು. ಅದಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧವಾಗಿದ್ದೇನೆ..ಎಂದು ವಿರಾಟ್ ಕೋಹ್ಲಿ ಅವರು ಹೇಳಿದ್ದರು. ಇದೀಗ ಅದೇ ನಿಟ್ಟಿನಲ್ಲಿ ಅಭ್ಯಾಸ ಶುರುಮಾಡಿದ್ದಾರೆ. ಆಗಸ್ಟ್ 27ರಿಂದ ಏಷ್ಯಕಪ್ ಪಂದ್ಯಗಳು ಶುರುವಾಗಲಿದ್ದು, ವಿರಾಟ್ ಕೋಹ್ಲಿ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ, ಫಾರ್ಮ್ ಗೆ ಮರಳಿ ಬರುತ್ತಾರಾ ಎಂದು ಕಾದು ನೋಡಬೇಕಿದೆ.