ಭಾರತ ವಿಶ್ವಕಪ್ ಗೆಲ್ಲಬೇಕು ಎಂದರೇ, ಈ ಆಟಗಾರರಿಗೆ ಅವಕಾಶ ನೀಡಲೇ ಬೇಕು ಎಂದ ಡೇಲ್ ಸ್ಟೆನ್. ಯಾರಿಗೆ ಸ್ಥಾನ ಕೊಡಬೇಕು ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕಳೆದ ಬಾರಿಯ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಇತಿಹಾಸದಲ್ಲಿ ಅತ್ಯಂತ ಕಳಪೆ ಮಟ್ಟದ ಪ್ರದರ್ಶನ ನೀಡಿ ಮುಖಭಂಗವನ್ನು ಅನುಭವಿಸಿರುವುದು ನಿಮಗೆಲ್ಲ ತಿಳಿದಿದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಅನ್ನು ಗೆಲ್ಲಲೇಬೇಕು ಎನ್ನುವ ಹಠದಲ್ಲಿ ಭಾರತೀಯ ಕ್ರಿಕೆಟ್ ತಂಡ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಉತ್ತಮವಾದ ತಂಡವನ್ನು ಕಳಿಸುವ ಯೋಚನೆಯಲ್ಲಿದ್ದಾರೆ.
ಸದ್ಯಕ್ಕೆ ಐಪಿಎಲ್ ಮುಗಿದಿದ್ದು ಹಲವಾರು ಯುವ ಪ್ರತಿಭೆಗಳು ಕೂಡ ಟಿ20ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ರೇಸ್ ನಲ್ಲಿದ್ದಾರೆ. ಇನ್ನು ಟೀಮ್ ಮ್ಯಾನೇಜ್ಮೆಂಟ್ ಕೂಡ ಅಂತಾರಾಷ್ಟ್ರೀಯ ಪಂದ್ಯಗಳನ್ನು ಈಗಾಗಲೇ ಆರಂಭಿಸಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾರೆಲ್ಲಾ ಚೆನ್ನಾಗಿ ಹಾಗೂ ಸತತವಾಗಿ ಪ್ರತಿಯೊಂದು ಪಂದ್ಯಗಳಲ್ಲಿ ಬ್ಯಾಲೆನ್ಸಡ್ ಪರ್ಫಾರ್ಮೆನ್ಸ್ ನೀಡುತ್ತಾರೋ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಭಾರತ ವಿಶ್ವಕಪ್ ಗೆಲ್ಲಲು ಈ ಒಬ್ಬ ಆಟಗಾರ ಖಂಡಿತವಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರಲೇಬೇಕು ಎನ್ನುವುದಾಗಿ ಸೌತ್ ಆಫ್ರಿಕಾ ಮೂಲದ ಮಾಜಿ ವೇಗಿ ಡೇಲ್ ಸ್ಟೈನ್ ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹೌದು ಗೆಳೆಯರೇ ಡೇಲ್ ಸ್ಟೈನ್ ರವರ ಪ್ರಕಾರ ದಿನೇಶ್ ಕಾರ್ತಿಕ್ ರವರು ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಇರಲೇಬೇಕು. ಸದ್ಯಕ್ಕೆ ದಿನೇಶ್ ಕಾರ್ತಿಕ್ ರವರು ಇರುವ ಫಾರ್ಮ್ ನಿಜಕ್ಕೂ ಪ್ರಶಂಸಾರ್ಹ ವಾದದ್ದು ಹಾಗೂ ರಿಷಬ್ ಪಂತ್ ಅವರಿಗಿಂತ ಚೆನ್ನಾಗಿ ಸೌತ್ ಆಫ್ರಿಕಾ ಸರಣಿಯಲ್ಲಿ ಅದ್ಭುತವಾಗಿ ಅವಕಾಶ ಸಿಕ್ಕಾಗಲೆಲ್ಲ ದಿನೇಶ್ ಕಾರ್ತಿಕ್ ಅವರು ಚೆನ್ನಾಗಿ ಆಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ಪ್ರದರ್ಶನ ಹಾಗೂ ಅನುಭವ ಖಂಡಿತವಾಗಿ ಆಸ್ಟ್ರೇಲಿಯಾ ನೆಲದಲ್ಲಿ ವಿಶ್ವಕಪ್ ಗೆಲ್ಲಲು ಭಾರತೀಯ ಕ್ರಿಕೆಟ್ ತಂಡಕ್ಕೆ ಅನುವಾಗಲಿದೆ ಎಂಬುದಾಗಿ ಹೇಳಿದ್ದಾರೆ. ಡೇಲ್ ಸ್ಟೈನ್ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.