ನಿಮ್ಮ ಮನೆಗೆ ತಾಯಿ ಲಕ್ಷ್ಮಿ ಬರುವ ಮುನ್ನ ಬರುವ ಸೂಚನೆಗಳು ಯಾವ್ಯಾವು ಗೊತ್ತೇ?? ಯಾವೆಲ್ಲ ಶುಭದ ಸಂಕೇತ ಗೊತ್ತೇ?
ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಲಕ್ಷ್ಮೀದೇವಿಯ ಕ್ರಪೆ ಸಿಗಲಿ ಎಂಬುದಾಗಿ ಪ್ರತಿಯೊಬ್ಬರು ಕೂಡ ಪೂಜೆ ಪುನಸ್ಕಾರಗಳನ್ನು ಮಾಡುತ್ತಲೇ ಇರುತ್ತಾರೆ. ಕೇವಲ ಹಣಕ್ಕಾಗಿ ಮಾತ್ರವಲ್ಲದೆ ಜೀವನದಲ್ಲಿ ನೆಮ್ಮದಿ ಹಾಗೂ ಸಮೃದ್ಧಿಗಾಗಿ ಕೂಡ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಎನ್ನುವುದು ಅತ್ಯಂತ ಪ್ರಮುಖವಾಗಿರುತ್ತದೆ. ಆದರೆ ಲಕ್ಷ್ಮೀದೇವಿಯ ಆಗಮನದ ಮುನ್ಸೂಚನೆ ಸಿಕ್ಕರೆ ಖಂಡಿತವಾಗಿ ಎಷ್ಟು ಸಂತೋಷವಾಗಲ್ಲ ನೀವೇ ಹೇಳಿ. ಹಾಗಿದ್ದರೆ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಆಗಮನವಾಗುತ್ತಿದೆ ಎನ್ನುವುದನ್ನು ತಿಳಿಯುವ ಮುನ್ಸೂಚನೆ ಏನು ಎಂಬುದನ್ನು ತಿಳಿಯೋಣ ಬನ್ನಿ.
ಇದ್ದಕ್ಕಿದ್ದಂತೆ ಕಪ್ಪು ಇರುವೆಗಳ ಗುಂಪು ಏನನ್ನಾದರೂ ತಿನ್ನುವಂತೆ ಇದ್ದರೆ ಅದು ಕೂಡ ಸಂಕೇತವಾಗಿದೆ. ಮನೆಯಲ್ಲಿ ಹಕ್ಕಿ ಗೂಡನ್ನು ಕಟ್ಟುವುದು. ಮನೆಯ ಗೋಡೆಗಳಲ್ಲಿ ಒಂದೇ ಜಾಗದಲ್ಲಿ ಮೂರು ಹಲ್ಲಿಗಳು ಒಟ್ಟಾಗಿ ಕಾಣಿಸಿಕೊಳ್ಳುವುದು. ದೀಪಾವಳಿ ದಿನದಂದು ತುಳಸಿ ಗಿಡದ ಸುತ್ತ ಹಳ್ಳಿಗಳು ಕಾಣಿಸಿಕೊಂಡರೆ ಅದು ಕೂಡ ಲಕ್ಷ್ಮೀದೇವಿ ಆಗಮನದ ಸಂಕೇತ. ಪದೇ ಪದೇ ನಿಮ್ಮ ಬಲಗೈ ತುರಿಸಿದರೆ ಅದು ಕೂಡ ಲಕ್ಷ್ಮೀದೇವಿ ಆಗಮನದ ಸೂಚಕ. ಮಲಗಿರುವ ಸಂದರ್ಭದಲ್ಲಿ ನಿಮ್ಮ ಕನಸಿನಲ್ಲಿ ಗೂಬೆ ಪೊರಕೆ ಹೂಜಿ ಆನೆ ಮುಂಗುಸಿ ಶಂಖ ಹಲ್ಲಿ ಹಾವು ಕಾಣಿಸಿಕೊಂಡಿದ್ದರೆ ಅದು ಕೂಡ ಶುಭ ಸಂಕೇತವಾಗಿದೆ. ನೀವು ಬೆಳಗ್ಗೆ ಎದ್ದ ತಕ್ಷಣ ಶಂಕದ ಶಬ್ದ ಕೇಳಿದರೆ ಅದು ಕೂಡ ಶುಭ ಸಂಕೇತವಾಗಿದೆ.
ಮನೆಯಿಂದ ಕೆಲಸಕ್ಕೆ ಹೋಗುತ್ತಿರುವಾಗ ಅಥವಾ ಹೊರಗೆಲ್ಲಾದರೂ ಹೋಗುವಾಗ ನಿಮಗೆ ಕಬ್ಬು ಕಾಣಿಸಿಕೊಂಡರೆ ಅದನ್ನು ಶುಭ ಸಂಕೇತವಾಗಿದೆ. ಪ್ರಮುಖ ಕೆಲಸದ ಕಾರಣದಿಂದಾಗಿ ನೀವೆಲ್ಲಾದರೂ ಹೊರಗಡೆ ಹೋಗುವಾಗ ಯಾರಾದ್ರೂ ಗುಡಿ ಸುತ್ತಿರುವುದು ಕಂಡುಬಂದರೆ ಅತಿಶೀಘ್ರದಲ್ಲಿ ನಿಮ್ಮ ಬಳಿ ಹಣದ ಹರಿವು ಮೂಡಿಬರಲಿದೆ ಎಂಬುದಾಗಿದೆ. ಮನೆಯಿಂದ ಹೊರ ಹೋಗಬೇಕಾದರೆ ನಾಯಿಯೂ ಬಾಯಿಯಲ್ಲಿ ಸಸ್ಯಹಾರ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಬರುವುದು ಕಂಡುಬಂದರೆ ಅದು ಕೂಡ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಮೂಡಿಬರಲಿದೆ ಎನ್ನುವ ಮುನ್ಸೂಚನೆಯಾಗಿದೆ.