ಕನ್ನಡದಲ್ಲಿನ ಹೊಸ ಟಾಪ್ ನಟಿ, ಎಲ್ಲರ ಮನಗೆದ್ದಿರುವ ಟಾಪ್ ನಟಿ ರಾಮಾಚಾರಿ ಧಾರವಾಹಿ ನಟಿ ಮೌನ ರವರ ಹಿನ್ನೆಲೆ ಯಾರುಗೊತ್ತೇ??
ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಹೆಚ್ಚು ಮನರಂಜನೆ ಕೊಡುತ್ತಿರುವುದು ಧಾರವಾಹಿಗಳು ಎಂದರೆ ತಪ್ಪಾಗುವುದಿಲ್ಲ. ಪ್ರತಿ ವಾಹಿನಿಯಲ್ಲೂ ಹಲವು ಹೊಸ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಒಳ್ಳೆಯ ಕಥೆ ಹೊಂದಿರುವ ಧಾರವಾಹಿಗಳನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ಧಾರವಾಹಿಗಳು ಹೆಚ್ಚಾಗುತ್ತಿರುವುದರಿಂದ, ಅವುಗಳಲ್ಲಿ ನಟಿಸುವ ಕಲಾವಿದರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಹೊಸ ಹೊಸ ಕಲಾವಿದರು ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀಗೆ ಹೊಸ ಧಾರಾವಾಹಿಗಳು ಶುರುವಾದಾಗ, ಅವುಗಳಲ್ಲಿ ಅಭಿನಯಿಸುವ ಕಲಾವಿದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಇರುತ್ತದೆ. ಜನರು ಬಹಳ ಇಷ್ಟಪಟ್ಟಿರುವ ಒಬ್ಬ ಕಿರುತೆರೆ ನಟಿಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಇಂದು ನಾವು ನಿಮಗೆ ತಿಳಿಸಲಿರುವುದು, ಬೇರೆ ಯಾವ ನಟಿಯ ಬಗ್ಗೆಯೂ ಅಲ್ಲ, ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ರಾಮಾಚಾರಿಯ ಚಾರು ಪಾತ್ರದಲ್ಲಿ ನಟಿಸಿರುವ ನಟಿಯ ಬಗ್ಗೆ. ಚಾರು ಪಾತ್ರದಲ್ಲಿ ದುರಹಂಕಾರಿ, ತಾನು ಅಂದುಕೊಂಡಿದ್ದೆ ನಡೆಯಬೇಕು ಎನ್ನುವ ಹಠಮಾರಿ ಹುಡುಗಿ ಚಾರು ಪಾತ್ರದಲ್ಲಿ ನಟಿಸಿರುವ ಈ ನಟಿಯ ಹೆಸರು ಮೌನ ಗುಡ್ಡೆಮನೆ. ಇವರು ಮೂಲತಃ ಮಂಗಳೂರಿನವರು. ಅಲ್ಲಿಯೇ ಹುಟ್ಟಿ ಬೆಳೆದ ಮೌನ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಮೌನ ಅವರು ಇರುವುದು ಬೆಂಗಳೂರಿನಲ್ಲಿ.
ರಾಮಾಚಾರಿ ಧಾರವಾಹಿಯಲ್ಲಿ ನಾಯಕಿಯಾಗುವ ಅವಕಾಶ ಸಿಗುವುದಕ್ಕಿಂತ ಮೊದಲು ಮೌನ ಅವರು, ಕೆಲವು ಮ್ಯೂಸಿಕ್ ಆಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಇಂದ ಖ್ಯಾತಿ ಪಡೆದಿರುವ ವಿಶ್ವನಾಥ್ ಹಾವೇರಿ ಅವರೊಡನೆ ಒಂದು ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. 2020ರಲ್ಲಿ ನಡೆದ ಮಿಸ್ ಟೀನ್ ತುಳುನಾಡು ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದರು ಮೌನ. ಮೌನ ಅವರ ಎತ್ತರ 5.4ಅಡಿ ಇದ್ದು, ಅವರ ತೂಕ 52 ಕೆಜಿ ಎನ್ನಲಾಗಿದೆ. ಹಲವು ಫೋಟೋಶೂಟ್ ಗಳಲ್ಲಿ ಸಹ ಪಾಲ್ಗೊಳ್ಳುತ್ತಾರೆ ಮೌನ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಫೋಟೋಶೂಟ್ ನ ಫೋಟೋಗಳನ್ನು ಸಹ ನೋಡಬಹುದು. ಮೊದಲ ಧಾರವಾಹಿಯಲ್ಲೇ ಅಚ್ಚುಕಟ್ಟಾಗಿ ಅಭಿನಯಿಸಿ ಜನಪ್ರಿಯತೆ ಗಳಿಸಿರುವ ಮೌನ ಅವರು ಮುಂದಿನ ದಿನಗಳಲ್ಲಿ ಒಳ್ಳೆಯ ಹೆಸರು ಮಾಡುವ ನಿರೀಕ್ಷೆಯಲ್ಲಿದ್ದಾರೆ.