ಮಾಧ್ಯಮದಲ್ಲಿ ತನ್ನ ಮಗುವಿನ ಕುರಿತು ಚರ್ಚೆ ನೋಡಿ, ಮೊದಲ ಬಾರಿಗೆ ಹತ್ತು ವರ್ಷದ ಬಳಿಕ ಮಾತನಾಡಿದ ರಾಮ್ ಚರಣ್ ಪತ್ನಿ, ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಚಿರಂಜೀವಿ ಅವರ ಪುತ್ರರಾಗಿರುವ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ರವರು ಇತ್ತೀಚಿಗಷ್ಟೇ ಆರ್ ಆರ್ ಆರ್ ಸಿನಿಮಾದ ಗೆಲುವಿನ ಸಿಹಿಯನ್ನು ಉಂಡಿದ್ದಾರೆ. ಈ ವರ್ಷವೇ ತಮ್ಮ ತಂದೆಯೊಂದಿಗೆ ಆಚಾರ್ಯ ಸಿನಿಮಾದಲ್ಲಿ ಕೂಡ ಜೊತೆಯಾಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ವಿಚಾರ ಆಗಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಮಚರಣ್ ರವರು ಉಪಾಸನಾ ರವರನ್ನು ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
ಕೇವಲ ಹೌಸ್ವೈಫ್ ಮಾತ್ರ ಆಗಿರದೆ ಉಪಾಸನಾ ರವರು ಒಬ್ಬ ಸ್ವಾವಲಂಬಿ ಉದ್ಯಮಿ ಮಹಿಳೆ ಕೂಡ ಆಗಿದ್ದಾರೆ ಎಂಬುದನ್ನು ಸಂತೋಷದಿಂದ ನಾವು ಹೇಳಬಹುದಾಗಿದೆ. ಆದರೆ ಇಷ್ಟೆಲ್ಲಾ ಯಶಸ್ವಿ ವ್ಯಕ್ತಿಗಳಾಗಿದ್ದರು ಕೂಡ ಇವರಿಬ್ಬರನ್ನು ಸಮಾಜ ಕೇಳುವ ಒಂದೇ ಒಂದು ಪ್ರಶ್ನೆಯೆಂದರೆ ಅದು ಮಕ್ಕಳು ಯಾವಾಗ ಎಂಬುದಾಗಿ. ಹೌದು ಗೆಳೆಯರೆ ಮದುವೆಯಾಗಿ ಹತ್ತು ವರ್ಷಗಳಾಗಿದ್ದರೂ ಕೂಡ ಇಂದಿಗೂ ಕೂಡ ರಾಮಚರಣ್ ಹಾಗೂ ಉಪಸನ ರವರಿಗೆ ಯಾವುದೇ ಮಕ್ಕಳಿಲ್ಲ. ಉಪಾಸನಾ ರವರು ತಮ್ಮ ತಂದೆಯ ಅಪೋಲೋ ಆಸ್ಪತ್ರೆಯ ಮೂಲಕ ಈಗಾಗಲೇ ಹಲವಾರು ಬಡಜನರಿಗೆ ವೈದ್ಯಕೀಯ ತಪಾಸಣೆ ಚಿಕಿತ್ಸೆ ಗಳನ್ನು ನೀಡುವ ಜನಸೇವೆ ಕೆಲಸವನ್ನು ಮಾಡಿದ್ದಾರೆ. ಈ ಕುರಿತಂತೆ ಉಪಾಸನೆ ಈಗ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಹೌದು ಗೆಳೆಯರೇ ಇದರ ಕುರಿತಂತೆ ಮಾತನಾಡಿರುವ ಉಪಾಸನಾ ನನ್ನ ಜೀವನದಲ್ಲಿ 3 ಆರ್ ಗಳು ಪ್ರಮುಖ. ಮೊದಲನೇ ಆರ್ ನನ್ನ ರಿಲೇಷನ್ಶಿಪ್. ಎರಡನೇ ಆರ್ ರಿ ಪ್ರೊಡ್ಯೂಸ್ ಅಂದರೆ ಮಕ್ಕಳನ್ನು ಪಡೆಯುವ ಸಾಮರ್ಥ್ಯ. ಮೂರನೇ ಆರ್ ಜೀವನದಲ್ಲಿ ನನ್ನ ರೋಲ್. ಉಪಾಸನಾ ಅವರ ಈ ಪ್ರತಿಕ್ರಿಯೆಗೆ ಸದ್ಗುರು ರವರು ಮಕ್ಕಳನ್ನು ಪಡೆಯುವಂತೆ ನಿಮ್ಮನ್ನು ಯಾರೂ ಒತ್ತಾಯ ಮಾಡುವಂತಿಲ್ಲ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಉಪಾಸನಾ ನಿಮ್ಮ ಮಾತುಗಳನ್ನು ಕೇಳಿದರೆ ಕಂಡಿತವಾಗಿ ನನ್ನ ಅಮ್ಮ ಹಾಗೂ ಅತ್ತೆ ನಿಮಗೆ ಕರೆ ಮಾಡುತ್ತಾರೆ ಎಂಬುದಾಗಿ ಹಾಸ್ಯಸ್ಪದವಾಗಿ ಮಾತನಾಡಿದ್ದಾರೆ. ಈ ವಿಡಿಯೋ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ಇದ್ದು ಈಗಾಗಲೇ ವೈರಲ್ ಆಗಿದೆ.