ಒಂದು ಕಡೆ ಕೆಜಿಎಎಫ್ ಯಶಸ್ಸು ಪಡೆದ ತಕ್ಷಣ, ಯಶ್ ರವರಂತೆ ಮಾಡಲು ಮಾಡಲು ಮುಂದಾದ ಅಲ್ಲು ಅರ್ಜುನ್, ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಯಾವ ಮಟ್ಟದಲ್ಲಿ ದಾಖಲೆಗಳನ್ನು ನಿರ್ಮಿಸಿದ ಎನ್ನುವುದನ್ನು ಕೇಳಲು ಹಾಗೂ ಹೇಳಲು ಎರಡರಲ್ಲಿ ಕೂಡ ಖುಷಿ ಸಿಗುತ್ತದೆ. ಇನ್ನು ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ 430 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ನಿಜಕ್ಕೂ ಕೂಡ ಒಬ್ಬ ಕನ್ನಡದ ಸ್ಟಾರ್ ನಟ ಪರಭಾಷೆಗಳಲ್ಲಿ ಆ ಭಾಷೆಯ ನಟರಿಗಿಂತ ಅಧಿಕವಾಗಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿ ತನ್ನನ್ನು ತಾನು ಸಾಬೀತುಪಡಿಸಿ ಕೊಳ್ಳುತ್ತಾನೆ ಎಂದರೆ ನಿಜಕ್ಕೂ ಕೂಡ ಅದು ದೊಡ್ಡಮಟ್ಟದ ಸಾಧನೆಯಾಗಿದೆ.

ಇನ್ನು ನಿಮಗೆಲ್ಲರಿಗೂ ತಿಳಿದಂತೆ ಅಲ್ಲೂ ಅರ್ಜುನ್ ನಟನೆಯ ಪುಷ್ಪ ಚಿತ್ರವು ಕೂಡ ಈಗಾಗಲೇ ಮೊದಲ ಭಾಗ ಬಿಡುಗಡೆಯಾಗಿ ಜಾಗತಿಕವಾಗಿ 300 ಕೋಟಿಗೂ ಅಧಿಕ ಹಾಗೂ ಬಾಲಿವುಡ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪುಷ್ಪ ಚಿತ್ರದ ಎರಡನೇ ಭಾಗ ಕೂಡ ಈಗಾಗಲೇ ಬೇಡಿಕೆಯನ್ನುವುದು ಸಾಕಷ್ಟು ಕ್ಷಿಪ್ರವಾಗಿ ಗಗನಕ್ಕೇರಿದೆ. ಹೀಗಾಗಿ ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ರವರು ಕೂಡ ಯಶ್ ರವರ ಹಾದಿಯನ್ನೇ ಫಾಲೋ ಮಾಡಲು ಹೊರಟಿದ್ದಾರೆ. ಹೌದು ಗೆಳೆಯರೆ ನಿಮಗೆ ತಿಳಿದಿರುವ ಹಾಗೆ ಯಶ್ ರವರು ಕೆಜಿಎಫ್ ನ ಮೊದಲ ಅವತರಣಿಕೆ ನಂತರ ಹಲವಾರು ವರ್ಷಗಳ ನಂತರ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟಿಸಿದ್ದರು ಹಾಗೂ ಇದರ ನಡುವೆ ಬೇರೆ ಯಾವುದೇ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿರಲಿಲ್ಲ.

ಯಾಕೆಂದರೆ ಅವರು ಕೆಜಿಎಫ್ ಚಿತ್ರಕ್ಕಾಗಿಯೇ ಆ ಹೊಸ ಲುಕ್ ನಲ್ಲಿದ್ದರು. ಇಲ್ಲಿ ಕೂಡ ಅಲ್ಲು ಅರ್ಜುನ್ ರವರು ಪುಷ್ಪ ಚಿತ್ರದ ಎರಡನೇ ಭಾಗಕ್ಕಾಗಿ ಲುಕ್ ಮೆಂಟೆನ್ ಮಾಡಿಕೊಂಡಿದ್ದು ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಪೂರ್ಣವಾಗಿ ಪುಷ್ಪ 2 ಚಿತ್ರದ ನಂತರವೇ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಯಶ್ ರವರಿಗೆ ಚಿಕ್ಕ ಹಾಗೆ ಅಲ್ಲು ಅರ್ಜುನ್ ರವರಿಗೂ ಕೂಡ ಈ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

Get real time updates directly on you device, subscribe now.