ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿಕೊಂಡು ಮದುವೆ ಮಾಡಿಕೊಂಡ ಹುಡುಗ, ಆದರೆ ಮೊದಲನೇ ರಾತ್ರಿಯೇ ಏನು ಮಾಡಿದ್ದಾಳೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆಯೆನ್ನುವುದು ಪ್ರಮುಖವಾದ ಅಂಶವಾಗಿರುತ್ತದೆ. ಈ ಕುರಿತಂತೆ ಗಂಡು ಹಾಗೂ ಹೆಣ್ಣು ಇಬ್ಬರ ನಡುವೆ ಕೂಡ ಸಾಕಷ್ಟು ಉತ್ಸಾಹ ಹಾಗೂ ಸಂತೋಷ ಮನೆಮಾಡಿರುತ್ತದೆ ಎಂದರೆ ತಪ್ಪಾಗಲಾರದು. ಆದರೆ ಇಂದು ಮದುವೆಯ ಇತಿಹಾಸದಲ್ಲಿ ಅತ್ಯಂತ ವಿಚಿತ್ರವಾಗಿ ಕಾಣಿಸಿಕೊಂಡಿರುವ ಮದುವೆ ಒಂದರ ಕುರಿತಂತೆ ನಾವು ಮಾತನಾಡಲು ಹೊರಟಿರುವುದು. ಇದು ನಡೆದಿರುವುದು ನಮ್ಮ ರಾಜ್ಯದಲ್ಲಿ ಅಲ್ಲ ಬದಲಾಗಿ ದೆಹಲಿಯ ಪಕ್ಕದಲ್ಲಿರುವ ಆಗ್ರಾದಲ್ಲಿ.
ಆಗ್ರಾದ ತಾಜ್ ಗಂಜ್ ಎನ್ನುವ ಪ್ರದೇಶದ ಬೆಳ್ಳಿ ವ್ಯಾಪಾರಿ ಒಬ್ಬರು ತಮ್ಮ ಮಗನಿಗಾಗಿ ಹೆಣ್ಣಿನ ಹುಡುಕಾಟದಲ್ಲಿದ್ದರು. ಹೌದು ಗೆಳೆಯರೆ ಮಗನಿಗೆ ಮದುವೆ ಮಾಡಿಸುವ ನಿಟ್ಟಿನಲ್ಲಿ ಅವರು ಹೆಣ್ಣಿನ ಹುಡುಕಾಟದಲ್ಲಿದ್ದರು. ಹೀಗಾಗಿ ಒಬ್ಬ ಕಾರ್ಮಿಕರ ಮಗಳನ್ನು ತಮ್ಮ ಮಗನಿಗೆ ಹೆಂಡತಿಯ ನಾಗಿ ತಂದುಕೊಳ್ಳುವ ಕುರಿತಂತೆ ಯೋಚಿಸಿ ಮದುವೆಗೆ ಒಪ್ಪಿ ಸಿದ್ಧರಾಗುತ್ತಾರೆ.
ಈ ಸಂದರ್ಭದಲ್ಲಿ ಮದುವೆಗೂ ಮುನ್ನ ಹೆಣ್ಣಿನ ಕಡೆಯ ಮಾವ ಮದುವೆ ಮಾಡಿಸಿ ಕೊಡುವಷ್ಟು ಹಣ ಹೆಣ್ಣಿನ ಕಡೆಯವರ ಬಳಿಯಿಲ್ಲ ಹೀಗಾಗಿ ಎರಡೂ ಕಡೆಯ ಮದುವೆ ಖರ್ಚನ್ನು ನೀವೇ ನೋಡಿಕೊಳ್ಳಿ ಎಂಬುದಾಗಿ ಗಂಡಿನ ಕಡೆಯವರಿಗೆ ಹೇಳುತ್ತಾರೆ. ಈ ಸಂದರ್ಭದಲ್ಲಿ ಗಂಡಿನ ಕಡೆಯವರು ಸಾಕಷ್ಟು ಅನುಕೂಲಸ್ಥರು ಆಗಿದ್ದರಿಂದ ಮದುವೆ ಖರ್ಚನ್ನು ನೋಡಿಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಎರಡು ಕಡೆಯವರು ಕೂಡ ಸಂತೋಷದಿಂದ ಮದುವೆ ಮಾಡಿಕೊಡಲು ಸಿದ್ಧರಾಗುತ್ತಾರೆ.
