ಸತತ ಕಳಪೆ ಪ್ರದರ್ಶನ, ಭಾರತ ತಂಡದಿಂದ ಹೊರಹೋಗುವ ಟಾಪ್ ಮೂರು ಆಟಗಾರರು ಯಾರ್ಯಾರು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಪ್ರಾರಂಭಿಕ ಎರಡು ಪಂದ್ಯಗಳಲ್ಲಿ ಗೆಲ್ಲಲು ಸಾಕಷ್ಟು ತಿಣುಕಾಡಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ಕೂಡ ಮೊದಲ ಎರಡು ಸತತ ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ನಂತರ ಪುಟಿದೆದ್ದ ಭಾರತ ತಂಡ ಸೌತ್ ಆಫ್ರಿಕಾದ ವಿರುದ್ಧ ಉಳಿದ ಎರಡು ಪಂದ್ಯಗಳನ್ನು ಕೂಡ ಈಗಾಗಲೇ ಸತತವಾಗಿ ಗೆದ್ದಿದ್ದು ಸರಣಿಯಲ್ಲಿ ಮತ್ತೆ ಗೆಲ್ಲುವ ಭರವಸೆಯನ್ನು ಜೋರಾಗಿ ಮೂಡಿಸಿದೆ ಎಂದು ಹೇಳಬಹುದಾಗಿದೆ.

ಈಗಾಗಲೇ ಎರಡು ತಂಡಗಳು ಎರಡು ಪರಸ್ಪರ ಪಂದ್ಯಗಳನ್ನು ಗೆದ್ದಿದ್ದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಈ ಸರಣಿಯನ್ನು ಯಾರು ಗೆಲ್ಲಲಿದ್ದಾರೆ ಎಂಬುದಾಗಿ ತಿಳಿದುಬರಲಿದೆ. ಆದರೆ ಇತಿಹಾಸವನ್ನು ಗಮನಿಸಿದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ತವರಿನಲ್ಲಿ ಸರಣಿ ಗೆದ್ದಿರುವುದು ಇಲ್ಲ. ಹೀಗಾಗಿ ಈ ಇತಿಹಾಸ ಎನ್ನುವುದು ಹೇಗೆ ಬದಲಾಗಲಿದೆ ಅಥವಾ ಸ್ಥಿರವಾಗಿ ಅದೇ ಇರಲಿದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕೊನೆಯ ಪಂದ್ಯಗಳಿಂದ ಮೂರು ಕಳಪೆ ಪ್ರದರ್ಶನ ನೀಡಿರುವ ಆಟಗಾರರು ತಂಡದಿಂದ ಹೊರ ಹೋಗಬಹುದಾದಂತಹ ಸಾಧ್ಯತೆ ಹೆಚ್ಚಾಗಿದೆ.

ಹೌದು ಗೆಳೆಯರೆ ಮೊದಲಿಗೆ ತಂಡದ ಹಂಗಾಮಿ ನಾಯಕ ಆಗಿರುವ ರಿಷಬ್ ಪಂತ್ ರವರು ಅತ್ಯಂತ ಕೆಟ್ಟ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರನ್ನು ಕೂಡ ಬದಲಾಯಿಸಬಹುದಾದ ಸಾಧ್ಯತೆ ಇದೆ. ಅವರನ್ನು ಬಿಟ್ಟರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಶ್ರೇಯಸ್ ಅಯ್ಯರ್ ಅವರು ಕೇವಲ 84 ರನ್ನುಗಳನ್ನು 4 ಪಂದ್ಯಗಳಿಂದ ಗಳಿಸಿದ್ದಾರೆ. ಪರಿಣಾಮಕಾರಿ ಆಲ್-ರೌಂಡರ್ ಎಂಬ ಖ್ಯಾತಿಗೆ ಒಳಗಾಗಿರುವ ಅಕ್ಷರ ಪಟೇಲ್ ಅವರು ಕೂಡ ಈ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಿಲ್ಲ. ಹೀಗಾಗಿ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಇವರು ಹೊರಹೋದರೆ ತಂಡ ಗೆಲ್ಲಬಹುದಾದ ಸಾಧ್ಯತೆ ಹೆಚ್ಚಾಗಿದೆ ಅಥವಾ ಇವರು ಹೊರ ಹೋಗಬಹುದಾಗಿದೆ.

Get real time updates directly on you device, subscribe now.