ಮಗುವಿನ ನಾಮಕರಣದ ದಿನ ನಿಖಿಲ್ ಕುಮಾರಸ್ವಾಮಿ ರವರು ಪತ್ನಿ ರೇವತಿಗೆ ಕೊಟ್ಟ ಸರ್ಪ್ರೈಸ್ ಉಡುಗೊರೆ ಏನು ಗೊತ್ತೇ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿಖಿಲ್ ಕುಮಾರ್ ರವರು 2020 ರಲ್ಲಿ ರೇವತಿ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ನಂತರ ಅವರು ರಾಮನಗರದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಇರಬೇಕಾಗಿ ಬಂದಿತ್ತು. ಪರಿಸ್ಥಿತಿ ತಿಳಿಗೊಂಡ ನಂತರ ಎಲ್ಲಾ ಸಾಮಾನ್ಯ ಪರಿಸ್ಥಿತಿಗೆ ಪಡೆದುಕೊಂಡರು.ಕಳೆದ ವರ್ಷವಷ್ಟೇ ನಿಖಿಲ್ ಕುಮಾರ್ ಹಾಗೂ ರೇವತಿ ರವರು ಸೋಶಿಯಲ್ ಮೀಡಿಯಾದಲ್ಲಿ ಅವರ ವಂಶೋದ್ಧಾರಕ ಬರುತ್ತಿದ್ದಾನೆ ಎಂಬ ಸುಳಿವನ್ನು ನೀಡಿದ್ದರು.

ಕಳೆದ ವರ್ಷವಷ್ಟೇ ನಿಖಿಲ್ ಕುಮಾರ್ ಅವರ ಪತ್ನಿ ರೇವತಿ ರವರು ಗಂಡುಮಗುವಿಗೆ ಜನ್ಮ ನೀಡುತ್ತಾರೆ. ಇನ್ನು ಈಗ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ತಮ್ಮ ಮುದ್ದಿನ ಮಗನ ನಾಮಕರಣವನ್ನು ಗುರುಹಿರಿಯರ ಸಮ್ಮುಖದಲ್ಲಿ ಸಾಕಷ್ಟು ವಿಜೃಂಭಣೆಯಿಂದ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಸಾವಿರಕ್ಕೂ ಅಧಿಕ ಜನರಿಗೆ ವಿಶೇಷ ಊಟೋಪಚಾರವನ್ನು ಕೂಡ ಈ ಸಂದರ್ಭದಲ್ಲಿ ಇಟ್ಟುಕೊಳ್ಳಲಾಗಿತ್ತು. ಇನ್ನು ನಿಖಿಲ್ ಕುಮಾರ್ ಅವರ ಮಗನಿಗೆ ಅಯಾನ್ ದೇವ್ ಎನ್ನುವ ನಾಮಕರಣ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಇದೇ ಸಂತೋಷದ ಸಂದರ್ಭದಲ್ಲಿ ನಿಖಿಲ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಪತ್ನಿ ರೇವತಿ ಅವರಿಗೆ ಸರ್ಪ್ರೈಸ್ ಗಿಫ್ಟ್ ಅನ್ನು ನೀಡಿದ್ದಾರೆ.

ಹೌದು ಗೆಳೆಯರೇ ತಮ್ಮ ಮಗನನ್ನು ಭೂಮಿಗೆ ತಂದ ತಮ್ಮ ಪತ್ನಿ ರೇವತಿ ಅವರಿಗೆ ಒಂದು ವಜ್ರದ ನೆಕ್ಲೆಸ್ ಹಾಗೂ ಒಂದು ರೇಷ್ಮೆ ಸೀರೆಯನ್ನು ಈ ಸಂದರ್ಭದಲ್ಲಿ ತಮ್ಮ ಪತ್ನಿ ರೇವತಿ ಅವರಿಗೆ ನಿಖಿಲ್ ಕುಮಾರ್ ಅವರು ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜಕಾರಣ ಹಾಗೂ ಹಲವಾರು ಕ್ಷೇತ್ರದ ಗಣ್ಯಾತಿಗಣ್ಯರು ಆಗಮಿಸಿ ನಿಖಿಲ್ ಕುಮಾರ್ ಅವರ ಪುತ್ರನಿಗೆ ಆಶೀರ್ವದಿಸಿದರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.