ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಬೆಲೆ ಬಾಳುವ ಫ್ಲಾಟ್ ಖರೀದಿ ಮಾಡಿದ ದೀಪಿಕಾ -ರಣವೀರ್: ಎಷ್ಟು ಕೋಟಿ ಹಾಗೂ ವಿಶೇಷತೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಅತ್ಯಂತ ಕ್ಯೂಟ್ ಹಾಗೂ ನೆಚ್ಚಿನ ಜೋಡಿಗಳಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದಾರೆ. ಪರಸ್ಪರ ಪ್ರೀತಿಸಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ದ ಇವರಿಬ್ಬರು ಮದುವೆಯಾದ ದಿನದಿಂದಲೂ ಕೂಡ ಸುದ್ದಿಯಲ್ಲಿದ್ದಾರೆ.
ಇಬ್ಬರೂ ಜೊತೆಯಾಗಿ ನಟಿಸಿರುವ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಯಾವ ಮಟ್ಟದಲ್ಲಿ ಸೂಪರ್ ಹಿಟ್ ಆಗಿ ಯಶಸ್ಸನ್ನು ಪಡೆದುಕೊಂಡಿದ್ದವು ಎಂಬುದು ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇನ್ನು ಈಗ ಇವರಿಬ್ಬರು ಸುದ್ದಿಯಾಗುತ್ತಿರುವುದು ಬೇರೆ ವಿಚಾರಕ್ಕಾಗಿ. ಹೌದು ಗೆಳೆಯರೇ ಬಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ಸ್ಟಾರ್ ನಟ ಹಾಗೂ ಸ್ಟಾರ್ ನಟಿ ಆಗಿರುವ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ದಂಪತಿಗಳು ಮುಂಬೈನ ಬಾಂದ್ರಾದ ಸಮುದ್ರದ ಅಂಚಿನಲ್ಲಿ ಐಷಾರಾಮಿ ಫ್ಲ್ಯಾಟನ್ನು ಖರೀದಿಸಿದ್ದಾರೆ. ಇದು ಈಗ ನ್ಯೂಸ್ ಆಫ್ ದಿ ಅವರ್ ಆಗಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಈ ಅಪಾರ್ಟ್ಮೆಂಟ್ ಇರೋದು ಬಾಲಿವುಡ್ ಚಿತ್ರರಂಗದ ದೊಡ್ಡ ಸ್ಟಾರ್ ಗಳಾಗಿರುವ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ರವರ ಮನೆಯ ಅಕ್ಕಪಕ್ಕದಲ್ಲೇ ಎಂಬುದಾಗಿ ತಿಳಿದುಬಂದಿದೆ.
ಹೌದು ಗೆಳೆಯರೇ ಇಬ್ಬರು ದಂಪತಿಗಳು 16 17 18 19 ನೇ ಅವರನ್ನು ಖರೀದಿಸಿದ್ದು ಬರೋಬ್ಬರಿ 119 ಕೋಟಿ ರೂಪಾಯಿ ವೆಚ್ಚವಾಗಿದೆ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಸಂಭಾವನೆ ವಿಚಾರದಲ್ಲಿ ಕೂಡ ಇವರಿಬ್ಬರು ಕೋಟ್ಯಾಂತರ ರೂಪಾಯಿ ಹಣ ಪಡೆಯುತ್ತಾರೆ ಹಾಗೂ ಜಾಹೀರಾತು ಹಾಗೂ ಸೋಶಿಯಲ್ ಮೀಡಿಯಾ ಮೂಲಕವೂ ಕೂಡ ಬ್ರಾಂಡ್ ಪ್ರಚಾರಗಳಿಗಾಗಿ ಕೋಟ್ಯಾಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ಹೀಗಾಗಿ ಈ ದೊಡ್ಡಮಟ್ಟದ ಫ್ಲಾಟ್ ಅನ್ನು ಖರೀದಿಸುವುದು ಇವರಿಗೆ ದೊಡ್ಡ ವಿಚಾರ ಆಗಿರುವುದಿಲ್ಲ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ.