ಕಾಗೆ ಮಾಡುವ ಈ ಚಿಕ್ಕ ಕೆಲಸಗಳನ್ನು ನೀವು ಕಲಿತುಕೊಂಡರೆ, ನಿಮ್ಮ ಜೀವನದಲ್ಲಿ ಸೋಲೇ ಇಲ್ಲದೆ, ಗೆದ್ದು ಬೀಗುತ್ತೀರಾ. ಏನು ಗೊತ್ತೇ??

61

Get real time updates directly on you device, subscribe now.

ಆಚಾರ್ಯ ಚಾಣಕ್ಯ ಜೀವನದಲ್ಲಿ ಹೇಗಿರಬೇಕು, ಜನರೊಂದಿಗೆ ಹೇಗೆ ಬೆರೆಯುವುದು, ಕೆಲಸ ಮಾಡುವಲ್ಲಿ ಯಶಸ್ಸನ್ನು ಸಾಧಿಸುವುದು ಹೇಗೆ, ಯಾವುದನ್ನೂ ತಪ್ಪಿಸಬೇಕು ಎನ್ನುವ ಬಗ್ಗೆ ಮಾನವ ಜೀವನಕ್ಕೆ ಸಂಬಂಧಿಸಿದ ಹಲವು ತತ್ವಗಳನ್ನು ಹೇಳಿದ್ದಾರೆ. ಅಂತೆಯೇ ಪಕ್ಷಿಗಳ ಬಗ್ಗೆ, ಪಕ್ಷಿಗಳು ಹೇಗಿವೆ? ಅವುಗಳಿಂದ ನಾವೇನು ಕಲಿಯಬೇಕು? ಎನ್ನುವ ಮಾಹಿತಿ ನೀಡಿದ್ದಾರೆ. ಒಬ್ಬ ವ್ಯಕ್ತಿಯು ಚಾಣಕ್ಯ ಹೇಳಿದ ಕೆಲವು ತತ್ವಗಳನ್ನು ಅನುಸರಿಸಿದರೆ, ಅವನು ಯಶಸ್ಸಿನತ್ತ ಸಾಗಬಹುದು ಎಂದು ಹೇಳಲಾಗುತ್ತದೆ. ಅದೇ ರೀತಿ ಕೆಲವು ಪಕ್ಷಿಗಳ ಲಕ್ಷಣಗಳನ್ನು ನೋಡಿ ಅವುಗಳಿಂದ ಕಲಿತರೆ ಜೀವನದಲ್ಲಿ ಹಿಂದೆ ಸರಿಯುವುದಿಲ್ಲ, ಎಂದು ಅವರು ಮಾಹಿತಿ ನೀಡಿದ್ದಾರೆ. ಅಂತಹ ಒಂದು ಪಕ್ಷಿ ಕಾಗೆ. ಈ ಕಾಗೆಯ ಲಕ್ಷಣಗಳೇನು? ಅದರಿಂದ ನಾವು ಏನು ಕಲಿಯಬಹುದು ಎನ್ನುವುದನ್ನು ತಿಳಿಯೋಣ..