ಏಪ್ರಿಲ್ 25ರಂದು ಹೆಣ್ಣಿನ ಕಡೆಯವರು ಗೋರಕ್ ಪುರಕ್ಕೆ ಆಗಮಿಸಿ ವಧು-ವರರು ಇಬ್ಬರು ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಮದುವೆ ಕಾರ್ಯಕ್ರಮಗಳು ನಡೆದ ನಂತರ ಮರುದಿನ ಅಂದರೆ ಏಪ್ರಿಲ್ 26ರಂದು ಮತ್ತೆ ಆಗ್ರಹಕ್ಕೆ ವಾಪಸ್ ಆಗಬೇಕಾಗುತ್ತದೆ. ಹೌದು ಗೆಳೆಯರೇ ಇದೇ ದಿನದ ಮಧ್ಯರಾತ್ರಿಯಂದು ಮಧುಮಗಳು ಅತ್ತೆ ಮಾವಂದಿರನ್ನು ಕೋಣೆಯಲ್ಲಿ ಕೂಡಿಹಾಕಿ ಹಿತ್ತಲಿನಿಂದ ಕೆಳಕ್ಕೆ ಹಾರಿ ಓಡಿ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಗಂಡಿನ ಕಡೆಯವರು ಎಲ್ಲರೂ ಕೂಡ ಮದುಮಗಳನ್ನು ಹುಡುಕಲು ಇಲ್ಲದ ಹುಡುಕಾಟವನ್ನು ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಧುಮಗಳು ಹೊರಕ್ಕೆ ಓಡಿ ಹೋಗುತ್ತಿರುವುದು ಹಾಲಿನ ಸೆಕ್ಯೂರಿಟಿ ಗಾರ್ಡ್ ನೋಡಿ ತಡೆಯಲು ಕೂಡ ಪ್ರಯತ್ನಿಸಿದ್ದಾರಂತೆ. ಆದರೆ ಅವರನ್ನು ಕೂಡ ಹಿಮ್ಮೆಟ್ಟಿಸಿ ಮದುಮಗಳು ಓಡಿಹೋಗಿರುವುದು ತಿಳಿದುಬಂದಿದೆ. ಸುಖಾಸುಮ್ಮನೆ ಅದರಲ್ಲೂ ದಿಡೀರನೆ ಅನಿರೀಕ್ಷಿತವಾಗಿ ಮಧ್ಯರಾತ್ರಿ ಎಲ್ಲರಿಗೂ ಆಘಾತ ನೀಡಿ ಮದುಮಗಳು ಓಡಿಹೋಗಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಹಾಗಿದ್ದರೆ ನಡೆದಿರುವುದು ಏನು ಎಂಬುದನ್ನು ತಿಳಿಯುವುದಾದರೆ ಗಂಡನ ಮನೆಯವರನ್ನು ಕೂಡಿ ಹಾಕಿ ತಿಜೋರಿಯಲ್ಲಿ ಇದ್ದ ಹಣ ಹಾಗೂ ಆಭರಣಗಳನ್ನು ದೋಚಿದ ಹುಡುಗಿ ಓಡಿ ಹೋಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ ಈಗಾಗಲೇ ಕಂಪ್ಲೇಂಟ್ ಕೂಡ ದಾಖಲಾಗಿದೆ. ಈ ಕುರಿತಂತೆ ಹಲವಾರು ತನಿಖೆ ನಡೆಸಿದರೂ ಕೂಡ ಇನ್ನೂ ಕೂಡ ಸರಿಯಾದ ಫಲಿತಾಂಶ ಸಿಕ್ಕಿಲ್ಲ ಎಂಬುದಾಗಿ ತಿಳಿದುಬಂದಿದೆ. ಬಡ ಮನೆತನದ ಹುಡುಗಿ ಎಂಬ ಕಾರಣಕ್ಕಾಗಿ ತಾವೇ ಮದುವೆ ಖರ್ಚನ್ನು ಹಾಕಿಕೊಂಡು ಮದುವೆ ಮಾಡಿಕೊಂಡಿದ್ದರು ಕೂಡ ಆ ಹುಡುಗಿ ಮಾಡಿರುವ ಕಾರ್ಯ ನಿಜಕ್ಕೂ ಕೂಡ ಗಂಡು ಹಾಗೂ ಗಂಡಿನ ಮನೆಯವರಿಗೆ ತಲೆ ತಿರುಗುವಂತೆ ಮಾಡಿದೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