ನರೇಶ್ ರವರನ್ನು ಹೆಣ್ಣು ಬಾಕ ಎಂದ ಮೂರನೇ ಪತ್ನಿ ರಮ್ಯಾ: ಆದರೆ ಇದಕ್ಕೆ ನರೇಶ್ ಹೇಳಿದ್ದೇನು ಗೊತ್ತೇ?

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಾಧ್ಯಮಗಳಲ್ಲಿ ಕಂಡು ಬರುತ್ತಿರುವ ಹಾಗೂ ಕೇಳಿಬರುತ್ತಿರುವ ಒಂದೇ ಒಂದು ಸುದ್ದಿ ಎಂದರೆ ಅದು ತೆಲುಗು ನಟ ನರೇಶ್ ರವರ ಪ್ರಕರಣ. ನರೇಶ್ ಹಾಗೂ ಪವಿತ್ರಾ ಲೋಕೇಶ್ ರವರ ಕುರಿತಂತೆ ಗಾಳಿಸುದ್ದಿಗಳು ಈಗಾಗಲೇ ದೊಡ್ಡಮಟ್ಟದಲ್ಲಿ ಹರಡಲು ಪ್ರಾರಂಭವಾದ ಮೇಲೆ ನರೇಶ್ ಅವರ ಮೂರನೇ ಪತ್ನಿಯಾಗಿರುವ ರಮ್ಯಾ ರಘುಪತಿ ಅವರು ಕೂಡ ಹಲವಾರು ಆರೋಪಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಹೇಳಲು ಸಾಧ್ಯವಿಲ್ಲ ಆದರೆ ರಮ್ಯಾ ರಘುಪತಿ ಅವರು ತಮ್ಮ ಪತಿ ಆಗಿರುವ ನರೇಶ್ ರವರ ಮೇಲೆ ಹಲವಾರು ಆರೋಪಗಳನ್ನು ಟಿವಿ ಮಾಧ್ಯಮಗಳ ಸಂದರ್ಶನದಲ್ಲಿ ಮಾಡಿದ್ದಾರೆ.

ಅದರಲ್ಲೂ ಪ್ರಮುಖವಾಗಿ ನರೇಶ್ ರವರನ್ನು ಹೆಣ್ಣುಬಾಕ ಎನ್ನುವುದಾಗಿ ದೊಡ್ಡಮಟ್ಟದ ಆರೋಪವನ್ನು ಮಾಡುವ ಮೂಲಕ ಎಲ್ಲರನ್ನೂ ಕೂಡ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕನ್ನಡದ ಮಾಧ್ಯಮಗಳಿಗೆ ಈ ವಿಚಾರದ ಕುರಿತಂತೆ ಸ್ಪಷ್ಟೀಕರಣ ನೀಡಲು ಮುಂದಾಗಿರುವ ನರೇಶ್ ರವರು ತಮ್ಮ ಮೂರನೇ ಹೆಂಡತಿ ಆಗಿರುವ ರಮ್ಯಾ ರಘುಪತಿ ಅವರ ಆರೋಪಕ್ಕೆ ಸ್ಪಷ್ಟೀಕರಣ ನೀಡಲು ಮುಂದಾಗಿದ್ದಾರೆ. ಹಾಗಿದ್ದರೆ ರಮ್ಯ ರಘುಪತಿ ನೀಡಿರುವ ಹೆಣ್ಣುಬಾಕ ಆರೋಪಕ್ಕೆ ನರೇಶ್ ರವರು ಏನೆಂದು ಉತ್ತರ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೆ ರಮ್ಯ ರಘುಪತಿ ಅವರ ಈ ಆರೋಪಕ್ಕೆ ಉತ್ತರ ನೀಡುತ್ತಾ ನರೇಶ್ ರವರು ರಮ್ಯಾ ಅವರಿಗೆ ಇದರ ಅರ್ಥವೇನು ಗೊತ್ತಿದೆಯೇ, ಒಂದು ವೇಳೆ ನಾನು ಹೆಣ್ಣುಬಾಕ ಆಗಿದ್ದರೆ ನನ್ನಿಂದ ಇಂತಹ ಕೃತ್ಯಕ್ಕೆ ಒಳಗಾದ ಯಾವೊಬ್ಬ ಮಹಿಳೆಯು ಯಾಕೆ ನನ್ನ ವಿರುದ್ಧ ದೂರನ್ನು ನೀಡುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರಿಗೆ ಮಾನಸಿಕವಾಗಿ ಸಮಸ್ಯೆ ಇರಬೇಕು ಇದಕ್ಕಾಗಿಯೇ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬುದಾಗಿ ಕೂಡಾ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಈ ಸಂದರ್ಭದಲ್ಲಿ ನನ್ನ ಹಾಗೂ ಪವಿತ್ರ ಲೋಕೇಶ್ ಅವರ ಸಂದರ್ಭ ಕೇವಲ ಗೆಳೆತನ ಮಾತ್ರ ಎಂಬುದಾಗಿ ಕೂಡ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹರಡುತ್ತಿರುವ ವಿಚಾರಕ್ಕೆ ಕೂಡ ಎಳೆದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ಆಯಾಮವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

Get real time updates directly on you device, subscribe now.