ಕೇವಲ ಐದು ದಿನದ ಹಿಂದೆ ಮದುವೆಯಾಗಿದ್ದ ತಂಗಿಯನ್ನು ಗಂಡನ ಜೊತೆ ಊರಕ್ಕೆ ಕರೆಸಿ, ಈ ಅಣ್ಣ ಕೊಂದದ್ದು ಯಾಕೆ ಗೊತ್ತೇ?? ಕಾರಣವೇನಂತೆ ಗೊತ್ತೇ?

66

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಪ್ರೀತಿ ಮಾಡಿ ಮದುವೆಯಾಗುವುದು ಕೇವಲ ಸಿನಿಮಾದಲ್ಲಿ ಮಾತ್ರ ಸುಲಭವಾದ ಕೆಲಸವಾಗಿದೆ ಆದರೆ ನಿಜ ಜೀವನದಲ್ಲಿ ಅದು ಅಷ್ಟೊಂದು ಸುಲಭವಾಗಿಲ್ಲ ಎಂಬುದನ್ನು ಹಲವಾರು ಇತ್ತೀಚೆಗೆ ನಡೆದಿರುವ ಘಟನೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ. ಇನ್ನು ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ನಡೆದ ಒಂದು ಘಟನೆಯ ಕುರಿತಂತೆ ವಿವರವಾಗಿ ನಿಮಗೆ ತಿಳಿಸಲು ಹೊರಟಿದ್ದೇವೆ. ತಮಿಳುನಾಡಿನ ಕುಂಭಕೋಣಂನ ನಿವಾಸಿಯಾಗಿರುವ ಶರಣ್ಯ ನರ್ಸಿಂಗ್ ಪದವೀಧರೆ ಆಗಿದ್ದರು. ಇವರು ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪೊನ್ನೂರಿನ ಮೋಹನ್ ಎನ್ನುವವರ ಜೊತೆ ಆರು ತಿಂಗಳಿಂದ ಕೂಡ ಶರಣ್ಯ ಪ್ರೀತಿಸುತ್ತಿದ್ದರು.

ಶರಣ್ಯ ಮೋಹನ್ ನಲ್ಲೂ ಪ್ರೀತಿಸುತ್ತಿರುವ ವಿಚಾರ ಶರಣ್ಯ ಳ ಮನೆಯವರಿಗೆ ತಿಳಿದು ತೀಕ್ಷ್ಣವಾಗಿ ಬುದ್ಧಿವಾದವನ್ನು ಹೇಳಿ ಸೋದರಮಾವನನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಾರೆ. ಇದರಿಂದ ಶರಣ್ಯಳಿಗೆ ಬೇಸರವಾಗಿ ಕೂಡಲೇ ತಾನು ಪ್ರೀತಿಸಿದವನ ಜೊತೆಗೆ ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗಿ ಮದುವೆಯಾಗಿರುವ ವಿಚಾರದ ಕುರಿತಂತೆ ಮನೆಯವರಿಗೆ ದೂರವಾಣಿ ಕರೆಯ ಮೂಲಕ ಹೇಳುತ್ತಾರೆ. ಮದುವೆಯಾದ ಐದು ದಿನಗಳ ಬಳಿಕ ಶರಣ್ಯ ಳ ಅಣ್ಣ ಶಕ್ತಿವೇಲು ಇಬ್ಬರೂ ಪ್ರೀತಿಸಿ ಮದುವೆಯಾಗಿರುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂಬುದಾಗಿ ಹೇಳಿ ಪ್ರೀತಿಯಿಂದ ಮಾತನಾಡಿ ಮನೆಗೆ ಊಟಕ್ಕೆ ಬರಲು ಆಹ್ವಾನ ನೀಡುತ್ತಾನೆ. ಶರಣ್ಯ ಹಾಗೂ ಆಕೆಯ ಪತಿ ಮೋಹನ್ ಇಬ್ಬರು ಕೂಡ ಶರಣ್ಯ ತವರುಮನೆಯಲ್ಲಿ ಊಟ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಶಕ್ತಿವೇಲು ಮಾಡಿರುವ ಕೆಲಸ ನೋಡಿ ಎಲ್ಲರೂ ಕೂಡ ಬೆಚ್ಚಿಬಿದ್ದಿದ್ದಾರೆ.

ಹೌದು ಗೆಳೆಯರೇ ಶರಣ್ಯ ಅಣ್ಣ ಶಕ್ತಿವೇಲು ಚೂ’ಪಾದ ಆಯು’ಧದಿಂದ ನವ ದಂಪತಿಗಳಿಬ್ಬರನ್ನು ಕುತ್ತಿಗೆಯಲ್ಲಿ ಹ’ಲ್ಲೆ ಮಾಡಿ ಮುಗಿಸಿ ಬಿಟ್ಟಿದ್ದಾನೆ. ದಂಪತಿಗಳಿಬ್ಬರೂ ಕೂಡ ಸ್ಥಳದಲ್ಲೇ ಮರಣ ಹೊಂದಿದ್ದಾರೆ. ಪ್ರೀತಿಸಿ ಮದುವೆ ಆಗಿರುವ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಕುಟುಂಬಸ್ಥರ ಮುಂದೆ ನಮ್ಮ ಮರ್ಯಾದೆ ಹೋಗಿದ್ದು ಇದೇ ಕಾರಣದಿಂದಾಗಿ ಇವರಿಬ್ಬರನ್ನು ಮುಗಿಸುವ ಸಂಚು ಹೂಡಿ ಮುಗಿಸಿದ್ದೇನೆ ಎಂಬುದಾಗಿ ಪೊಲೀಸರ ಮುಂದೆ ಶಕ್ತಿವೇಲು ತಪ್ಪೊಪ್ಪಿಕೊಂಡಿದ್ದಾನೆ. ಕೇವಲ ಮರ್ಯಾದೆ ಕಾರಣಕ್ಕಾಗಿ ಎರಡು ಮುಗ್ಧ ಜೀವಗಳನ್ನು ಮುಗಿಸಿದ್ದಾನೆ ಈ ಪುಣ್ಯಾತ್ಮ. ಘಟನೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮರೆಯಬೇಡಿ.

Get real time updates directly on you device, subscribe now.