ಈ ಆಟಗಾರ ವಿಶ್ವಕಪ್ ಗೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದ ರೋಹಿತ್, ಸರಿಯಾಗಿ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು. ಯಾರು ಬೇಡ ಅಂತೇ ಗೊತ್ತೇ?

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯದ ನಂತರ ಇಂಗ್ಲೆಂಡ್ ವಿರುದ್ಧ ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನು ಆಡಲಿದೆ. ಇನ್ನು ಈ ತಂಡವನ್ನು ಸ್ವತಹ ರೋಹಿತ್ ಶರ್ಮಾ ರವರೆ ನಾಯಕನಾಗಿ ಮುನ್ನಡೆಸಲಿದ್ದಾರೆ. ಈಗ ನಡೆಯುತ್ತಿರುವ ಹಾಗೂ ನಡೆಯಲಿರುವ ಎಲ್ಲಾ ವಿದೇಶಿ ಸರಣಿಗಳು ಮುಂದೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಅಭ್ಯಾಸ ಪಂದ್ಯ ಗಳಂತೆ ಎಂದು ಭಾವಿಸಬಹುದಾಗಿದೆ.

ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಇಬ್ಬರೂ ಕೂಡ ಇದರ ಕುರಿತಂತೆ ವಿಶೇಷವಾಗಿ ಗಮನ ವಹಿಸಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮರವರು ಈಗ ಒಬ್ಬ ಆಟಗಾರ ಖಂಡಿತವಾಗಿ ಟಿ-ಟ್ವೆಂಟಿ ವಿಶ್ವಕಪ್ ಗೆ ಆಯ್ಕೆ ಆಗಬಹುದಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಹೌದು ಗೆಳೆಯೇ ಯಅದಿನ್ಯಾರು ಅಲ್ಲ ಕಾಶ್ಮೀರ ಮೂಲದ ಐಪಿಎಲ್ ಸ್ಟಾರ್ ವೇಗಿಯಾಗಿರುವ ಉಮ್ರನ್ ಮಲಿಕ್. ಈಗಾಗಲೇ ಐಪಿಎಲ್ ನಲ್ಲಿ ವೇಗದ ಬೌಲಿಂಗ್ ಮೂಲಕ ಮಿಂಚು ಹರಿಸಿರುವ ಮಲ್ಲಿಕ್ ಸೌತ್ ಆಫ್ರಿಕಾ ಸರಣಿಯಲ್ಲಿ ಆಯ್ಕೆಯಾದರೂ ಕೂಡ ಆಟವಾಡಲು ಸಾಧ್ಯವಾಗಿರಲಿಲ್ಲ ಹೀಗಾಗಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅಸಮಾಧಾನಕರ ಪ್ರದರ್ಶನವನ್ನು ನೀಡಿರುವ ಮಲ್ಲಿಕ್ ಇಂಗ್ಲೆಂಡ್ ಸರಣಿಯಲ್ಲಿ ಆಡುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ರೋಹಿತ್ ಶರ್ಮಾ ರವರು ಕೂಡ ಮಲ್ಲಿಕ್ ಗಾಗಿಯೇ ಕೆಲವೊಂದು ಜವಾಬ್ದಾರಿಗಳನ್ನು ಆತನಿಗೆ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ ಅದನ್ನು ಹೇಗೆ ಆತ ನಿಭಾಯಿಸುತ್ತಾನೆ ಎನ್ನುವುದರ ಮೇಲೆ ಆತ ಟಿ-ಟ್ವೆಂಟಿ ವಿಶ್ವಕಪ್ ಗೆ ಆಯ್ಕೆಯಾಗುತ್ತಾನೆ ಇಲ್ಲವೋ ಎಂಬುದನ್ನು ನಿರ್ಧರಿಸಬೇಕಾಗಿದೆ ಎಂಬುದಾಗಿ ಹೇಳಿದ್ದಾರೆ. ಆದರೆ ಈಗ ನೆಟ್ಟಿಗರು ರೋಹಿತ್ ಶರ್ಮಾ ಅವರ ಹೇಳಿಕೆಯ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಯಾಕೆಂದರೆ ಮಲಿಕ್ ರವರಿಗೆ ಅಂತರಾಷ್ಟ್ರೀಯ ಬಂದಿಗಳ ಆಟದ ಅನುಭವ ಅತ್ಯಂತ ಕಡಿಮೆ ಇದೆ. ಇಷ್ಟು ಬೇಗ ವಿಶ್ವಕಪ್ ಒತ್ತಡವನ್ನು ಹೇರುವುದು ಸರಿಯಲ್ಲ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿ.

Get real time updates directly on you device, subscribe now.