ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ರವರ ಒಟ್ಟಿಗೆ ವಾಸಿಸುವ ಮನೆ ಹೇಗಿದೆ ಗೊತ್ತೇ?? ಇದರ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಎಷ್ಟು ಗೊತ್ತೇ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹಾಗೂ ಅತ್ಯಂತ ಜನಪ್ರಿಯ ಜೋಡಿಗಳು ಯಾರು ಎಂದು ಕೇಳಿದರೆ ಕಂಡಿತವಾಗಿ ಕೇಳಿಬರುವ ಒಂದೇ ಒಂದು ಉತ್ತರ ಅದು ವಿರುಷ್ಕಾ ಜೋಡಿ ಎಂಬುದಾಗಿ ಹೇಳುತ್ತಾರೆ. ಹೌದು ಗೆಳೆಯರೆ ಹಲವಾರು ವರ್ಷಗಳ ಕಾಲ ಪ್ರೀತಿಯ ನಂತರ ಇವರಿಬ್ಬರೂ ಮನೆಯವರ ಒಪ್ಪಿಗೆಯ ಮೇರೆಗೆ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಜಗತ್ತೇ ಮೆಚ್ಚುವಂತೆ ಮದುವೆಯಾಗುತ್ತಾರೆ. ಈಗ ಅವರ ಜೀವನವು ಕೂಡ ಜಗತ್ತೇ ಮೆಚ್ಚುವಂತೆ ನಡೆಯುತ್ತಿದೆ ಎಂದರು ಕೂಡ ತಪ್ಪಾಗಲಾರದು.

ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅನುಷ್ಕಾ ಶರ್ಮಾ ರವರು ನಟಿಯಾಗಿ ನಿರ್ಮಾಪಕಿಯಾಗಿ ಹಾಗು ಜಾಹೀರಾತಿನ ಮೂಲಕವೂ ಕೂಡ ಹಣವನ್ನು ಸಂಪಾದಿಸುತ್ತಾರೆ. ಇನ್ನು ಈ ಕಡೆ ವಿರಾಟ್ ಕೊಹ್ಲಿ ರವರು ಕುರಿತಂತೆ ಹೇಳುವುದಾದರೆ ನಿಮಗೆ ಹೆಚ್ಚಿನ ವಿವರಣೆಯ ಅಗತ್ಯ ಇಲ್ಲ ಎಂದು ಕಾಣಿಸುತ್ತೆ. ಯಾಕೆಂದರೆ ಭಾರತದಲ್ಲಿ ಅತ್ಯಂತ ಹೆಚ್ಚಿನ ಹಣವನ್ನು ಜಾಹೀರಾತಿನ ಮೂಲಕ ಯಾರಾದರೂ ಸಂಪಾದಿಸುತ್ತಾರೆ ಎಂದರೆ ಅದು ಕೇವಲ ವಿರಾಟ್ ಕೊಹ್ಲಿ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ನೇರವಾಗಿ ಹೇಳಬಹುದಾಗಿದೆ. ಇನ್ನು ಇವರು ರಿಯಲ್ ಎಸ್ಟೇಟ್ ಹಾಗೂ ಷೇರು ಮಾರುಕಟ್ಟೆಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುವುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರ.

ಇಂದಿನ ಲೇಖನಿಯಲ್ಲಿ ನಾವು ವಿರುಷ್ಕ ಜೋಡಿ ತಮ್ಮ ಮಗಳು ವಮಿಕಾ ಜೊತೆ ಇರುವಂತಹ ಸುಂದರ ಮನೆಯ ಕುರಿತಂತೆ ನಿಮಗೆ ವಿವರಿಸಿ ಹೇಳಲು ಹೊರಟಿದ್ದೇವೆ. ಆಗಾಗ ಇವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುವ ಫೋಟೋ ಗಳಿಂದಾಗಿ ಇವರ ಮನೆಯ ತುಣುಕನ್ನು ಆಗಾಗ ನೋಡಿರುತ್ತೀರಿ. ಹೌದು ಗೆಳೆಯರೇ ಇವರಿಬ್ಬರ ಐಶಾರಾಮಿ ಮನೆ ಬರೋಬ್ಬರಿ 80 ಕೋಟಿಗೂ ಅಧಿಕ ಬೆಲೆಗೆ ಇವರು ಖರೀದಿಸಿದ್ದಾರೆ. ಇನ್ನು ಕೇವಲ ಮನೆ ಬೆಲೆಯಲ್ಲಿ ಮಾತ್ರವಲ್ಲದೆ ಇಂಟೀರಿಯರ್ ಡಿಸೈನ್ ವಿಚಾರದಲ್ಲಿ ಕೂಡ ಸಾಕಷ್ಟು ಶ್ರೀಮಂತವಾಗಿದೆ ಎಂದರೆ ತಪ್ಪಾಗಲಾರದು.

