ಮುಂದಿನ ಟಿ 20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಬೇಕೆ ಬೇಡವೇ?? ವೀರೇಂದ್ರ ಸೆಹ್ವಾಗ್ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಕಳೆದ ವರ್ಷ ನಡೆದಿರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ನಾಕ್ಔಟ್ ಹಂತಕ್ಕೆ ಸೇರ್ಪಡೆಯಾಗುವ ಮುನ್ನವೇ ಭಾರತೀಯ ಕ್ರಿಕೆಟ್ ತಂಡ ಹೊರಬಿದ್ದಿತ್ತು. ಅದಕ್ಕಾಗಿ ಈ ಬಾರಿ ಶತಾಯಗತಾಯ ಪ್ರಯತ್ನ ಮಾಡಿ ಖಂಡಿತವಾಗಿ ಗೆಲ್ಲಲೇಬೇಕು ಎನ್ನುವ ತಯಾರಿಯನ್ನು ಭಾರತೀಯ ಕ್ರಿಕೆಟ್ ತಂಡ ಹಾಗೂ ಮ್ಯಾನೇಜ್ಮೆಂಟ್ ಈಗಾಗಲೇ ನಡೆಸಲು ಪ್ರಾರಂಭಿಸಿದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಉತ್ತಮ ಭಾರತೀಯ ಕ್ರಿಕೆಟ್ ತಂಡವನ್ನು ಕಳುಹಿಸಬೇಕು ಎನ್ನುವ ನಿಟ್ಟಿನಲ್ಲಿ ಆಯ್ಕೆಗಾರರು ಕೂಡ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ವಿರಾಟ್ ಕೊಹ್ಲಿ ಅವರು ಸಾಕಷ್ಟು ಸಮಯಗಳಿಂದ ಕಳಪೆ ಫಾರ್ಮ್ ನಲ್ಲಿ ಇದ್ದಾರೆ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಇನ್ನು ಇವರು ಈ ಬಾರಿ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗುವುದು ಅನುಮಾನ ಎಂಬುದಾಗಿ ಭಾರತೀಯ ಕ್ರಿಕೆಟ್ ಕಂಡಂತಹ ಸರ್ವಶ್ರೇಷ್ಠ ಓಪನಿಂಗ್ ಆಟಗಾರರಲ್ಲಿ ಒಬ್ಬರಾಗಿರುವ ವೀರೇಂದ್ರ ಸೆಹ್ವಾಗ್ ರವರು ಹೇಳಿದ್ದಾರೆ. ಇದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿರಾಟ್ ಕೊಹ್ಲಿ ರವರ ಸ್ಥಾನವನ್ನು ಇಂದಿನ ಯುವ ಕ್ರಿಕೆಟಿಗರು ಪಡೆಯಬಹುದಾಗಿದೆ ಎಂಬುದನ್ನು ವೀರೇಂದ್ರ ಸೇವಾಗ್ ರವರು ಹೇಳಿದ್ದಾರೆ.
ಇನ್ನು ಭಾರತೀಯ ಕ್ರಿಕೆಟ್ ತಂಡದ ವಿಶ್ವ ಕಪ್ ತಂಡದಲ್ಲಿ ರೋಹಿತ್ ಶರ್ಮ ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ರವರು ಮೊದಲ ಮೂರು ಕ್ರಮಾಂಕದಲ್ಲಿ ಆಡಲೇಬೇಕು ಎನ್ನುವುದಾಗಿ ವೀರೇಂದ್ರ ಸೆಹ್ವಾಗ್ ಅವರು ಈಗಾಗಲೇ ತಮ್ಮ ಅಭಿಪ್ರಾಯವನ್ನು ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ರವರ ಕುರಿತಂತೆ ವೀರೇಂದ್ರ ಸೆಹ್ವಾಗ್ ನೀಡಿರುವ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.