ಕಾಗೆ ತನ್ನ ವಾಸಸ್ಥಾನ ಮತ್ತು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಹಾಗೆಯೇ ಮನುಷ್ಯ ತನ್ನ ಜೀವನದ ಕಡೆಗೆ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ, ಜೀವನದಲ್ಲಿ ಕಷ್ಟಗಳಿಂದ ದೂರ ಉಳಿಯಬಹುದು ಎಂದು ಚಾಣಕ್ಯ ಹೇಳುತ್ತಾರೆ. ಹಾಗೆಯೇ ಕಾಗೆ ತನ್ನ ನಡವಳಿಕೆಯಲ್ಲಿ ತುಂಬಾ ಹಠಮಾರಿ. ಯಾವುದೇ ಕೆಲಸ ಶುರು ಮಾಡಿತು ಅಂದರೆ ಅದು ಮುಗಿಯುವವರೆಗೂ ಬಿಡುವುದಿಲ್ಲ. ಹಾಗೆಯೇ ಒಬ್ಬ ಮನುಷ್ಯನು ತನ್ನನ್ನು ತಾನು ಬಲಶಾಲಿಯಾಗಿ ಮಾಡಿಕೊಳ್ಳಬೇಕು, ತನ್ನ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಿದ್ಧನಾಗಬೇಕು ಎಂದು ಚಾಣಿಕ್ಯ ಹೇಳುತ್ತಾರೆ. ಹಾಗೆಯೇ ಯಾವುದನ್ನಾದರು ನಂಬಬೇಕು ಎಂದರೆ ಅದರಲ್ಲಿ ಆತುರಪಡುವುದಿಲ್ಲ, ತನ್ನ ಸುತ್ತಲಿನ ಪರಿಸರವನ್ನು ಗಮನಿಸಿದ ನಂತರವೇ ನಂಬುತ್ತದೆ. ಹಾಗೆಯೇ ಮನುಷ್ಯರು ಸಹ ಯಾರನ್ನೂ ಬೇಗ ನಂಬಬಾರದು. ಹೀಗೆ ಬೇಗ ನಂಬುವುದರಿಂದ ಕೆಲವು ತೊಂದರೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಎಲ್ಲವನ್ನೂ ತಿಳಿದ ನಂತರವೇ ಅವರನ್ನು ನಂಬಿ ಎಂದು ಚಾಣಕ್ಯ ಹೇಳುತ್ತಾರೆ.

ಅಲ್ಲದೆ ಕಾಗೆಯು ಉತ್ತಮ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಅದು ಯಾವಾಗಲೂ ತನ್ನ ವಸ್ತುಗಳನ್ನು ತಂದು ತನ್ನ ಗೂಡಿನಲ್ಲಿ ಇಡುತ್ತದೆ. ಅಂದರೆ, ಯಾವುದೇ ಸಮಯದಲ್ಲಿ ಯಾವುದೇ ಸರಕು ಅಥವಾ ಆಹಾರ ಲಭ್ಯವಿಲ್ಲದಿದ್ದಾಗ ಅದು ಅವುಗಳನ್ನು ಬಳಸುತ್ತದೆ. ಅಂದರೆ ಮುಂಚಿತವಾಗಿ ಕಾಳಜಿ ವಹಿಸುವುದು. ಹಾಗೆಯೇ ಮನುಷ್ಯ ಮೊದಲೇ ಜಾಗೃತನಾಗಿ ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಏನಾದರೂ ಕೆಲಸ ಮಾಡಿದರೆ ಆಗ ಜೀವನಕ್ಕೆ ಹಿನ್ನಡೆಯಾಗುವುದಿಲ್ಲ ಎಂದು ಚಾಣಿಕ್ಯ ಹೇಳುತ್ತಾರೆ. ಹಾಗೆಯೇ ಕಾಗೆಯು ಯಾವ ದಿಕ್ಕಿನಿಂದ ಯಾವ ರೀತಿಯ ಅಪಾಯ ಬರುತ್ತಿದೆ ಎಂಬುದನ್ನು ಮೊದಲೇ ಗ್ರಹಿಸಬಲ್ಲದು. ಕೆಲವು ಘಟನೆಗಳ ಬಗ್ಗೆ ಅದಕ್ಕೆ ಮೊದಲೇ ತಿಳಿದಿರುತ್ತದೆ. ಅಲ್ಲದೆ, ಮನುಷ್ಯ ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ನಿಮ್ಮ ಸುತ್ತಲಿನ ಪರಿಸರವನ್ನು ವೀಕ್ಷಿಸಬೇಕು, ತುಂಬಾ ಜಾಗರೂಕರಾಗಿರುವ ಮೂಲಕ, ಅವರು ಕೆಲವು ಹೊಸ ವಿಷಯಗಳನ್ನು ಕಲಿಯುತ್ತಾರೆ. ಜೀವನದಲ್ಲಿ ಮುನ್ನಡೆಯುತ್ತಾರೆ. ಕಾಗೆಯ ಲಕ್ಷಣಗಳನ್ನು ಹೀಗೆ ಕಲಿತರೆ.. ಮಾನವನ ಜೀವನಕ್ಕೆ ಹಿನ್ನಡೆಯಾಗದು ಎಂದು ಚಾಣಿಕ್ಯ ಹೇಳುತ್ತಾರೆ.

Get real time updates directly on you device, subscribe now.