ಮುಂದಿನ ಸೀಸನ್ ಗೆ ಆರ್ಸಿಬಿ ಬರಲಿದ್ದಾರೆಯೇ ಮತ್ತೊಬ್ಬ ಬಲಿಷ್ಠ ಆಟಗಾರ: ಈತ ಬಂದರೆ ಏನಾಗುತ್ತದೆ ಗೊತ್ತೇ?? ನಿಜಕ್ಕೂ ಈತ ಬೇಕೇ??
ನಮಸ್ಕಾರ ಸ್ನೇಹಿತರೇ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ಬಾರಿ ಕೂಡ ಬಲಿಷ್ಠ ತಂಡವನ್ನು ಹೊಂದಿದೆ ಎಂಬುದಾಗಿ ನಾವು ಅಂದುಕೊಳ್ಳುತ್ತೇವೆ ಆದರೆ ಕೊನೆಯ ಕ್ಷಣದಲ್ಲಿ ಒಂದಲ್ಲ ಒಂದು ಕೊರತೆಯ ಕಾರಣದಿಂದಾಗಿ ಕಪ್ ಗೆಲ್ಲುವುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈ ಚೆಲ್ಲುತ್ತಿದೆ ಎಂದರೆ ತಪ್ಪಾಗಲಾರದು. ಈ ಬಾರಿ ಕೂಡ ನೀವು ಗಮನಿಸಿದರೆ ಆರ್ಸಿಬಿ ತಂಡ ಬೇರೆ ಕೆಲವು ತಂಡಗಳಿಗೆ ಹೋಲಿಸಿದರೆ ಅತ್ಯುತ್ತಮ ತಂಡವಾಗಿ ಕಾಣಿಸಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೆಲವೊಂದು ಎಡವಟ್ಟುಗಳ ಕಾರಣದಿಂದಾಗಿ ಆರ್ಸಿಬಿ ತಂಡ ಈ ಬಾರಿ ಕಪ್ ಗೆಲ್ಲಲು ಸೆಮಿಫೈನಲ್ ಹಂತದಲ್ಲಿಯೇ ವಿಫಲವಾಗಿತ್ತು.
ಹೀಗಾಗಿ ಮುಂದಿನ ಬಾರಿ ಆರ್ಸಿಬಿ ತಂಡದಲ್ಲಿ ಯಾವೆಲ್ಲ ಆಟಗಾರರು ಬರಬೇಕು ಎನ್ನುವ ಕುರಿತಂತೆ ಈಗಾಗಲೇ ಹಲವಾರು ಚರ್ಚುಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಅದರಲ್ಲಿ ಪ್ರಮುಖವಾಗಿ ಇಂಗ್ಲೆಂಡ್ ತಂಡದ ಆಲ್-ರೌಂಡರ್ ಆಟಗಾರರಾಗಿರುವ ಬೆನ್ ಸ್ಟೋಕ್ಸ್ ಮುಂದಿನ ವರ್ಷ ಆರ್ಸಿಬಿ ತಂಡದಲ್ಲಿ ಆಡಬೇಕು ಎನ್ನುವುದಾಗಿ ಎಲ್ಲರೂ ಕೂಡ ಆಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಬ್ಬ ಇಂಗ್ಲೆಂಡ್ ತಂಡದ ಆಟಗಾರ ಆರ್ಸಿಬಿ ಎಲ್ಲಿ ಮುಂದಿನ ವರ್ಷ ಬರಲೇಬೇಕು ಎನ್ನುವುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಹೌದು ಗೆಳೆಯರೇ ಅವರು ಇನ್ಯಾರು ಅಲ್ಲ ಈ ಕಳೆದ ಕೆಲವು ವರ್ಷಗಳಿಂದ ಅದ್ಭುತ ಫಾರ್ಮ್ ನಲ್ಲಿರುವ ಇಂಗ್ಲೆಂಡ್ ತಂಡದ ಕಪ್ತಾನ ಆಗಿರುವ ಜೋ ರೂಟ್.
ಹೌದು ಗೆಳೆಯರೇ ಜೋ ರೂಟ್ ಇದುವರೆಗೂ ಯಾವುದೇ ಐಪಿಎಲ್ ನಲ್ಲಿ ಆಡಿಲ್ಲವಾದರೂ ಕೂಡ ಮುಂದಿನ ವರ್ಷ ಆರ್ಸಿಬಿ ತಂಡದಲ್ಲಿ ಅವರಿದ್ದರೆ ಖಂಡಿತವಾಗಿ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ರೂಟ್ ಮುಂದಿನ ವರ್ಷವಾದರೂ ತಮ್ಮನ್ನು ಐಪಿಎಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.