ಮಾತಿನ ಮೂಲಕವೇ ಬಿಗ್ ಬಾಸ್ ಸ್ಪರ್ದಿಗೆ ಡಿಚ್ಚಿ ಕೊಟ್ಟ ಆರ್ಯವರ್ಧನ್ ಗುರೂಜಿ: ಸರಿಯಾಗಿ ಹೇಳಿದ್ದಿರಿ ಎಂದ ಪ್ರೇಕ್ಷಕರು. ಏನು ಹೇಳಿದ್ದಾರೆ ಗೊತ್ತೇ??
ಬಿಗ್ ಬಾಸ್ ಶೋ ಎಂದರೆ ಎಲ್ಲರಿಗೂ ಒಂದು ರೀತಿ ಕುತೂಹಲ ಇದ್ದೇ ಇರುತ್ತದೆ. ಈ ಶೋ ಇಷ್ಟಪಡುವ ಒಂದು ವರ್ಗ ಇದ್ದರೆ, ಟೀಕೆ ಮಾಡುವ ಮತ್ತೊಂದು ವರ್ಗ ಇದೆ. ಬಿಗ್ ಬಾಸ್ ಕನ್ನಡ ಶೋ ಈಗ ಹೊಸ ರೂಪದಲ್ಲಿ ಓಟಿಟಿ ನಲ್ಲಿ ಪ್ರಸಾರವಾಗುತ್ತಿರುವ ಮೊದಲ ಸೀಸನ್ ಈಗ ಶುರುವಾಗಿದೆ. ಬಿಗ್ ಬಾಸ್ ಶೋ ಪ್ರತಿ ಸೀಸನ್ ನಲ್ಲಿ ಸ್ಪರ್ಧಿಗಳು ತಮ್ಮ ಕಷ್ಟಗಳನ್ನು ನೋವುಗಳನ್ನು ಹಂಚಿಕೊಳ್ಳುವುದು ಇದ್ದೆ ಇರುತ್ತದೆ. ಈ ಬಾರಿ ಶೋ ಶುರುವಾಗಿ ಒಂದೆರಡೇ ದಿನಕ್ಕೆ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ವಿಚಾರದ ಬಗ್ಗೆ ಮಾತನಾಡಿ, ಭಾವುಕರಾಗಿದ್ದಾರೆ. ಸಾನ್ಯಾ ಅಯ್ಯರ್, ಸೋಮಣ್ಣ, ಲೋಕೇಶ್, ಸೋನು ಗೌಡ ಇನ್ನಿತರರು ತಮ್ಮ ದುಃಖದ ವಿಚಾರಗಳನ್ನು ಹಂಚಿಕೊಂಡಿದ್ದಾರೆ..
ಕಾಮಿಡಿ ಕಿಲಾಡಿಗಳು ಶೋ ಇಂದ ಫೇಮಸ್ ಆಗಿ ಈಗ ಬಿಗ್ ಬಾಸ್ ಗೆ ಬಂದಿರುವ ಸ್ಪರ್ಧಿ ಲೋಕೇಶ್ ಎಲ್ಲರಿಗೂ ಗೊತ್ತೇ ಇದೆ., ಅವರು ಕೂಡ ಬಾಲ್ಯದಲ್ಲಿ ತಾವು ಪಟ್ಟ ಕಷ್ಟಗಳ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ, ಚಿಕ್ಕ ವಯಸ್ಸಿನಿಂದ ತೀರ ಬಡತನದ ಕುಟುಂಬದಲ್ಲಿ ಬೆಳೆದು ಬಂದಿದ್ದಾಗಿ ಹೇಳಿ, ತಾಯಿಗೆ ಬುದ್ಧಿಭ್ರಮಣೆ ಆಗಿದೆ, ಚಿಕ್ಕ ವಯಸ್ಸಿನಲ್ಲೇ ತಾನು ಮನೆ ಬಿಟ್ಟು ಓಡಿಬಂದು, ಊಟಕ್ಕಾಗಿ ಮೂಕನ ಹಾಗೆ ಭಿಕ್ಷೆ ಬೇಡಿ ಕಷ್ಟಪಡುತ್ತಾ ಇದ್ದದ್ದು, ನಂತರ ಮಕ್ಕಳ ಆಶ್ರಮ ಸೇರಿ ಜೀವನಕ್ಕೆ ಒಂದು ದಾರಿ ಮಾಡಿಕೊಂಡಿದ್ದು, ಈಗಲೂ ತಾಯಿ ಕಾಣೆ ಆಗಿದ್ದು, ತಾಯಿಯನ್ನು ಹುಡುಕುತ್ತಿರುವ ವಿಚಾರವನ್ನು ಲೋಕೇಶ್ ಹೇಳಿಕೊಂಡರು.

ಅದನ್ನು ಕೇಳಿದ ಆರ್ಯವರ್ಧನ್ ಗುರುಜಿ, ಈ ರೀತಿ ಮಾತನಾಡಿ ಜನರ ಸಿಂಪತಿ ಪಡೆದುಕೊಳ್ಳಬೇಡಿ ಎಂದು ಹೇಳುತ್ತಾರೆ. ಅದಕ್ಕೆ ಉತ್ತರಿಸುವ ಲೋಕೇಶ್, ಹಾಗಿದ್ರೆ ಬಿಗ್ ಬಾಸ್ ಮನೆಯಲ್ಲಿ ದುಃಖ ಹಂಚಿಕೊಳ್ಳುವುದು ವೋಟ್ ಗೋಸ್ಕರ ಅಂತ ನೀವು ಹೇಳ್ತಿರೋದ ಎಂದು ಮರು ಪ್ರಶ್ನೆ ಹಾಕುತ್ತಾರೆ. ಈ ರೀತಿ ಎಮೋಷನಲ್ ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಆಗಾಗ ನಡೆಯುತ್ತಿರುತ್ತದೆ. ವೀಕ್ಷಕರು ಸಹ, ಸ್ಪರ್ಧಿಗಳು ತಮ್ಮ ಗೋಳು ಹೇಳಿಕೊಂಡು ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ಯಾವ ಸೀಸನ್ ನಲ್ಲೂ ನಿಂತಿಲ್ಲ. ಈ ಓಟಿಟಿ ಸೀಸನ್ ನಲ್ಲೂ ಸಹ ಮುಂದುವರೆಯುತ್ತಿದೆ. ಇನ್ನು ಮೊದಲ ವಾರವೇ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಮೊದಲ ಎಲಿಮಿನೇಶನ್ ನಲ್ಲಿ ಮನೆಯಿಂದ ಹೊರಬರೋದು ಯಾರು ಎನ್ನುವ ಕುತೂಹಲ ಶುರುವಾಗಿದೆ.