ಮುಗಿದೇ ಹೋಯ್ತು ನಿಮ್ಮ ಕಷ್ಟ ಕಾಲ: ಮುಂದಿನ 108 ದಿನಗಳ ಕಾಲ ನೀವು ಮುಟ್ಟಿದೆಲ್ಲಾ ಚಿನ್ನ: ಯಾವ್ಯಾವ ರಾಶಿಯವರಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದ ಹೇಳುವ ಪ್ರಕಾರ ಪ್ರತಿಯೊಂದು ಗ್ರಹಗಳ ಚಲನೆ, ಸ್ಥಾನ ಬದಲಾವಣೆ ಎಲ್ಲವೂ ಸಹ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಗ್ರಹಗಳ ಅಧಿಪತಿ ಎಂದೇ ಕರೆಯಲ್ಪಡುವ ಗುರು ಗ್ರಹವು ತನ್ನದೇ ಆದ ರಾಶಿ ಆಗಿರುವ ಮೀನ ರಾಶಿಯಿಂದ ವಕ್ರನಡೆ ಶುರು ಮಾಡಲಿದ್ದಾನೆ, ಜುಲೈ 29ರಂದು ಈ ವಕ್ರನಡೆ ಶುರುವಾಗಿದ್ದು, 108 ದಿನಗಳ ಕಾಲ ಗುರುವಿನ ಚಲನೆ ಇದೇ ರೀತಿ ಇರಲಿದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗುರು ಗ್ರಹವು, ಜ್ಞಾನ, ಏಳಿಗೆ, ಶಿಕ್ಷಣ, ಧನ, ದಾನ ಹಾಗೂ ಪುಣ್ಯಕ್ಕೆ ಸಂಬಂಧಿಸಿದ್ದು, ಗುರುವಿನ ವಕ್ರನಡೆಯು ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಈ ರಾಶಿಯವರಿಗೆ ಗುರುವಿನ ವಕ್ರನಡೆಯು ಲಾಭವನ್ನು ತಂದುಕೊಡಲಿದೆ. ವೃಷಭ ರಾಶಿಯ 11ನೇ ಭಾವದಲ್ಲಿ ಗುರುವಿನ ವಕ್ರನಡೆ ಇದೆ, ಇದನ್ನು ಆದಾಯ ಮತ್ತು ಲಾಭದ ಮನೆ ಎನ್ನುತ್ತಾರೆ, ಇದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಭರ್ಜರಿಯಾದ ಲಾಭ ಸಿಗುತ್ತದೆ. ಈ ಸಮಯದಲ್ಲಿ ಹೊಸ ವ್ಯಾಪಾರದ ಒಪ್ಪಂದ ಸಹ ನೆಲೆಗೊಳ್ಳುತ್ತದೆ. ಇದರಿಂದ ನಿಮಗೆ ಹೆಚ್ಚಿನ ಧನಲಾಭ ಆಗುತ್ತದೆ. ಗುರುವಿನ ಹಿಮ್ಮುಖ ಚಲನೆಯಿಂದ ನಿಮ್ಮ ಕೆಲಸದ ಶೈಲಿಯಲ್ಲಿ ಬದಲಾವಣೆ ಆಗಿ, ಇದರಿಂದ ನಿಮಗೆ ಒಳ್ಳೆಯ ಹೆಸರು ಬರಬಹುದು. ಹೊಸ ಬ್ಯುಸಿನೆಸ್ ಶುರುಮಾಡುವ ಪ್ಲಾನ್ ಇದ್ದರೆ, ಅದಕ್ಕೂ ಇದು ಒಳ್ಳೆಯ ಸಮಯ ಆಗಿದೆ. ಸಂಶೋಧನೆಯ ಕ್ಷೇತ್ರದಲ್ಲಿರುವವರಿಗೆ ಇದು ಅದ್ಭುತವಾದ ಸಮಯ ಆಗಿರಲಿದೆ.
ಮಿಥುನ ರಾಶಿ :- ಗುರುವಿನ ಹಿಮ್ಮುಖ ಚಲನೆಯಿಂದ ಮಿಥುನ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಈ ರಾಶಿಯ 10ನೇ ಮನೆಯಲ್ಲಿ ಗುರು ಹಿಮ್ಮುಖ ಚಲನೆ ಶುರು ಮಾಡಿದ್ದಾನೆ. ಇದು ಉದ್ಯೋಗ ಮತ್ತು ಆದಾಯದ ಸ್ಥಾನ ಆಗಿದ್ದು, ಈ ಸಮಯದಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿರುವವರು ಇದು ಅತ್ಯುತ್ತಮವಾದ ಸಮಯ ಆಗಿದೆ. ಈ ರಾಶಿಯ ಅಧಿಪತಿ ಬುಧ, ಬುಧ ಮತ್ತು ಗುರುವಿನ ಸ್ನೇಹ ಸಂಬಂಧದಿಂದ ಈ ರಾಶಿಯವರಿಗೆ ಎಲ್ಲವು ಒಳ್ಳೆಯದಾಗುತ್ತದೆ.
ಕರ್ಕಾಟಕ ರಾಶಿ :- ಈ ರಾಶಿಯ 9ನೇ ಮನೆಯಲ್ಲಿ ಗುರುವಿನ ವಕ್ರನಡೆ ಶುರುವಾಗಿದೆ. ಇದು ಭಾಗ್ಯ ಮತ್ತು ವಿದೇಶದ ಮನೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ನಿಮ್ಮ ಜೀವನದಲ್ಲಿ ಸಂಪೂರ್ಣವಾದ ಭಾಗ್ಯ ನಿಮಗೆ ಸಿಗಲಿದೆ. ಬ್ಯುಸಿನೆಸ್ ಗೆ ಸಂಬಂಧಿಸಿದ ಹಾಗೆ, ಯಾತ್ರೆಗೆ ಸಹ ಹೋಗಲಿದ್ದೀರಿ. ಈ ಜಾತಕದ 6ನೇ ಮನೆಯಲ್ಲಿ ಗುರು ಇದ್ದಾನೆ, ಈ ಸ್ಥಾನವನ್ನು ರೋಗ, ಕೋರ್ಟ್ ಕಚೇರಿ, ಮತ್ತು ಶತ್ರುವಿನ ಸ್ಥಾನ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನೀವು ಶತ್ರುವಿನ ವಿರುದ್ಧ ಜಯ ಸಾಧಿಸುತ್ತೀರಿ. ಈ ಸಮಯದಲ್ಲಿ ಮುತ್ತು ಧರಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.