ನಾಗ ಚೈತನ್ಯ ಜೊತೆ ಮದುವೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಶೋಭಿತ: ಸಮಂತಾ ಅಭಿಮಾನಿಗಳು ಫುಲ್ ಕುಶ್ ಆಗಿದ್ದು ಯಾಕೆ ಗೊತ್ತೆ?
ನಮಸ್ಕಾರ ಸ್ನೇಹಿತರೆ ಅಕ್ಕಿನೇನಿ ಮನೆತನದ ಕುಡಿ ಆಗಿರುವ ನಾಗಚೈತನ್ಯ ಹಾಗೂ ಸಮಂತ ರವರ ವಿವಾಹ ವಿಚ್ಛೇದನವು ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಡೆದ ನ್ಯಾಷನಲ್ ನ್ಯೂಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ನಾಲ್ಕು ವರ್ಷಗಳ ದಾಂಪತ್ಯ ಜೀವನವನ್ನು ಹಾಗೂ ಹಲವಾರು ವರ್ಷಗಳ ಪ್ರೀತಿಯನ್ನು ಕೇವಲ ಡಿವೋರ್ಸ್ ಮೂಲಕ ಇಬ್ಬರೂ ಕೂಡ ಮುಗಿಸಿ ಕೊಂಡಿದ್ದು ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ಬೇಸರವನ್ನು ಉಂಟುಮಾಡಿತ್ತು. ಇವರಿಬ್ಬರು ಬೇರೆ ಆದನಂತರ ನಾಗಚೈತನ್ಯ ರವರು ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಒಬ್ಬ ಯುವ ನಟಿಯನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಕಾ’ಡ್ಗಿಚ್ಚಿನಂತೆ ಹರಡಿತ್ತು.
ಹೌದು ಗೆಳೆಯರೇ ನಾಗಚೈತನ್ಯ ರವರು ನಟಿ ಶೋಭಿತಾ ರವರನ್ನು ಪ್ರೀತಿಸುತ್ತಿದ್ದಾರೆ ಸದ್ಯದಲ್ಲೇ ಮದುವೆ ಕೂಡ ಆಗುತ್ತಿದ್ದಾರೆ ಎಂಬುದಾಗಿ ಕೆಲವೊಂದು ಸುದ್ದಿಗಳು ಸೋಶಿಯಲ್ ಮೀಡಿಯಾ ವನ್ನು ಆವರಿಸಿಕೊಂಡಿದ್ದವು. ಇದರ ಕುರಿತಂತೆ ಯಾರೂ ಕೂಡ ಅಧಿಕೃತವಾಗಿ ಮಾತನಾಡಿರಲಿಲ್ಲ. ಅಕ್ಕಿನೇನಿ ಕುಟುಂಬದಿಂದ ಕೂಡ ಯಾರು ಇದರ ಕುರಿತಂತೆ ಪ್ರತಿಕ್ರಿಯೆ ನೀಡಿರಲಿಲ್ಲ. ಏನು ಇಲ್ಲದೆ ಈ ಸುದ್ದಿ ಹರಡಲು ಸಾಧ್ಯವಿಲ್ಲ ಬಹುಶಃ ಸತ್ಯ ಇರಬೇಕು ಎನ್ನುವುದಾಗಿ ಎಲ್ಲರೂ ಕೂಡ ಅಂದುಕೊಂಡಿದ್ದರು. ಆದರೆ ಈಗ ಸಂಬಂಧ ಅಭಿಮಾನಿಗಳು ಸೇರಿದಂತೆ ನಾಗಚೈತನ್ಯ ಅಭಿಮಾನಿಗಳು ಕೂಡ ನಿಟ್ಟಿಸಿರು ಬಿಡುವಂತಹ ಪರಿಸ್ಥಿತಿ ಬಂದಿದೆ.
ಹೌದು ಗೆಳೆಯರೆ ಸ್ವತಹ ನಟಿ ಶೋಭಿತಾ ಮುಂದೆ ಬಂದು ನನಗೆ ಕೇವಲ ಅವರ ಪರಿಚಯ ಮಾತ್ರವಿದೆ ನಮ್ಮಿಬ್ಬರ ನಡುವೆ ನಡೆದಿರುವುದು ಕೇವಲ ಹಾಯ್ ಬಾಯ್ ಪರಿಚಯ ಮಾತ್ರ. ಅದನ್ನು ಹೊರತುಪಡಿಸಿ ಯಾವುದೇ ಬೇರೆ ರೀತಿಯ ಸಂಬಂಧ ನಮ್ಮಿಬ್ಬರ ನಡುವೆ ಇಲ್ಲ ಎನ್ನುವುದಾಗಿ ಹೇಳಿದ್ದಾರೆ. ಅವರು ಹೇಳುವುದು ಕೂಡ ಒಂದು ಮಟ್ಟಿಗೆ ಸರಿ ಅನಿಸುತ್ತದೆ ಯಾಕೆಂದರೆ ಇಬ್ಬರೂ ಕೂಡ ಒಂದೇ ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದು ಎಷ್ಟರ ಸತ್ಯ ಎನ್ನುವುದನ್ನು ಸಮಯವೇ ನಿರ್ಧರಿಸಲಿ.