ಇನ್ನು ಅಂಬೆಗಾಲು ಇಡುತ್ತಿದ್ದರೂ ಮೈದಾನದ ಸಿಬ್ಬಂದಿಗೆ ಅಗೌರವ. ಋತುರಾಜ್ ಗಾಯಕ್ವಾಡ್ ಮಾಡಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗು ತಿಳಿದಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿರುವ ಋತುರಾಜ್ ಗಾಯಕ್ವಾಡ್ ರವರು ಭಾರತೀಯ ಕ್ರಿಕೆಟ್ ತಂಡದ ಖಾಯಂ ಸ್ಥಾನವನ್ನು ಪಡೆಯುವಲ್ಲಿ ಸಾಕಷ್ಟು ಒದ್ದಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ಈ ಬಾರಿ ಐಪಿಎಲ್ ನಲ್ಲಿ ಕಳೆದ ಬಾರಿಯ ಐಪಿಎಲ್ ಗೆ ಹೋಲಿಸಿದರೆ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದರು. ಇನ್ನು ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೂರನೇ ಪಂದ್ಯದಲ್ಲಿ ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ ಬೇರೆ ಹೇಳಿಕೊಳ್ಳುವ ಗಮನಾರ್ಹ ಪ್ರದರ್ಶನವನ್ನು ಅವರು ನೀಡಿಲ್ಲ.
ಇನ್ನು ಇತ್ತೀಚಿಗಷ್ಟೇ ಗಾಯಕ್ವಾಡ್ ರವರು ಗ್ರೌಂಡ್ ಮ್ಯಾನ್ ಜೊತೆಗೆ ನಡೆದುಕೊಂಡಿರುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆಗೆ ಒಳಗಾಗಿದೆ. ಹೌದು ಗಳೆಯರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತೀಯ ಕ್ರಿಕೆಟ್ ತಂಡ ಕೊನೆಯ ಪಂದ್ಯದಲ್ಲಿ ಸೌತ್ ಆಫ್ರಿಕಾ ವನ್ನು ಎದುರಿಸಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಬಂದಂತಹ ಮಳೆಯೆನ್ನುವುದು ಪಂದ್ಯವನ್ನು ರದ್ದುಗೊಳಿಸಿತು. ಆದರೆ ಈ ಸಂದರ್ಭದಲ್ಲಿ ಗ್ರೌಂಡ್ ಮ್ಯಾನ್ ಜೊತೆಗೆ ಋತುರಾಜ್ ಗಾಯಕ್ವಾಡ್ ರವರು ನಡೆದುಕೊಂಡ ರೀತಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು ಗೆಳೆಯರೇ ಋತುರಾಜ್ ರವರ ಬಳಿ ಮಳೆ ಬಂದು ತಂದೆ-ತಾಯಿ ತಗೊಂಡ ಸಮಯದಲ್ಲಿ ಗ್ರೌಂಡ್ ಮ್ಯಾನ್ ಸೆಲ್ಫಿ ಕೇಳಲು ಬಂದಿರುತ್ತಾನೆ. ಆದರೆ ಋತುರಾಜ್ ಗಾಯಕ್ವಾಡ್ ಅವರು ಆತನನ್ನು ದೂರ ಹೋಗುವಂತೆ ಹೇಳಿ ಸೆಲ್ಫಿ ನೀಡಲು ಕೂಡ ನಿರಾಕರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆಯೇ ಎಲ್ಲರೂ ಕೂಡ ಇನ್ನೂ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದೀಯಾ ಈಗಲೇ ಈ ದುರಹಂಕಾರ ಬೇಕಾ ನಿಮಗೆ ಎಂಬುದಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಹಲವಾರು ಜನರು ಗ್ರೌಂಡ್ ಮ್ಯಾನ್ ಗಳು ಇಷ್ಟೆಲ್ಲ ಕಷ್ಟಪಟ್ಟು ಒಂದು ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಾರೆ ಅವರಿಗೆ ಸೆಲ್ಫಿ ಕೊಡಲು ಇವರಿಗೆ ಯಾಕೆ ಇಷ್ಟೊಂದು ಸೊಕ್ಕು ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.