ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ವಿಚಾರವಾಗಿ ರಶ್ಮಿಕಾಗೆ ಟಾಂಗ್ ನೀಡಿದ ಸಂತೋಷ್ ಆನಂದ್ ರಾಮ್ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ 777 ಚಾರ್ಲಿ ಸಿನಿಮಾ ಇದೇ ಜೂನ್ 10ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಪ್ರೀಮಿಯರ್ ಪ್ರದರ್ಶನಗಳು ಚಿತ್ರಮಂದಿರಗಳಲ್ಲಿ ದೇಶದ ಹಲವಾರು ಭಾಗಗಳಲ್ಲಿ ಪ್ರದರ್ಶನಗೊಂಡಿವೆ.
ಚಿತ್ರದ ಪ್ರೀಮಿಯರ್ ಅನ್ನು ನೋಡಿರುವ ಎಲ್ಲರೂ ಕೂಡ ಚಿತ್ರದ ಕುರಿತಂತೆ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ನೋಡಿರುವ ಎಲ್ಲರೂ ಕೂಡ ರಕ್ಷಿತ್ ಶೆಟ್ಟಿ ರವರ ಜೊತೆಗೆ ಚಾರ್ಲಿಯನ್ನು ಕೂಡ ಹೊಗಳುತ್ತಿದ್ದಾರೆ ಎಂಬುದನ್ನು ನೀವು ನೋಡಬಹುದಾಗಿದೆ. ಕಿರಣ್ ರಾಜ್ ರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಕುರಿತಂತೆ ಬಿಡುಗಡೆಗೂ ಮುನ್ನವೇ ಎಲ್ಲರಲ್ಲಿಯೂ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವುದು ಚಿತ್ರತಂಡಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ ಎಂದರೆ ತಪ್ಪಾಗಲಾರದು. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ರವರಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ರವರು ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲದೆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಡ್ಯಾನಿಶ್ ಸೇಠ್ ಹಾಗೂ ತಮಿಳಿನ ಬಾಬಿ ಸಿಂಹ ಸೇರಿದಂತೆ ಹಲವಾರು ನಟ-ನಟಿಯರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವಾನ ಹಾಗೂ ಮನುಷ್ಯನ ನಡುವಿನ ಬಾಂಧವ್ಯವನ್ನು ಈ ರೀತಿ ಕೂಡ ಚಿತ್ರಿಸಬಹುದು ಎಂಬುದನ್ನು ಈ ಸಿನಿಮಾ ನಿರೂಪಿಸಿದೆ. ಚಿತ್ರದ ಕುರಿತಂತೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಕೂಡ ಅಂಚೆಚೀಟಿಯ ಮೂಲಕ ಬರೆದು ಹಂಚಿಕೊಂಡಿದ್ದಾರೆ.
ಈ ಚಿತ್ರ ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಅರ್ಥ ಮಾಡಿಸುವಂತಹ ಚಿತ್ರ. ನಿಜ ಜೀವನದಲ್ಲಿ ಕೂಡ ಅಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿರುವ ಕಾರಣಕ್ಕಾಗಿಯೇ ಈ ಚಿತ್ರವನ್ನು ಮೂರು ವರ್ಷಗಳ ಕಾಲ ತೆರೆಯ ಮೇಲೆ ತರುವುದಕ್ಕೆ ಸಾಧ್ಯವಾಗಿದೆ. ರಕ್ಷಿತ್ ಶೆಟ್ಟಿ ಅವರನ್ನು ನಿಜ ಜೀವನದಲ್ಲಿ ಕಳೆದುಕೊಂಡವರು ನಿಜಕ್ಕೂ ನತದೃಷ್ಟರು ಎಂಬುದಾಗಿ ಪರೋಕ್ಷವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಟಾಂಗ್ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸಂತೋಷ್ ಆನಂದ್ ರಾಮ್ ನೇರವಾಗಿ ಹೇಳದಿದ್ದರೂ ಕೂಡ ಅವರು ಪೋಸ್ಟ್ ಮಾಡಿರುವ ಪೋಸ್ಟ್ ಕೆಳಗೆ ಕಾಮೆಂಟ್ ಬಾಕ್ಸ್ನಲ್ಲಿ ಎಲ್ಲರೂ ಕೂಡ ರಶ್ಮಿಕಾ ಮಂದಣ್ಣ ನವರಿಗೆ ಹೇಳಿದ್ದಾರೆ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.