ಅನಾಥಶ್ರಮದಲ್ಲಿ ಸೇವೆ ಸಲ್ಲಿಸಿ ಕೊನೆಗೂ ಹನಿಮೂನ್ ಹೊರಟ ನಯನತಾರ ವಿಗ್ನೇಶ್ ಜೋಡಿ, ಹೊಂದಿದ್ದು ಎಲ್ಲಿಗೆ ಗೊತ್ತೇ?? ಸ್ವರ್ಗದಂತಹ ಲೋಕ ಯಾವುದು ಗೊತ್ತೆ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬರೋಬ್ಬರಿ ಏಳು ವರ್ಷಗಳ ಪ್ರೀತಿಸಿ ಜೊತೆಯಾಗಿದ್ದ ನಿರ್ದೇಶಕ ವಿಘ್ನೇಶ್ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರು ಇತ್ತೀಚೆಗಷ್ಟೇ ಮಹಾಬಲಿಪುರಂ ಪ್ರತಿಯೊಂದರಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರ ಮದುವೆಯನ್ನು ನೋಡಲು ಹಾಗೂ ಇವರಿಬ್ಬರಿಗೆ ಆಶೀರ್ವಾದ ಮಾಡಲು ಬಾಲಿವುಡ್ ಚಿತ್ರರಂಗದ ಶಾರುಖ್ ಖಾನ್ ತಮಿಳು ಚಿತ್ರರಂಗದ ಲೆಜೆಂಡರಿ ನಟರಾಗಿರುವ ರಜನಿಕಾಂತ್ ಹಾಗೂ ಕಮಲ್ ಹಾಸನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಿದ್ದರು.
ಇನ್ನು ಎಲ್ಲಾ ಸೆಲೆಬ್ರಿಟಿ ಗಳಂತೆ ಇವರಿಬ್ಬರು ಮದುವೆಯಾದ ತಕ್ಷಣ ನೇರವಾಗಿ ಹನಿಮೂನ್ಗೆ ತೆರಳಿಲ್ಲ. ಹೌದು ಗೆಳೆಯರೆ ನಯನತಾರಾ ಹಾಗೂ ವಿಘ್ನೇಶ್ ಇಬ್ಬರೂ ಕೂಡ ವೃದ್ಧಾಶ್ರಮ ಹಾಗೂ ಅನಾಥಾಶ್ರಮ ಸೇರಿದಂತೆ ಹಲವಾರು ಮಕ್ಕಳು ಹಾಗೂ ವೃದ್ಧರು ಮತ್ತು ಇನ್ನಿತರ ಅಶಕ್ತ ಜನರಿಗೆ ಸ್ವಾದಿಷ್ಟವಾದ ಊಟವನ್ನು ಒದಗಿಸುವ ಮೂಲಕ ತಮ್ಮ ಮದುವೆ ಸಂತೋಷವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದರು. ಇವೆಲ್ಲವನ್ನೂ ಈಗ ಮುಗಿಸಿರುವ ನಂತರ ಇವರಿಬ್ಬರೂ ಕೂಡ ತಮ್ಮ ಹನಿಮೂನ್ಗೆ ತೆರಳಿದ್ದಾರೆ. ಅಷ್ಟಕ್ಕೂ ಈ ಸೆಲೆಬ್ರಿಟಿಗಳು ಹನಿಮೂನ್ ಗೆ ತೆರಳಿರುವ ಸ್ವರ್ಗಸದೃಶ ಪ್ರದೇಶವಾದರೂ ಯಾವುದೆಂಬುದನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರೇ ವಿಜ್ಞೇಶ್ ಹಾಗೂ ನಯನತಾರ ಜೋಡಿ ಇಬ್ಬರೂ ಕೂಡ ಈಗ ಹನಿಮೂನ್ ಗಾಗಿ ತೆರಳಿರುವ ಪ್ರದೇಶ ಥೈಲ್ಯಾಂಡ್ ಆಗಿದೆ. ಈ ಸುಂದರ ದೇಶದ ಮನಮೋಹಕ ಪ್ರದೇಶದಲ್ಲಿ ಇವರಿಬ್ಬರು ಇರುವಂತಹ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದು ಎಲ್ಲರೂ ಕೂಡ ಈ ಜೋಡಿಯನ್ನು ಫೋಟೋಗಳಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಜೋಡಿಯ ಕುರಿತಂತೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.