ಪುಷ್ಪ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ತಾಯಿಯಾಗಿ ನಟನೆ ಮಾಡಿರುವ ನಟಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ?? ಕಂಡು ಹಿಡಿಯಲು ಕೂಡ ಆಗುವುದಿಲ್ಲ.

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ವರ್ಷ ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ಪಂಚಭಾಷಾ ಚಿತ್ರ ಪುಷ್ಪ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಹುಬಲಿ ಹಾಗೂ ಕೆಜಿಎಫ್ ಸರಣಿ ಚಿತ್ರಗಳ ನಂತರ ಎರಡನೇ ಭಾಗದಲ್ಲಿ ಈಗ ಮಿಂಚಲು ಸಿದ್ಧವಾಗಿರುವ ಚಿತ್ರ ಎಂದರೆ ಪುಷ್ಪ ಹಾಗೂ ಈಗಾಗಲೇ ಪುಷ್ಪ ಚಿತ್ರದ ಎರಡನೇ ಭಾಗಕ್ಕೆ ಸಾಕಷ್ಟು ಜನರು ಕಾಯುತ್ತಿದ್ದಾರೆ ಎನ್ನುವುದು ಕೂಡ ಸತ್ಯವಾದ ಅಂಶ.

ಪುಷ್ಪ ಚಿತ್ರದಲ್ಲಿ ಕೇವಲ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮಾತ್ರವಲ್ಲದೆ ಹಲವಾರು ಪಾತ್ರಗಳು ಕೂಡ ಮಿಂಚಿದ್ದಾವೆ. ಅವುಗಳಲ್ಲಿ ಅಲ್ಲು ಅರ್ಜುನ್ ರವರ ಪುಷ್ಪ ಪಾತ್ರವನ್ನು ನಿರ್ವಹಿಸಿರುವ ಕಲಾವಿದೆ ಕೂಡ ಒಬ್ಬರು ಎಂದು ಹೇಳಬಹುದಾಗಿದೆ. ಪುಷ್ಪ ಚಿತ್ರದಲ್ಲಿ ಅವರು ತಾಯಿಯಾಗಿ ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು. ಆದರೆ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ಹಾಗೂ ಯಾರು ಎನ್ನುವುದನ್ನು ತಿಳಿದುಕೊಳ್ಳುವ ಬನ್ನಿ. ಹೌದು ಗೆಳೆಯರೆ ಅಲ್ಲುಅರ್ಜುನ್ ರವರ ತಾಯಿಯ ಪಾತ್ರವನ್ನು ನಿರ್ವಹಿಸಿರುವ ನಟಿಯ ಹೆಸರು ಕಲ್ಪಲತ ಎನ್ನುವುದಾಗಿ. ಇನ್ನು ಅವರ ನಿಜವಾದ ವಯಸ್ಸು 42 ವರ್ಷ ಮಾತ್ರ ಅಂದರೆ ಅಲ್ಲು ಅರ್ಜುನ್ ರವರ ನಿಜವಾದ ವಯಸ್ಸಿಗಿಂತ ಕೇವಲ 3 ವರ್ಷ ದೊಡ್ಡವರು ಅಷ್ಟೇ. ಹೀಗಿದ್ದರೂ ಕೂಡ ಸಿನಿಮಾದಲ್ಲಿ ಅವರು ಅಷ್ಟೊಂದು ಪ್ರಬುದ್ಧ ಪಾತ್ರವನ್ನು ನಿರ್ವಹಿಸಿರುವ ರೀತಿ ಪ್ರತಿಯೊಬ್ಬ ಪ್ರೇಕ್ಷಕರ ಮನಗೆದ್ದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಲ್ಪಲತ ಅವರ ಕುರಿತಂತೆ ಇನ್ನೆಷ್ಟು ಮಾತನಾಡುವುದಾದರೆ ಅವರಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳು ಕೂಡ ಇದ್ದಾರೆ. ಹಲವಾರು ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ನಾವೆಲ್ಲ ಗಮನಿಸಬಹುದು. ಅವರಿಗೆ ಕೇವಲ ಹದಿನಾಲ್ಕು ವರ್ಷ ಇರಬೇಕಾದರೆ ಮದುವೆಯಾಗಿತ್ತು. ಸಾಕಷ್ಟು ಕಷ್ಟ ಹಾಗೂ ಪರಿಶ್ರಮದ ನಂತರವೇ ಯಶಸ್ವಿ ಸಿನಿಮಾ ಜೀವನವನ್ನು ಅವರು ಆನಂದಿಸುತ್ತಿದ್ದಾರೆ. ನಿಜಕ್ಕೂ ಕೂಡ ಇದು ಅವರ ಗಮನೀಯ ಸಾಧನೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Get real time updates directly on you device, subscribe now.