ಸಲ್ಮಾನ್ ಕಷ್ಟದಲ್ಲಿ ಇದ್ದು, ಬಟ್ಟೆ ಕೊಳ್ಳಲು ಹಣ ಇಲ್ಲದೆ ಇದ್ದಾಗ, ಸಹಾಯ ಮಾಡಿದ ಕನ್ನಡಿಗ ಯಾರು ಗೊತ್ತೇ?? ಸಲ್ಮಾನ್ ಆ ಕನ್ನಡಿಗನ ಕುರಿತು ಹೇಳಿದ್ದೇನು ಗೊತ್ತೆ?
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಂದಿನ ದಿನದಲ್ಲಿ ಅವರು ಯಾವುದೇ ರೀತಿಯ ಸಿನಿಮಾವನ್ನು ಮಾಡಿದರು ಕೂಡ ಬಾಕ್ಸಾಫೀಸಿನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುತ್ತದೆ. ಅದಕ್ಕಾಗಿ ಅವರನ್ನು ಬಾಲಿವುಡ್ನ ಬಿಗ್ ಸ್ಟಾರ್ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಯುವ ಪ್ರತಿಭೆಗಳಿಗೆ ಕೂಡ ತಮ್ಮ ಸಲ್ಮಾನ್ ಖಾನ್ ಫಿಲಂಸ್ ಸಂಸ್ಥೆಯ ಮೂಲಕ ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದಾರೆ.
ಇನ್ನು ಇತ್ತೀಚಿಗಷ್ಟೇ ದುಬೈನಲ್ಲಿ ನಡೆದಿರುವ ಪ್ರತಿಷ್ಠಿತ ಐಫಾ ಫಿಲಂ ಅವಾರ್ಡ್ ಸಮಾರಂಭದಲ್ಲಿ ಸಲ್ಮಾನ್ ಖಾನ್ ರವರು ತಮ್ಮ ಆರಂಭಿಕ ದಿನಗಳ ಕುರಿತಂತೆ ಬಿಚ್ಚಿಟ್ಟಿದ್ದು ಬಾಲಿವುಡ್ ಚಿತ್ರರಂಗದ ಒಬ್ಬ ಖ್ಯಾತ ನಟ ತನಗೆ ಮಾಡಿರುವ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ಅದು ಕೂಡ ಒಬ್ಬ ಕನ್ನಡಿಗ ಅವರಿಗೆ ಮಾಡಿರುವ ಸಹಾಯವನ್ನು ಅವರು ನೆನಪಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಅದು ಇನ್ಯಾರು ಅಲ್ಲ ನಮ್ಮ ಮಂಗಳೂರು ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುನಿಲ್ ಶೆಟ್ಟಿ ರವರು.
ಹೌದು ಗೆಳೆಯರೆ ಇದು ಸಲ್ಮಾನ್ ಖಾನ್ ಅವರ ಆರಂಭಿಕ ದಿನಗಳಲ್ಲಿ ನಡೆದಂತಹ ಘಟನೆ ಕುರಿತಂತೆ ಅವರು ಈ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಬಟ್ಟೆಯನ್ನು ಖರೀದಿಸಲು ಹಣ ಇರಲಿಲ್ಲ. ಆಗ ಸ್ವತಹ ಸುನಿಲ್ ಶೆಟ್ಟಿ ರವರೆ ಸಲ್ಮಾನ್ ಖಾನ್ ರವರಿಗೆ ತಮ್ಮ ಸ್ವಂತ ಹಣದಲ್ಲಿ ಸ್ಟೋನ್ ವಾಶ್ ಶರ್ಟನ್ನು ಗಿಫ್ಟ್ ನೀಡಿದರು. ನಂತರ ಸಲ್ಮಾನ್ ಖಾನ್ ಅವರ ಕಣ್ಣು ಪರ್ಸ್ ಮೇಲೆ ಹೋದಾಗ ಅದನ್ನು ಕೂಡ ಅವರು ಖರೀದಿಸಿ ಕೊಟ್ಟಿದ್ದರು. ಇದನ್ನು ಸುನಿಲ್ ಶೆಟ್ಟಿ ರವರ ಪುತ್ರ ಆಹಾನ್ ರವರ ಎದುರಿಗೆ ಹೇಳುತ್ತಾ ಸಲ್ಮಾನ್ ಖಾನ್ ಅವರು ಭಾವುಕರಾಗಿ ರುವ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದ್ದು ಸುನಿಲ್ ಶೆಟ್ಟಿ ರವರ ಒಳ್ಳೆಯ ಮನಸ್ಸಿನ ಪರಿಚಯ ಎಲ್ಲರಿಗೂ ಆದಂತಿದೆ.