ಅನುಶ್ರೀ ರವರಿಗೆ ಜಾಕೆಟ್ ಉಡುಗೊರೆಯಾಗಿ ಕೊಟ್ಟ ಶಿವರಾಜ್ ಕುಮಾರ್, ಅದು ಯಾಕೆ ಗೊತ್ತೇ? ಅಷ್ಟಕ್ಕೂ ನಡೆದದ್ದು ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ಕರುನಾಡ ಚಕ್ರವರ್ತಿ ಶಿವಣ್ಣನವರು ವಯಸ್ಸು 60 ಆದರೂ ಕೂಡ ಸಿನಿಮಾರಂಗದಲ್ಲಿ ಯಾವ ರೀತಿಯಲ್ಲಿ ಮಿಂಚುತ್ತಿದ್ದಾರೆ ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದ್ದು ಇದೇ ಜುಲೈ 1ರಂದು ಅವರ ಹೊಸ ಸಿನಿಮಾ ಕೂಡ ಬಿಡುಗಡೆಗೆ ತಯಾರಾಗಿದೆ. ಇನ್ನು ಕೇವಲ ಸಿನಿಮಾ ಮಾತ್ರವಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮ ವಾಗಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮುಖ್ಯ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಅನುಶ್ರೀ ಅವರು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಶಿವಣ್ಣ ಈ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ತಮ್ಮ ದುಬಾರಿ ಹಾಗೂ ಬೆಲೆಬಾಳುವ ಜಾಕೆಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು ದೊಡ್ಡಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಶಿವಣ್ಣ ಇದನ್ನು ಯಾಕೆ ನೀಡಿದ್ದು ಏನು ಕತೆ ಎಂಬುದು ಯಾರಿಗೂ ಕೂಡ ತಿಳಿದಿರಲಿಲ್ಲ ಆದರೆ ಈಗ ಅನುಶ್ರೀ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಎಲ್ಲರಿಗೂ ತಿಳಿದಿದೆ. ಹೌದು ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಆಂಕರ್ ಅನುಶ್ರೀ ಅಣ್ಣಾವ್ರ ಮನೆತನದ ಪ್ರತಿಯೊಬ್ಬರಿಗೂ ಕೂಡ ಆತ್ಮೀಯರು.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿರುವ ಸಂದರ್ಭದಲ್ಲಿ ಶಿವಣ್ಣನವರ ಜಾಕೆಟ್ ನೋಡಿ ತುಂಬಾ ಚೆನ್ನಾಗಿದೆ ಎಂದು ಅನುಶ್ರೀ ಅವರು ನೀಡಿದ ಪ್ರತಿಕ್ರಿಯೆಗೆ ಕಾರ್ಯಕ್ರಮ ಮುಗಿದಮೇಲೆ ನಿನಗೆ ಕೊಡ್ತೀನಿ ಕಣಮ್ಮ ಎಂಬುದಾಗಿ ಶಿವಣ್ಣ ಹೇಳಿದ್ದಾರೆ. ಇದು ಕೇವಲ ತಮಾಷೆಗೆ ಎಂದು ಅಂದುಕೊಂಡಿದ್ದ ಅನುಶ್ರೀ ಅವರಿಗೆ ಕಾರ್ಯಕ್ರಮ ಮುಗಿದ ನಂತರ ಶಿವಣ್ಣ ನಿಜವಾಗಿಯೂ ಕೂಡ ಜಾಕೆಟ್ ಅನ್ನು ಅನುಶ್ರೀ ಅವರಿಗೆ ಕೊಟ್ಟು ಅದರಲ್ಲಿ ಪ್ರೀತಿಯಿಂದ ಗೆಳತಿ ಅನುಶ್ರೀ ಅವರಿಗೆ ಎನ್ನುವುದಾಗಿ ಬರೆದಿದ್ದರು. ಶಿವಣ್ಣನವರ ಅದ್ಭುತ ಕಾರ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರ ಉದಾರ ಗುಣವನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ. ಶಿವಣ್ಣನವರ ಈ ಕೆಲಸದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.