ವಿಶ್ವಕಪ್ ಗೆಲ್ಲಲು ಪಣ ತೊಟ್ಟಿರುವ ದ್ರಾವಿಡ್ ಹಾಗೂ ಗಂಗೂಲಿ ಮಾಡಿರುವ ಮಾಸ್ಟರ್ ಪ್ಲಾನ್ ಹೇಗಿದೆ ಗೊತ್ತೇ?? ಈ ಸಲ ಕಪ್ ನಮ್ದೇನಾ??
ನಮಸ್ಕಾರ ಸ್ನೇಹಿತರೆ ಐಪಿಎಲ್ ಮುಗಿದಿದ್ದು ಭಾರತೀಯ ಕ್ರಿಕೆಟ್ ತಂಡ ಈಗ ಅಂತರಾಷ್ಟ್ರೀಯ ಕ್ರಿಕೆಟ್ ಕಡೆಗೆ ಮುಖ ಮಾಡಿದೆ. ಅದರಲ್ಲಿಯೂ ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗಲಿರುವ ಟಿ ಟ್ವೆಂಟಿ ವರ್ಲ್ಡ್ ಕಪ್ ಗೆ ಭಾರತೀಯ ಕ್ರಿಕೆಟ್ ತಂಡ ಸರ್ವಸನ್ನದ್ಧವಾಗುವತ್ತ ತಯಾರಿ ನಡೆಸಿದೆ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಕೋಚ್ ಆಗಿ ರಾಹುಲ್ ದ್ರಾವಿಡ್ ರವರು ಜವಾಬ್ದಾರಿಯನ್ನು ವಹಿಸಿಕೊಂಡು ಕೆಲವೇ ಕೆಲವು ಸಮಯಗಳು ಮುಗಿದಿದೆ. ತಂಡವನ್ನು ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಗೆ ಸಂಪೂರ್ಣ ಸಿದ್ಧವಾಗಿರುವ ಜವಾಬ್ದಾರಿ ಅವರ ಮೇಲಿದೆ.
ಇದಕ್ಕಾಗಿ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಕೂಡ ರಾಹುಲ್ ದ್ರಾವಿಡ್ ರವರಿಗೆ ಫ್ರೀ ಹ್ಯಾಂಡ್ ನೀಡಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. 2007 ರಲ್ಲಿ ಮೊದಲ ಟಿ-20ವಿಶ್ವಕಪ್ ಅನ್ನು ಗೆದ್ದ ನಂತರ ಭಾರತೀಯ ಕ್ರಿಕೆಟ್ ತಂಡ ಇದುವರೆಗೂ ಬೇರೆ ಯಾವುದೇ ಟಿ-ಟ್ವೆಂಟಿ ವಿಶ್ವಕಪ್ ಗೆದ್ದಿಲ್ಲ ಎನ್ನುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವರ್ಲ್ಡ್ ಕಪ್ ಅನು ಗೆಲ್ಲಲೇಬೇಕು ಎನ್ನುವ ದೃಷ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರು ತಂಡವನ್ನು ಸಿದ್ಧಪಡಿಸುತ್ತಿದ್ದಾರೆ. ಟಿ-20ವಿಶ್ವಕಪ್ ಗಾಗಿಯೇ ಒಂದು ಮಾಸ್ಟರ್ ಪ್ಲಾನ್ ಅನ್ನು ರಾಹುಲ್ ದ್ರಾವಿಡ್ ರವರ ಸಿದ್ಧಪಡಿಸಿದ್ದಾರೆ. ಅದು ಇನ್ಯಾರು ಅಲ್ಲ ಹಾರ್ದಿಕ್ ಪಾಂಡ್ಯ ರವರು.
ಹೌದು ಗೆಳೆಯರೇ ಮಹೇಂದ್ರ ಸಿಂಗ್ ಧೋನಿ ರವರ ನಂತರ ಭಾರತೀಯ ಕ್ರಿಕೆಟ್ ತಂಡದಲ್ಲಿ ಪರ್ಫೆಕ್ಟ್ ಫಿನಿಶರ್ ಆಗಿ ಯಾರು ಕೂಡ ಕಾಣಿಸಿಕೊಂಡಿಲ್ಲ. ಈ ಬಾರಿಯ ಐಪಿಎಲ್ ನಲ್ಲಿ ಗುಜರಾತ್ ತಂಡದ ನಾಯಕನಾಗಿ ಹಾಗೂ ಫಿನಿಶರ್ ಜವಾಬ್ದಾರಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 15 ಪಂದ್ಯಗಳಲ್ಲಿ 487 ರನ್ನುಗಳನ್ನು ಬಾರಿಸಿದ್ದಾರೆ. ಐಪಿಎಲ್ ನಲ್ಲಿ ತಮ್ಮ ತಂಡದ ಪರವಾಗಿ ಹಾಡಿರುವ ಆಟವನ್ನೇ ಭಾರತೀಯ ಕ್ರಿಕೆಟ್ ತಂಡದಲ್ಲಿ ತಿಳಿಸಲು ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ನಿರ್ವಹಿಸಿದ್ರೆ ಖಂಡಿತವಾಗಿ ಕಂಡ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಲಿದೆ ಎಂಬುದಾಗಿ ರಾಹುಲ್ ದ್ರಾವಿಡ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಮಾಸ್ಟರ್ ಪ್ಲಾನ್ ವರ್ಲ್ಡ್ ಕಪ್ ನಲ್ಲಿ ಯಾವ ರೀತಿ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.