ವಿಜಯ್ ದೇವರಕೊಂಡ ಕೈ ಕೊಟ್ಟ ಮೇಲೆ, ಶ್ರೀ ದೇವಿ ಪುತ್ರಿ ಜಾಹ್ನವಿ ರವರಿಗೆ ಹುಡುಕಿಕೊಂಡು ಬಂದ ಅದೃಷ್ಟ: ಏನು ಗೊತ್ತೇ??
ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ತೀವ್ರ ಹಿನ್ನಡೆಯನ್ನು ಪಡೆದ ನಂತರ, ಜಾನ್ವಿ ಕಪೂರ್ ಅಂತಿಮವಾಗಿ ಇತ್ತೀಚಿಗೆ ಬಿಡುಗಡೆಯಾದ ಗುಡ್ ಲಕ್ ಜೆರ್ರಿ ಸಿನಿಮಾ ಮೂಲಕ ಮತ್ತೊಮ್ಮೆ ಆಗಮಿಸಿದ್ದಾರೆ. ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ನೇರವಾಗಿ ಬಿಡುಗಡೆಯಾದ ಈ ಸಿನಿಮಾ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ, ವಿಶೇಷವಾಗಿ ಜಾನ್ವಿಯ ಅಭಿನಯಕ್ಕಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಬಾಲಿವುಡ್ ಪೋರ್ಟಲ್ ಗೆ ಜಾನ್ವಿ ನೀಡಿದ ಪ್ರಚಾರದ ಸಂದರ್ಶನವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೀಡಿಯೋ ಸಂದರ್ಶನದಲ್ಲಿ, ಎನ್.ಟಿ.ಆರ್ ಸರ್ ಜೊತೆ ಕೆಲಸ ಮಾಡಲಿರುವುದು ನನಗೆ ಸಿಕ್ಕ ಗೌರವ ಎಂದು ಹೇಳಿದ್ದಾರೆ. ಮುಂಬರುವ ಸಿನಿಮಾ ಒಂದರಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಎದುರು ಜಾನ್ವಿ ನಟಿಸಿದ್ದಾರೆ ಎಂಬ ಊಹಾಪೋಹಗಳನ್ನು ಈಗ ಶುರು ಮಾಡಿದೆ. ಜಾನ್ವಿ ನಟಿಸಲಿರುವುದು ಕೊರಟಾಲ ಶಿವ ನಿರ್ದೇಶನ ಮಾಡಲಿರುವ ಆಕ್ಷನ್ ಸಿನಿಮಾದಲ್ಲೊ ಅಥವಾ ಇನ್ನು ಘೋಷಣೆಯಾಗದ ಬುಚ್ಚಿ ಬಾಬು ನಿರ್ದೇಶನ ಮಾಡಲಿರುವ ಸ್ಪೋರ್ಟ್ಸ್ ಚಿತ್ರಕ್ಕಾಗಿಯೋ ಎಂದು ಎನ್.ಟಿ.ಆರ್ ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಇವು ಕೇವಲ ಊಹಾಪೋಹಗಳಾಗಿದ್ದರು, ಅದರ ಬಗ್ಗೆ ಅಧಿಕೃತವಾದ ಮಾಹಿತಿ ಸಿಕ್ಕಿಲ್ಲ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಲೈಗರ್ ಸಿನಿಮಾದಲ್ಲಿ ತನ್ನ ನೆಚ್ಚಿನ ನಟ ವಿಜಯ್ ದೇವರಕೊಂಡ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಜಾನ್ವಿ ಕಳೆದುಕೊಂಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಜಾನ್ವಿ ಜ್ಯೂನಿಯರ್ ಎನ್.ಟಿಆ.ರ್ ಜೊತೆ ಕೆಲಸ ಮಾಡುವ ಈ ಅವಕಾಶವನ್ನು ಪಡೆದುಕೊಂಡರೆ, ಅದು ಜಾಕ್‌ಪಾಟ್ ಗಿಂತ ಕಡಿಮೆಯಿಲ್ಲ. ಜಾನ್ವಿ ಈಗಾಗಲೇ ತನ್ನ ಅಚ್ಚುಕಟ್ಟಾದ ಆಕೃತಿ ಮತ್ತು ಸೌಂದರ್ಯದಿಂದ ಯುವಜನರಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಎನ್.ಟಿ.ಆರ್ ಅವರೊಂದಿಗಿನ ಸಿನಿಮಾ ಖಂಡಿತವಾಗಿಯೂ ಅವರ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎನ್ನಲಾಗುತ್ತಿದೆ.