ವಿಶೇಷತೆಗಳಿಂದ ಕೂಡಿರುವ ಈ ಜಾಕು ಬರ್ಡ್ ಕಾಫಿಯಾ ಬೆಲೆ ಎಷ್ಟು ಗೊತ್ತೇ?? ಬೆಲೆ ಕೇಳಿದರೆ ಸಾಕು ಕೊಂಡು ಕೊಳ್ಳುವ ಆಲೋಚನೆ ಮಾಡುವುದಿಲ್ಲ
ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಹಲವಾರು ಜನರು ಬೆಳಗ್ಗೆದ್ದ ತಕ್ಷಣ ಕಾಫಿ ಹೀರುವುದನ್ನು ಸಾಕಷ್ಟು ಇಷ್ಟಪಡುತ್ತಾರೆ ಎಂದರೆ ತಪ್ಪಾಗಲಾರದು. ಕಾಫಿ ಪ್ರಿಯರು ಈ ವಿಶ್ವದಲ್ಲಿ ಸಾಕಷ್ಟು ಮಂದಿ ಇದ್ದಾರೆ ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಜಗತ್ತಿನ ಜನರಲ್ಲಿ 30ರಿಂದ 40 ಪ್ರತಿಶತ ಜನರು ಕಾಫಿಯನ್ನು ಸೇವಿಸುತ್ತಾರೆ ಇದು ಎರಡು ಅಚ್ಚರಿಪಡುವಂತಹ ವಿಚಾರ. ಅದರಲ್ಲಿಯೂ ನೆದರ್ಲ್ಯಾಂಡ್ ಫಿನ್ಲ್ಯಾಂಡ್ ಹಾಗೂ ಸ್ವೀಡನ್ ದೇಶಗಳಲ್ಲಿ ಕಾಫಿಯನ್ನು ಸೇವಿಸುವ ಜನಸಂಖ್ಯೆ ಹೆಚ್ಚಾಗಿದೆ. ಕಾಫಿಯಲ್ಲಿ ಹಲವಾರು ಬ್ರಾಂಡ್ಗಳು ನಮ್ಮ ಪ್ರಪಂಚದಾದ್ಯಂತ ಇವೆ.
ಅದರಲ್ಲಿ ವಿಶ್ವದ ಅತ್ಯಂತ ದುಬಾರಿ ಕಾಫಿಯಲ್ಲಿ ಜಾಕು ಬರ್ಡ್ ಕಾಫಿ ಅತ್ಯಂತ ದುಬಾರಿ ಕಾಫಿ ಆಗಿ ಹೆಸರನ್ನು ಗಳಿಸಿಕೊಂಡಿದೆ. ಇದು ಕೇವಲ ದುಬಾರಿ ಮಾತ್ರವಲ್ಲದೆ ಅತ್ಯಂತ ಅಪರೂಪದ ಕಾಫಿ ಕೂಡ ಆಗಿದೆ. ಇದು ಬ್ರೆಜಿಲ್ ದೇಶದ ಕ್ಯಾಮೋಸಿಮ್ ನ ಸಣ್ಣಸಣ್ಣ ಕಾಫಿ ಎಸ್ಟೇಟುಗಳಲ್ಲಿ ಬೆಳೆಯಲಾಗುತ್ತದೆ. ಇದನ್ನು ಬೆಳೆಸಲು ಕೂಡ ಬಂಡವಾಳ ಹೆಚ್ಚಾಗಿ ಬೇಕಾಗುತ್ತದೆ. ಇದರ ಆವಿಷ್ಕಾರದ ಹಿಂದೆ ಒಂದು ಕಥೆ ಇದ್ದು ಬ್ರೆಜಿಲ್ನಲ್ಲಿ ಮೊದಲು ಹೆನ್ರಿಕ್ಸ್ ಸ್ಲೋಫರ್ ಡಿ ಎನ್ನುವವರ ಕೃಷಿ ಜಾಗವನ್ನು ಜಾಕು ಪಕ್ಷಿಗಳು ಹಾಳುಗೆಡವುತ್ತಿದ್ದವು. ಬ್ರೆಜಿಲ್ ದೇಶದ ಕಾನೂನಿನ ಪ್ರಕಾರ ಅವುಗಳಿಗೆ ಏನೂ ಮಾಡೋ ಹಾಗಿರಲಿಲ್ಲ.
ಹೀಗಾಗಿ ಉಪಾಯ ಮಾಡಿ ಜಾಕು ಪಕ್ಷಿಗಳ ತ್ಯಾಜ್ಯದಿಂದಲೇ ಈ ಕಾಫಿ ಬೀಜಗಳನ್ನು ಬೆಳೆಸರಲು ಆರಂಭಿಸುತ್ತಾರೆ. ಇನ್ನು ಈ ಕಾಫಿಯ ರುಚಿ ಮೈಲ್ಡ್ ಹಾಗೂ ಸಿಹಿ ಆಗಿರುತ್ತದೆ. ಇನ್ನು ಈ ಕಾಫಿಯ ಬೆಲೆ ಕೇಳಿದರೆ ಅದನ್ನು ಖರೀದಿಸುವುದಿರಲಿ ಅದರ ಯೋಚನೆಯನ್ನು ಮಾಡೋದು ಕೂಡ ಅನುಮಾನಾನೇ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಹೌದು ಗೆಳೆಯರೇ ಜಾಕು ಬರ್ಡ್ ಕಾಫಿಯ ಬೆಲೆ ಬರೋಬ್ಬರಿ ಭಾರತೀಯ ಕರೆನ್ಸಿಯಲ್ಲಿ 79000 ರೂಪಾಯಿ ಆಗಿದೆ. ಈಗ ಹೇಳಿ ನೀವು ಇದನ್ನು ಖರೀದಿಸಬಲ್ಲೀರ ಕಾಮೆಂಟ್ ಮಾಡಿ ತಿಳಿಸಿ.