ಮತ್ತೊಂದು ಹೊಸ ಫೋಟೋಶೂಟ್ ನಲ್ಲಿ ಭಾಗಿಯಾಗಿ ಮಸ್ತ್ ಫೋಟೋಗಳನ್ನು ತೆಗೆಸಿಕೊಂಡ ಅಮೂಲ್ಯ: ಎರಡು ಮಕ್ಕಳು ತಾಯಿಗೆ ಫ್ಯಾನ್ಸ್ ಕೇಳಿದ್ದು ಅದೊಂದೇ ಪ್ರಶ್ನೆ. ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಅಮೂಲ್ಯ ಅವರು ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಕಾಲಿಟ್ಟವರು. ನಂತರ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ಜೋಡಿ ಆಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ನಾಯಕ ನಟಿಯಾಗಿ ತಮ್ಮ ವಿಭಿನ್ನ ಪಾತ್ರಗಳ ಆಯ್ಕೆ ಗಳ ಮೂಲಕ ನಟಿ ಅಮೂಲ್ಯ ರವರು ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸಂದರ್ಭದಲ್ಲಿಯೇ ಮದುವೆಯಾಗುವ ಅವರು ಮದುವೆಯಾದ ನಂತರ ಚಿತ್ರರಂಗಳಲ್ಲಿ ಹೆಚ್ಚಿನ ಸಿನಿಮಾ ಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಇದಾದ ನಂತರ ಇತ್ತೀಚೆಗಷ್ಟೇ ನಟಿ ಅಮೂಲ್ಯ ರವರು ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿಯರು ತಮ್ಮ ಗ್ಲಾಮರ್ ಹಾಗೂ ಸೌಂದರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಬಾಡಿಗೆ ತಾಯ್ತನಕ್ಕೆ ಮೊರೆ ಹೋಗುತ್ತಾರೆ. ಅದಕ್ಕೆ ಉದಾಹರಣೆ ಎಂದರೆ ಪ್ರಿಯಾಂಕ ಚೋಪ್ರಾ ಎಂದು ಹೇಳಬಹುದಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಮಗುವಿಗೆ ಜನ್ಮ ನೀಡಿದ ನಂತರ ಅವರು ದೇಹದ ಗಾತ್ರದಲ್ಲಿ ದಪ್ಪ ಆಗುವುದನ್ನು ಕೂಡ ನಾವು ಗಮನಿಸಿರುತ್ತೇವೆ. ಆದರೆ ಅಮೂಲ್ಯ ರವರು ಇತ್ತೀಚಿಗಷ್ಟೇ ಮಾಡಿಸಿರುವ ಫೋಟೋಶೂಟ್ ನಲ್ಲಿ ಅವರು ತುಂಬಾನೇ ತೆಳ್ಳಗೆ ಹಾಗೂ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋವನ್ನು ನೋಡಿರುವ ನೆಟ್ಟಿಗರು ಅಮೂಲ್ಯ ಅವರ ಫೋಟೋ ಕೆಳಗಡೆ ಇರುವ ಕಾಮೆಂಟ್ ಬಾಕ್ಸ್ನಲ್ಲಿ ಅಮೂಲ್ಯ ಅವರು ನೀವು ಸಕ್ಕತ್ ಸ್ಲಿಮ್ ಆಗಿ ಕಾಣಿಸಿಕೊಳ್ಳುತ್ತಿದ್ದೀರ ಇದರ ಹಿಂದಿನ ರಹಸ್ಯವೇನು ನಿಮ್ಮ ವರ್ಕೌಟ್ ದಿನಚರಿಯನ್ನು ನಮಗೆ ತಿಳಿಸಿಕೊಡಿ ಎಂಬುದಾಗಿ ಪ್ರಶ್ನೆ ಹಾಕಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೆಲವೇ ತಿಂಗಳುಗಳ ನಂತರ ಈ ಫೋಟೋ ಶೂಟ್ ಮಾಡಿಸಿದರು ಕೂಡ ಅಮೂಲ್ಯ ಅವರ ಶಿಸ್ತುಬದ್ಧ ದಿನಚರಿ ಅವರ ದೈಹಿಕ ಆರೋಗ್ಯಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.