ನೀವು ಕೂಡ ಈ ಫೋಟೋಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಶರ್ಮ ಇಬ್ಬರು ತಮ್ಮ ಮಗಳ ಜೊತೆಗೆ ಇರುವಂತಹ ಮನೆಯ ಫೋಟೋಗಳನ್ನು ಗಮನಿಸಬಹುದಾಗಿದೆ. ಹೌದು ಗೆಳೆಯರೆ ಮನೆಯ ಗೋಡೆಗೆ ಕೂಡ ತಮ್ಮ ಸದಭಿರುಚಿಗೆ ತಕ್ಕಂತೆ ಪೈಂಟ್ ಅನ್ನು ಮಾಡಿದ್ದಾರೆ ಎಂಬುದು ಕೂಡ ಈ ಫೋಟೋದಲ್ಲಿ ತಿಳಿದುಬರುತ್ತದೆ. ಪೀಠೋಪಕರಣಗಳನ್ನು ಕೂಡ ಇಬ್ಬರು ವಿದೇಶದಿಂದ ರಫ್ತು ಮಾಡಿಸಿಕೊಂಡಿದ್ದಾರೆ. ಪ್ರತಿಯೊಂದು ಅಲಂಕಾರಿಕ ವಸ್ತುಗಳು ಕೂಡ ದುಬಾರಿ ಬೆಲೆಯ ದಾಗಿದ್ದು ಫೋಟೋಗಳಲ್ಲಿ ಆಗಾಗ ಕಂಡುಬಂದಿದ್ದು ಪ್ರೇಕ್ಷಕರ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿ ಅವರು ಒಮ್ಮೆ ಫೋಟೋ ಶೇರ್ ಮಾಡಿಕೊಂಡಿದ್ದಾಗ ಅವರ ಹಿಂದೆ ಗೋಡೆಯಲ್ಲಿ ವರ್ಣಚಿತ್ರಗಳು ಹಾಗೂ ಕೆಲವು ಹಸಿರು ಗಿಡಗಳು ಕೂಡ ತೂಗುತ್ತಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ಈ ಮನೆ ಅವರ ಮಗಳಿಗೆ ಕೂಡ ಸರಿಹೊಂದುವಂತೆ ಹಸಿರಿನ ನಡುವೆ ಇದೆ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ಇನ್ನು ತಮ್ಮ ಮಗಳಿಗಾಗಿ ಇಲ್ಲಿ ನರ್ಸರಿಯನ್ನು ಕೂಡ ಕಟ್ಟಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇಬ್ಬರೂ ಕೂಡ ಬಿಡುವು ಸಿಕ್ಕಾಗ ಈ ಮನೆಯಲ್ಲಿ ಸಂತೋಷದ ಕ್ಷಣಗಳನ್ನು ತಮ್ಮ ಮಗಳೊಂದಿಗೆ ಒಂದು ಇಷ್ಟಪಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಗೆಳೆಯರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ರವರ ಮನೆಯ ಫೋಟೋಗಳನ್ನು ನೀವು ಇಲ್ಲಿ ಗಮನಿಸಬಹುದಾಗಿದೆ ಇಲ್ಲಿ ಶ್ರೀಮಂತಿಕೆ ಗಿಂತ ಹೆಚ್ಚಾಗಿ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ನೆಮ್ಮದಿಯ ವಾತಾವರಣ ಇದೆ ಎಂದು ಹೇಳಬಹುದಾಗಿದೆ. ಈ ವೈಭವೋಪೇತ ಮನೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.