ನಿಮ್ಮ ಜೀವನದಲ್ಲಿ ಲಕ್ಷ್ಮಿ ದೇವಿಯ ಕೃಪೆ ಇರಬೇಕು ಎಂದರೆ ಬೇರೆ ಏನು ಬೇಡ, ಇಷ್ಟು ಮಾಡಿ ಸಾಕು. ಜೀವನ ಪೂರ್ತಿ ನಿಮ್ಮ ಕೈಬಿಡಲ್ಲ.

34

Get real time updates directly on you device, subscribe now.

ಈ ಪ್ರಪಂಚದಲ್ಲಿ ಹುಟ್ಟಿದಾಗಿನಿಂದ ಸಾಯುವವರೆಗೂ ಎಲ್ಲರೂ ಕಷ್ಟಪಡುವುದು ಹಣಕ್ಕಾಗಿ. ಹಣ ಒಂದಿದ್ದರೆ, ಎಲ್ಲವೂ ಕೈಸೇರುತ್ತದೆ. ಈಗಿನ ಕಾಲದಲ್ಲಿ ಹಣ ಮನುಷ್ಯರಿಗೆ ಆಕ್ಸಿಜನ್ ರೀತಿ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಒಬ್ಬ ಮನುಷ್ಯ ಬೆಳಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಮಲಗುವವರೆಗೂ ದಿನವೆಲ್ಲಾ ಕಷ್ಟಪಡುವುದು ಹಣ ಸಂಪಾದನೆ ಮಾಡುವ ಸಲುವಾಗಿಯೇ. ಆದರೆ ಕೆಲವೊಮ್ಮೆ ಮನುಷ್ಯರು ಎಷ್ಟೇ ಕಷ್ಟಪಟ್ಟರು ಅವರ ಬಳಿ ಹಣ ಉಳಿಯುವುದಿಲ್ಲ. ಹಣವನ್ನು ಉಳಿಸಿಕೊಳ್ಳಲು, ಲಕ್ಷ್ಮೀದೇವಿಯ ಕೃಪೆ ಸಹ ಇರಬೇಕು ಎಂದು ಹೇಳುತ್ತಾರೆ. ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಿದ್ದರೆ, ಹಣದ ವಿಚಾರದಲ್ಲಿ ನಿಮಗೆ ಯಾವುದೇ ಸಮಸ್ಯೆ ತೊಂದರೆ ಆಗುವುದಿಲ್ಲ. ಲಕ್ಷ್ಮೀ ದೇವಿ ನಿಮ್ಮ ಜೊತೆಗೆ ಸದಾ ಇರಬೇಕು ಎಂದರೆ ಹೀಗೆ ಮಾಡಿ..

*ಲಕ್ಷ್ಮೀದೇವಿಯನ್ನು ಶ್ರೀಮನ್ನಾರಾಯಣರು ಆಕರ್ಷಿಸಿ, ಲಕ್ಷ್ಮಿ ನಾರಾಯಣರ ವಕ್ಷಸ್ಥಳ ಸೇರಿ, ಅವರಿಬ್ಬರು ಲಕ್ಷ್ಮೀನಾರಾಯಣರಾದರು. ಇವರ ಆರಾಧನೆ ಮಾಡುವುದರಿಂದ ಲಕ್ಷ್ಮಿ ಸದಾ ನಿಮ್ಮ ಜೊತೆಯಲ್ಲಿರುತ್ತಾರೆ.
*ಶ್ರೀಮನ್ನಾರಾಯಣನ ಆರಾಧನೆಯನ್ನು ಪೂಜೆ ಅಥವಾ ಜಪದ ಮೂಲಕ ಮಾಡಿ, ಇದರಿಂದಾಗಿ ಲಕ್ಶ್ಮಿ ನಿಮ್ಮ ಮನೆಯಲ್ಲಿ ತಾಂಡವವಾಡುತ್ತಾಳೆ.
*ಓಂ ಓಂ ನಮೋ ನಾರಾಯಣಾಯ, ಈ ಮಂತ್ರ ಜಪಿಸುವುದರಿಂದ ನೀವು ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಬಹುದು. ಈ ಮಂತ್ರವನ್ನು ಲಕ್ಷಸಾರಿ ಜಪ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ.

*ನಾರಾಯಣ ಮಂತ್ರವನ್ನು ಲಕ್ಷ ಸಾರಿ ಜಪ ಮಾಡಿ, ನಿಮ್ಮ ಮನೆಯಲ್ಲಿ ಹೋಮ, ಹವನ, ಬ್ರಾಹ್ಮಣರಿಗೆ ಭೋಜನ, ಅರ್ಚನೆ, ನಮಸ್ಕಾರ ಮಾಡಿದರೆ ಲಕ್ಷ್ಮೀದೇವಿಯ ಕೃಪೆ ಪ್ರಾಪ್ತಿಯಾಗುತ್ತದೆ.
*ಓಂ ನಮೋ ಭಗವತೆ ವಾಸುದೇವಾಯ.. ಕೃಷ್ಣನ ಮಂತ್ರವನ್ನು ಲಕ್ಷ ಸಾರಿ ಜಪ ಮಾಡಿದರೆ, ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. *ಶ್ರೀಲಕ್ಷ್ಮಿನಾರಾಯಣ ಪಾರಾಯಣವನ್ನು ಗುರುಮುಖದಿಂದ ಉಪದೇಶ ಪಡೆದು,108 ಸಾರಿ ಜಪ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಬಹುದು. ಈ ಪಾರಾಯಣವನ್ನು, ಮೊದಲನೆಯ ದಿನ ಒಂದು ಪಾರಾಯಣ, ಎರಡನೆಯ ದಿನ ಎರಡು ಪಾರಾಯಣ, ಮೂರನೆಯ ದಿನ ನಾಲ್ಕು ಪಾರಾಯಣ, ನಾಲ್ಕನೆಯ ದಿನ ಎಂಟು ಪಾರಾಯಣ, ಐದನೆಯ ದಿನ ಹದಿನಾರು ಪಾರಾಯಣ, ಆರನೆಯ ದಿನ ಮುವ್ವತ್ತೆರಡು ಪಾರಾಯಣ, ಏಳನೆಯ ದಿನ ಅರವತ್ತನಾಲ್ಕು ಪಾರಾಯಣ, ಎಂಟನೆಯದಿನ ನೂರಾ ಇಪ್ಪತ್ತೆಂಟು ಪಾರಾಯಣ, ಒಂಬತ್ತನೆಯ ದಿನ ಎರಡು ನೂರಾ ಐವತ್ತಾರು ಪಾರಾಯಣ ಮಾಡುವುದದಿಂದ ಲಕ್ಷ್ಮಿದೇವಿಯ ಆಶೀರ್ವಾದ ಸದಾ ಇರುತ್ತದೆ.

*ನಾರಾಯಣ ಹೃದಯವನ್ನು 1008 ಬಾರಿ ಜಪಿಸುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
*ಮಹಾಲಕ್ಷ್ಮಿ ಹೃದಯವನ್ನು 1008 ಬಾರಿ ಜಪ ಮಾಡುವುದರಿಂದ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೀರಿ.

Get real time updates directly on you device, subscribe now.