ಒಂದಲ್ಲ ಎರಡಲ್ಲ ಮುಂದಿನ 24 ತಿಂಗಳಿಗೆ ಶನಿ ದೇವನ ಕೃಪೆಯಿಂದ ಹಣದ ಮಳೆಯನ್ನು ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ??-
ನಮಸ್ಕಾರ ಸ್ನೇಹಿತರೇ ಮೂವತ್ತು ವರ್ಷಗಳ ನಂತರ ಶನಿದೇವ ತನ್ನದೇ ರಾಶಿಯಾಗಿರುವ ಕುಂಭ ರಾಶಿಗೆ ಏಪ್ರಿಲ್ 29ರಂದು ಪ್ರವೇಶಿಸಿದ್ದನು. ಜೂನ್ 5ರಿಂದ ಈಗಾಗಲೇ ಹಿಮ್ಮುಖ ಚಲನೆಯನ್ನು ಆರಂಭಿಸಿರುವ ಶನಿ 2024 ರವರೆಗೆ ಇದೇ ರಾಶಿಯಲ್ಲಿ ಉಳಿದುಕೊಳ್ಳಲಿದ್ದಾನೆ. ಈ ಸಂದರ್ಭದಲ್ಲಿ ಮೂರು ರಾಶಿಯವರಿಗೆ ರಾಜಯೋಗ ಸಿಗುತ್ತದೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿದ್ದು ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ; ಉದ್ಯೋಗ ಕ್ಷೇತ್ರದಲ್ಲಿ ಕೆಲಸದಲ್ಲಿ ಸಿಗುವಂತಹ ಗೆಲುವು ಹಾಗೂ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಸಿಕ್ಕುವ ಲಾಭಗಳಿಂದ ಮೇಷ ರಾಶಿಯವರಿಗೆ ಆದಾಯ ಹೆಚ್ಚಳ ಕಂಡು ಬರಲಿದೆ. ಹೊಸ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಅತಿಶೀಘ್ರದಲ್ಲಿ ಶುಭಸುದ್ದಿ ಸಿಗಲಿದೆ. ನೀಲಿ ರತ್ನವನ್ನು ಧರಿಸುವುದು ಶನಿದೇವ ನಿಮ್ಮತ್ತ ಪ್ರಸನ್ನನಾಗಿ ಇರುವಂತೆ ಮಾಡುತ್ತದೆ.
ವೃಷಭ ರಾಶಿ; ವೃಷಭರಾಶಿಯವರ ಕರ್ಮ ಕ್ಷೇತ್ರದಲ್ಲಿ ಶನಿಯ ಪ್ರವೇಶ ಇರುವ ಕಾರಣದಿಂದಾಗಿ 2024 ರವರೆಗೆ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಾಧನೆಯನ್ನು ಮಾಡಲಿದ್ದೀರಿ. ಯಾವುದೇ ಅಡೆತಡೆಗಳು ಬಂದರೂ ಕೂಡ ವೃತ್ತಿ ಕ್ಷೇತ್ರದಲ್ಲಿ ಸವ್ಯಸಾಚಿ ಸಾಧನೆಯನ್ನು ಮಾಡಿ ಪ್ರತಿಷ್ಠೆಯನ್ನು ಸಂಪಾದಿಸಲಿದ್ದೀರಿ.
ಧನು ರಾಶಿ; ಧೈರ್ಯ ಶೌರ್ಯ ಆತ್ಮವಿಶ್ವಾಸಗಳು ಈ ಸಂದರ್ಭದಲ್ಲಿ ಧನುರಾಶಿಯವರನ್ನು ಹೆಚ್ಚಿರುವ ಕಾರಣದಿಂದಾಗಿ ಯಾವುದೇ ಕಷ್ಟದ ಕೆಲಸಗಳನ್ನು ಕೂಡ ಸುಲಭವಾಗಿ ಮಾಡಬಲ್ಲರು. ನಿಮ್ಮ ವಿರುದ್ದ ಶತ್ರುಗಳು ಏನೇ ಮಾಡಿದರೂ ಕೂಡ ನೀವು ಗೆಲ್ಲುತ್ತೀರಿ ಹಾಗೂ ಕೆಲಸದ ಸ್ಥಳದಲ್ಲಿ ವಿಶೇಷವಾದ ಗೌರವ ನಿಮ್ಮದಾಗಲಿದೆ. ಈ ಸಂದರ್ಭದಲ್ಲಿ ಶನಿದೇವರ ಪೂಜಾ ಕ್ರಮಗಳನ್ನು ಅನುಸರಿಸುವುದು ಪ್ರಮುಖವಾಗಿದೆ.