ಯಾರಿಗಾದರೂ ಸರಿ ರಾಹು ಕೇತು ದೋಷ ಇದ್ದರೇ, ಈ ಕೆಲಸ ಮಾಡಿ ನಿವಾರಣೆ ಮಾಡಿಕೊಳ್ಳಿ.
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಹಾಗೂ ಕೇತು ಗ್ರಹಗಳು ಅವಳಿ ಗ್ರಹ ಗಳಾಗಿದ್ದು ದೇವಾನುದೇವತೆಗಳನ್ನು ಬಿಡದ ಈ ಗ್ರಹಗಳು ಮನುಷ್ಯರ ಮೇಲೆ ವಕ್ರ ದೃಷ್ಟಿಯನ್ನು ಇಟ್ಟರೆ ಖಂಡಿತವಾಗಿ ಅವರಿಗೂ ಕೂಡ ಕೆಟ್ಟ ಪ್ರಭಾವವನ್ನು ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಂತರ ಜೀವನ ನರಕ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ರಾಹು ಹಾಗೂ ಕೇತು ವಿನ ವಕ್ರದೃಷ್ಟಿಯಿಂದ ಸಾಮಾಜಿಕ ಜೀವನ ಎನ್ನುವುದು ಅಸ್ತವ್ಯಸ್ತವಾಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿ ಕೂಡ ತೀರ ಹದಗೆಡುತ್ತದೆ. ಹೀಗಾಗಿ ಇವರಿಬ್ಬರ ದೋಷದಿಂದ ಪಾರಾಗಲು ಕೆಲವೊಂದು ಕಾರ್ಯಗಳನ್ನು ಅನುಸರಿಸಬೇಕು. ಹಾಗಿದ್ದರೆ ಅವುಗಳೇನು ಎಂಬುದನ್ನು ನೋಡೋಣ ಬನ್ನಿ. ನಿಮ್ಮ ಜಾತಕದ ಮೇಲೆ ರಾಹುವಿನ ಕೆಟ್ಟ ದೃಷ್ಟಿ ಬಿದ್ದರೆ ಪ್ರತಿದಿನ ಶಿವನ ಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಈ ಸಂದರ್ಭದಲ್ಲಿ ಶಿವ ಚಾಲೀಸವನ್ನು ಜಪಿಸಿದರೆ ಶಿವನ ಅನುಗ್ರಹದಿಂದಾಗಿ ನೀವು ರಾಹುವಿನ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು.
ಗೋಮೇದಿಕ ಹರಳನ್ನು ನೀವು ಸದಾಕಾಲ ಧರಿಸುವುದರಿಂದ ರಾಹುವಿನ ಕೆಟ್ಟ ಕಣ್ಣಿನಿಂದ ಪಾರಾಗಬಹುದು. ದಿನಾಲು ಬೆಳಗೆ ತುಳಸಿ ಎಲೆಯ ನೀರನ್ನು ಸೇವಿಸಬೇಕು. ಗಾಢ ಕಪ್ಪು ಬಣ್ಣದ ಹೂವು ಬೆಚ್ಚಗಿನ ಉಡುಪು ಹಾಗೂ ಸಾಸಿವೆಯನ್ನು ನಿಮಗೆ ಎಷ್ಟು ಸಾಧ್ಯವೋ ಅಷ್ಟು ದಾನಮಾಡಬೇಕು. ಓಂ ಬ್ರಾಮ್ ಬ್ರೀಂ ಬ್ರೌ ಸಂ ರಾಹವೇ ನಮಃ ಎನ್ನುವ ಮಂತ್ರವನ್ನು ಜಪಮಾಲೆ ಜೊತೆಗೆ ಜಪಿಸುವುದರ ಮೂಲಕ ಕೂಡ ರಾಹುವಿನ ದೋಷದಿಂದ ಪಾರಾಗಬಹುದು.
ಕೇತುವಿನ ವಕ್ರ ಕಣ್ಣಿನಿಂದ ಪಾರಾಗಲು ಎಳ್ಳು ಬಾವುಟ ಕಣ್ಣು ಕಾಡಿಗೆ ಬೆಚ್ಚಗಿನ ಬಟ್ಟೆ ನವ ಧಾನ್ಯಗಳನ್ನು ಹಾಗೂ ಮೂಲಂಗಿಯನ್ನು ದಾನ ಮಾಡಬೇಕು. ಅದರಲ್ಲೂ ಈ ಎಲ್ಲಾ ವಸ್ತುಗಳನ್ನು ಭಾನುವಾರದಂದು ದಾನ ಮಾಡುವುದು ನಿಮ್ಮನ್ನು ಕೇತುವಿನ ವಕ್ರದೃಷ್ಟಿಯಿಂದ ಪಾರಾಗುವಂತೆ ಮಾಡುತ್ತದೆ.