ನೇರವಾಗಿ ಭಾರತ ತಂಡದ ಆಟಗಾರನ ನಡೆಯನ್ನು ಹುಚ್ಚುತನ ಎಂದ ಪೀಟರ್ಸನ್, ಗೆಲ್ಲುವ ಪಂದ್ಯ ಸೋಲಲು ಯಾರು ಕಾರಣ ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಇಂಗ್ಲೆಂಡ್ ತಂಡದ ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಸೋಲುವ ಮೂಲಕ ಗೆಲ್ಲುವ ಟೆಸ್ಟ್ ಸರಣಿಯನ್ನು ಸೋತಿದೆ. ಮೊದಲ ಇನ್ನಿಂಗ್ಸನ್ನು ಅದ್ದೂರಿಯಾಗಿ ಆಡಿದ ಭಾರತೀಯ ಕ್ರಿಕೆಟ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಸಂಪೂರ್ಣವಾಗಿ ಮಂಕಾಗಿತ್ತು. 378 ರನ್ನುಗಳ ಗುರಿಯನ್ನು ಹೊಂದಿದ್ದ ಇಂಗ್ಲೆಂಡ್ ತಂಡ ಜೋ ರೂಟ್ ಹಾಗೂ ಜಾನಿ ಬೇರ್ಸ್ಟೋ ರವರ ಅತ್ಯುತ್ತಮ ಜೊತೆಯಾಟದ ಮೂಲಕ ಅನಾಯಾಸವಾಗಿ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿರುವುದು ನಿಜಕ್ಕೂ ಕೂಡ ಆಶ್ಚರ್ಯಕರವಾಗಿದೆ.
ಯಾಕೆಂದರೆ ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ದೊಡ್ಡಮಟ್ಟದ ಮೊತ್ತವನ್ನು ಪೇರಿಸಿತ್ತು. ಹೀಗಾಗಿ ಭಾರತೀಯ ಕ್ರಿಕೆಟ್ ತಂಡ ಸುಲಭವಾಗಿ ಗೆಲ್ಲುತ್ತದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ನಲ್ಲಿ ಕಳೆದ ಪ್ರದರ್ಶನವನ್ನು ನೀಡಿದ್ದು ಮಾತ್ರವಲ್ಲದೆ 378 ರನ್ನುಗಳನ್ನು ಗುರಿಯನ್ನು ಕೂಡ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಭಾರತೀಯ ಕ್ರಿಕೆಟ್ ತಂಡದ ಸುಲಭ ಗೆಲುವು ಕೈಜಾರಿದ್ದಕ್ಕೆ ಒಬ್ಬ ಆಟಗಾರ ಕಾರಣ ಎನ್ನುವುದಾಗಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಆಗಿರುವ ಕೆವಿನ್ ಪೀಟರ್ಸನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೌದು ಗೆಳೆಯರೇ ಸುಲಭವಾಗಿ ಗೆಲ್ಲ ಬೇಕಾಗಿದ್ದ ಟೆಸ್ಟ್ ಸರಣಿಯನ್ನು ಭಾರತೀಯ ಕ್ರಿಕೆಟ್ ತಂಡದ ಹಂಗಾಮಿ ನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ರವರ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ತಂಡ ಸೋಲುವಂತಾಯಿತು ಎಂಬುದಾಗಿ ಹೇಳಿದ್ದಾರೆ. ರನ್ ಗಳು ಒಂದು ಫೀಲಿಂಗ್ ಕ್ಷೇತ್ರದಲ್ಲಿ ಸೋರಿಕೆ ಆಗುತ್ತಿದ್ದರು ಕೂಡ ಸರಿಯಾದ ಫೀಲಿಂಗ್ ಸೆಟ್ ಮಾಡಿಲ್ಲ ಎಂಬುದಾಗಿ ಜಸ್ಪ್ರೀತ್ ಬೂಮ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಇಲ್ಲಿ ಜಸ್ಪ್ರೀತ್ ಬುಮ್ರಾ ರವರ ನಾಯಕತ್ವದ ಕೊರತೆ ಎದ್ದು ಕಂಡಿದೆ ಎಂಬುದಾಗಿ ಕೆವಿನ್ ಪೀಟರ್ಸನ್ ಹೇಳಿದ್ದಾರೆ.