ನಿಮ್ಮ ಪಾರ್ಸ್ ನಲ್ಲಿ ಈ ವಸ್ತುಗಳಿವೆಯೇ?? ಅವುಗಳೇ ಬಡತನಕ್ಕೆ ಕಾರಣ. ಇದ್ದರೇ ಈ ಕೂಡಲೇ ತೆಗೆದುಬಿಡಿ. ಯಾವ್ಯಾವು ಗೊತ್ತೇ?
ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅತ್ಯಂತ ಹೆಚ್ಚು ಹಣವನ್ನು ಸಂಪಾದಿಸಲು ಕಷ್ಟಪಡುತ್ತಾರೆ. ಕಷ್ಟಪಟ್ಟು ದುಡಿದು ಅದನ್ನು ಉಳಿತಾಯ ಮಾಡಲು ಕೂಡ ಯೋಚಿಸುತ್ತಾರೆ ಆದರೆ ವಾಸ್ತುದೋಷದ ಪ್ರಕಾರ ಕೆಲವೊಂದು ವಸ್ತುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವ ಕಾರಣದಿಂದಾಗಿ ನೀವು ಹಣವನ್ನು ಹೆಚ್ಚಿನ ಸಮಯಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ.
ಹೌದು ಗೆಳೆಯರೆ ಪರ್ಸಿನಲ್ಲಿ ಇಟ್ಟುಕೊಳ್ಳುವ ಕೆಲವು ವಸ್ತುಗಳ ಕಾರಣದಿಂದಾಗಿ ನೀವು ಬಡತನದಲ್ಲೇ ಇರುತ್ತೀರಿ ಎಂಬುದಾಗಿ ವಾಸ್ತು ಪ್ರಕಾರ ಕೇಳಿಬಂದಿದೆ. ಕೆಲವೊಂದು ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ನಿಮಗೆ ಕೆಟ್ಟ ಪರಿಣಾಮವನ್ನು ತರುತ್ತದೆ ಹಾಗಿದ್ದರೆ ಅವುಗಳು ಯಾವ್ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಚೂಪಾದ ವಸ್ತುಗಳು; ಲೋಹದ ಚೂಪಾದ ವಸ್ತುಗಳನ್ನು ಪಾಕೀಟಿನಲ್ಲಿ ಇಟ್ಟುಕೊಳ್ಳುವ ಕಾರಣದಿಂದಾಗಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ ಹಾಗೂ ನೀವು ಬಡತನಕ್ಕೆ ಜಾರುತ್ತೀರಿ.
ಬಿಲ್ ಗಳು; ಹಲವಾರು ಜನರಿಗೆ ಬೇರೆ ಬೇರೆ ಕಡೆಗಳಲ್ಲಿ ಹಣ ಕಟ್ಟಿದ ಬಿಲ್ ಹಾಗೂ ರಸೀದಿಗಳನ್ನು ಪಾಕೀಟಿನಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಹೀಗೆ ಮಾಡಬೇಡಿ ಹೀಗೆ ಮಾಡಿದರೆ ಕ್ರಮೇಣವಾಗಿ ರಸೀದಿಗಳು ರಾಹುವಿನ ರೂಪವನ್ನು ಪಡೆದು ನಿಮ್ಮ ದಾರಿದ್ರ್ಯಕ್ಕೆ ಕಾರಣವಾಗುತ್ತದೆ.
ಪೂರ್ವಜರ ಫೋಟೋ; ಪೂರ್ವಜರನ್ನು ಗೌರವಿಸುವುದು ಸರಿಯಾದರೆ ಫೋಟೋಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ತಪ್ಪು. ಪೂರ್ವಜರ ಫೋಟೋಗಳನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇಡುವುದು ಉತ್ತಮ.
ದೇವರ ಫೋಟೋಗಳು; ದೇವರ ಫೋಟೋ ಕೇವಲ ದೇವರ ಮನೆಯಲ್ಲಿ ಮಾತ್ರ ಸೂಕ್ತವಾಗಿರುತ್ತದೆ ಹೊರತು ಪರ್ಸ್ ನಲ್ಲಿ ಅಲ್ಲ. ಹೀಗಾಗಿ ದೇವರ ಫೋಟೋಗಳನ್ನು ದೇವರಕೋಣೆಯಲ್ಲಿ ಇಟ್ಟು ಪೂಜಿಸಬೇಕು.
ಹರಿದ ನೋಟು; ಹಣವನ್ನು ವ್ಯವಸ್ಥಿತವಾಗಿ ಸರಿಯಾಗಿ ಇಟ್ಟುಕೊಳ್ಳಬೇಕು ಹರಿದ ನೋಟುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬಾರದು ಇದರಿಂದಾಗಿ ಲಕ್ಷ್ಮಿ ಮಾತು ಕೋಪಗೊಳ್ಳುತ್ತಾಳೆ ಹಾಗೂ ನಿಮ್ಮ ಬಡತನಕ್ಕೆ ಕಾರಣರಾಗುತ್ತಾಳೆ. ಇವಿಷ್ಟು ವಿಚಾರಗಳನ್ನು ನೀವು ಗಮನಿಸಿ ನಿಮ್ಮ ಪರ್ಸ್ ನಲ್ಲಿ ಯಾವ್ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಿ.