ನಾನು ಮನೆಗೆ ಹೋಗಿರುವು ಪ್ಲೇಟ್ ತೊಳೆಯಲು ಅಲ್ಲ, ನಾನು ಏನು ಅಂತ ಜಗತ್ತಿಗೆ ತೋರಿಸಿದ್ದೇನೆ ಎಂದು ಗರಂ ಆದ ಸೋನು ಯಾಕೆ ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಗಳು ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಮಾತು ಕತೆ ವಾದ ವಿವಾದ ಇದೆಲ್ಲವೂ ಸಾಮಾನ್ಯವೇ ಆಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ದೊಡ್ಡದಾಗಿಯೇ ವಾದ ನಡೆಯುವುದು ಸಹ ಸಾಮಾನ್ಯ ಎನ್ನುವ ಹಾಗಿದೆ. ಈ ಬಾರಿ ಕೂಡ ಈ ರೀತಿಯ ವಾದ ಮಾಡುವ ವ್ಯಕ್ತಿಗಳು ಹೆಚ್ಚಾಗಿಯೇ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಅದರಲ್ಲೂ ಸೋನು ಶ್ರೀನಿವಾಸ್ ಗೌಡ ಹೆಚ್ಚಾಗಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಅವರು ಯೋಚನೆ ಮಾಡದೆಯೇ ಮಾತನಾಡುತ್ತಿರುವುದು ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಮನೆಯ ಸ್ಪರ್ಧಿಗಳ ಜೊತೆಗೆ ಚಿಕ್ಕ ಚಿಕ್ಕ ವಿಚಾರಕ್ಕೂ ಸೋನು ಗೌಡ ಕೋಪ ಮಾಡಿಕೊಂಡು, ಜಗಳ ಆಡುತ್ತಿದ್ದಾರೆ. ಒಂದು ಸಣ್ಣ ಮಾತಿಗೆ ಸ್ಪೂರ್ತಿ ಗೌಡ ಅವರ ಜೊತೆಗೆ ಜಗಳ ಆಡುತ್ತಿದ್ದರು. ಆ ಜಗಳಕ್ಕೆ ಮನೆಯ ಬೇರೆ ಸ್ಪರ್ಧಿಗಳು ಸಹ ಸೋನು ಜೊತೆಗೆ ಮಾತನಾಡಿ, ಆಕೆಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು. ಈ ರೀತಿಯ ಮಾತುಗಳು ಚರ್ಚೆಗೆ ಒಳಗಾಗಿದೆ. ಸೋನು ಆಡುವ ಮಾತುಗಳು ಹಲವರಿಗೆ ಕಿರಿಕಿರಿ ತರಿಸಿದೆ ಎನ್ನುವುದು ಕೂಡ ಸತ್ಯವೇ ಆಗಿದೆ. ಇದೀಗ ಸೋನು ಬಿಗ್ ಬಾಸ್ ಮನೆಗೆ ಬಂದಿರುವ ಬಗ್ಗೆ ಕೆಲವು ಮಾತುಗಳನ್ನಾಡಿದ್ದಾರೆ.
ನಾನು ಇಲ್ಲಿಗೆ ಬಂದಿರುವುದು ಪ್ಲೇಟ್ ತೊಳೆಯೋದಕ್ಕೆ ಅಲ್ಲ ಎಂದಿದ್ದಾರೆ ಸೋನು. ಜಯಶ್ರೀ ಆರಾಧ್ಯ ಜೊತೆಗೆ ಮಾತನಾಡುತ್ತಾ ಇದ್ದ ಸೋನು, ಅಡುಗೆ ವಿಚಾರ ಮಾತನಾಡುತ್ತಾ, ಉದಯ್ ಸೂರ್ಯ ಅವರನ್ನು ಕರೆದು, “ನಾಳೆ ನಾನು ಅಡುಗೆ ಮಾಡ್ತೀನಿ. ಇಲ್ಲಿ ಯಾರು ಪರ್ಫೆಕ್ಟ್ ಆಗಿ ಅಡುಗೆ ಬರುತ್ತೆ ಅಂತ ಮಾಡ್ತಿಲ್ಲ. ನಾಳೆ ನಾನು ಸ್ಪೂರ್ತಿ ನಾವೇ ಅಡುಗೆ ಮಾಡೋದು ಅಂತ ಡಿಸೈಡ್ ಮಾಡಿದ್ದೀವಿ. ನಾವೇ ಮಾಡ್ತೀವಿ. ಬೇರೆಯವರು ತಿಂದ ಪ್ಲೇಟ್ಸ್, ಕುಡಿದ ಬಾಟಲ್ಸ್ ಗಳನ್ನ ತೊಳೆಯೋದಕ್ಕೆ ನಾನು ಕೆಲಸದವಳಾಗಿ ಇಲ್ಲಿಗೆ ಬಂದಿಲ್ಲ. ವಿನ್ ಆಗೋದಕ್ಕೆ ಬಂದಿರೋದು, ನಾನೇನು ಅಂತ ಇಡೀ ಜಗತ್ತಿಗೆ ತೋರಿಸಿ. ಇವರು ಹೇಳಿದ್ದನ್ನ ನಾನ್ಯಾಕೆ ಕೇಳ್ಬೇಕು. ನಾನು ಮಂಡ್ಯ ಸೋನು ಆಗ್ಬೇಕಾಗುತ್ತೆ. ಎಲ್ಲಾರು ನನ್ನನ್ನ ಚೈಲ್ಡ್ ಥರ ಆಡ್ತಿದ್ದಾಳೆ ಅಂತ ಅನ್ಕೊಂಡಿದ್ದಾರೆ..” ಎಂದು ಹೇಳಿದ್ದಾರೆ ಸೋನು ಶ್ರೀನಿವಾಸ್ ಗೌಡ.