ತಾನು ಜೀವನದಲ್ಲಿ ಯಶಸ್ಸು ಕಾಣಲು ಕಾರಣವಾದವರನ್ನು ಮರೆಯದ ದಿನೇಶ್ ಕಾರ್ತಿಕ್. ನೆನಪು ಮಾಡಿಕೊಂಡು ಹೇಳಿದ್ದೇನು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದಿನೇಶ್ ಕಾರ್ತಿಕ್ ರವರು ಟೆಸ್ಟ್ ಕ್ರಿಕೆಟ್ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇತಿಹಾಸದ ಮೊದಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಕೂಡ ಅವರು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ ಮುಂದಿನ ದಿನಗಳಲ್ಲಿ ದಿನೇಶ್ ಕಾರ್ತಿಕ್ ರವರು ಕಳಪೆ ಫಾರ್ಮ್ ಹಾಗೂ ಕೆಲವೊಂದು ವಿಚಾರಗಳ ಕಾರಣದಿಂದಾಗಿ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗುತ್ತಾರೆ.

ಕೇವಲ ಇಷ್ಟು ಮಾತ್ರವಲ್ಲದೆ ಅವರ ವೈಯಕ್ತಿಕ ಜೀವನವು ಕೂಡ ಸಾಕಷ್ಟು ವಿಚಾರಗಳಿಗಾಗಿ ಅವರ ನೆಮ್ಮದಿಯನ್ನು ಕೆಡಿಸುತ್ತದೆ. ನಿಜಕ್ಕೂ ಕೂಡ ಕೇವಲ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ದಿನೇಶ್ ಕಾರ್ತಿಕ್ ರವರಿಗೆ ಅದೃಷ್ಟ ಖುಲಾಯಿಸುವುದಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ಕ್ಯಾಪ್ಟನ್ ಆಗಿದ್ದ ದಿನೇಶ್ ಕಾರ್ತಿಕ್ ರವರು ತಂಡದಿಂದಲೇ ಹೊರ ಹೋಗುವಂತಾಗುತ್ತದೆ. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ರವರು ತಮ್ಮ ಪ್ರೊಫೆಷನ್ ಕರಿಯರ್ ನಲ್ಲಿ ಯಶಸ್ಸನ್ನು ಪಡೆಯಲು ಕಾರಣರಾದವರು ಯಾರು ಎಂಬುದನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಸೋಲುಗಳಿಂದ ಕಂಗೆಟ್ಟಿದ್ದ ದಿನೇಶ್ ಕಾರ್ತಿಕ್ ರವರ ಜೀವನಕ್ಕೆ ಹೊಸ ಚೈತನ್ಯವನ್ನು ನೀಡಿದ್ದು ಯಾರೆಂಬುದರ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಅದು ಇನ್ಯಾರು ಅಲ್ಲ ರಣಜಿ ಆಟಗಾರ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿರುವ ಅಭಿಷೇಕ್ ನಾಯರ್ ಎಂಬುದಾಗಿ ದಿನೇಶ್ ಕಾರ್ತಿಕ್ ಅವರೇ ಸ್ವತಹ ಹರ್ಷ ಭೋಗ್ಲೆ ರವರು ನಡೆಸಿಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮುಂಬೈ ಮೂಲದ ಅಭಿಷೇಕ್ ನಾಯಕ್ ರವರು ಹತ್ತುಹನ್ನೆರಡು ವರ್ಷಗಳ ಹಿಂದೆ ದಿನೇಶ್ ಕಾರ್ತಿಕ್ ಅವರು ತಮ್ಮ ಬದುಕನ್ನು ಕಂಡುಕೊಳ್ಳುವಲ್ಲಿ ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮಿಂಚುತ್ತಿರುವ ದಿನೇಶ್ ಕಾರ್ತಿಕ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಭರವಸೆಯನ್ನು ಹೊಂದಿದ್ದಾರೆ.

Get real time updates directly on you device, subscribe now.