ತಾನು ಐಪಿಎಲ್ ನಲ್ಲಿ ಕೆಲಸ ಮಾಡುವುದು ಯಾಕೆ ಎಂದು ಉತ್ತರ ನೀಡಿದ ಗಂಭೀರ್. ಹಣ ಪಡೆದು ಏನು ಮಾಡುತ್ತಾರಂತೆ ಗೊತ್ತೇ?

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಗೌತಮ್ ಗಂಭೀರ್ ಅವರು ಈ ಬಾರಿ ಐಪಿಎಲ್ ನಲ್ಲಿ ಕೆ ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡದ ಪರವಾಗಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗೌತಮ್ ಗಂಭೀರ್ ರವರ ಐಪಿಎಲ್ ಕರಿಯರ್ ನೋಡುವುದಾದರೆ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಎರಡು ಬಾರಿ ಕಪ್ ಗೆದ್ದಿರುವ ನಾಯಕ ಆಗಿದ್ದಾರೆ.

ಹೀಗಾಗಿ ಅವರನ್ನು ಈ ಬಾರಿ ಲಕ್ನೋ ತಂಡದ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರ ಮಾರ್ಗದರ್ಶನದಲ್ಲಿ ಈ ಬಾರಿ ಮೊದಲ ಆವೃತ್ತಿಯಲ್ಲಿಯೇ ಲಕ್ನೋ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಲ್ಲಿ ಯಶಸ್ವಿಯಾಗಿತ್ತು. ಇನ್ನು ಕೇವಲ ಕ್ರಿಕೆಟಿಗ ಮಾತ್ರವಲ್ಲದೆ ಗೌತಮ್ ಗಂಭೀರ್ ಅವರು ದೆಹಲಿಯ ಪೂರ್ವ ಪ್ರದೇಶದ ಸಂಸದ ಕೂಡ ಆಗಿ ಆಯ್ಕೆಯಾಗಿದ್ದಾರೆ. ಹೀಗಿದ್ದರೂ ಕೂಡ ಹಣಕ್ಕಾಗಿ ಐಪಿಎಲ್ ನಲ್ಲಿ ಕೆಲಸ ಮಾಡುತ್ತಾರೆ ಎಂಬುದಾಗಿ ಗೌತಮ್ ಗಂಭೀರ್ ಅವರ ವಿರುದ್ಧ ಕೆಲವು ನೆಟ್ಟಿಗರು ನಾಲಿಗೆಯನ್ನು ಹರಿಬಿಟ್ಟಿದ್ದರು. ಇದಕ್ಕೆ ಗೌತಮ್ ಗಂಭೀರ್ ಅವರು ತಮ್ಮ ಶೈಲಿಯಲ್ಲಿಯೇ ಉತ್ತರ ನೀಡಿದ್ದಾರೆ. ಹೌದು ಗೆಳೆಯರೇ ಈ ನಕಾರಾತ್ಮಕ ಪ್ರಶ್ನೆಗೆ ಉತ್ತರಿಸುತ್ತ ಗೌತಮ್ ಗಂಭೀರ್ ಅವರು ನಾನು ಪ್ರತಿ ತಿಂಗಳು 5000 ಜನರ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದೇನೆ ಹಾಗೂ ಲೈಬ್ರರಿಯನ್ನು ಕೂಡ ಕಟ್ಟಿಸಿದ್ದೇನೆ. ತಿಂಗಳಿಗೆ 5 ಸಾವಿರ ಜನರಿಗೆ ಊಟ ಎಂದರೆ 25 ಲಕ್ಷ ದಂತೆ ವರ್ಷಕ್ಕೆ 2.75 ಕೋಟಿ ರೂಪಾಯಿ ಹಣ ಬೇಕಾಗುತ್ತದೆ. ಗ್ರಂಥಾಲಯವನ್ನು ಕೂಡ 25 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ್ದೇನೆ.

ಇದೆಲ್ಲದಕ್ಕೆ ಆಗಿ ನಾನು ನನ್ನ ಸ್ವಂತ ಜೇಬಿನಿಂದ ಹಣವನ್ನು ವಿನಿಯೋಗಿಸುತ್ತಿದ್ದೇನೆಯೇ ಹೊರತು ಸರ್ಕಾರದ ಹಣವನ್ನು ಬಳಸುತ್ತಿಲ್ಲ. ಇದಕ್ಕಾಗಿ ಐಪಿಎಲ್ನಲ್ಲಿ ನಾನು ಕೆಲಸ ಮಾಡಿದ ಹಣದಿಂದ ಇದಕ್ಕಾಗಿ ಖರ್ಚು ಮಾಡುತ್ತಿದ್ದೇನೆ ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ ಎಂಬುದಾಗಿ ಗೌತಮ್ ಗಂಭೀರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿಚಾರ ತಿಳಿದ ತಕ್ಷಣ ಪ್ರತಿಯೊಬ್ಬರು ಕೂಡ ಗೌತಮ್ ಗಂಭೀರ್ ರವರಿಗೆ ಗೌರವವನ್ನು ಸೂಚಿಸಿದ್ದಾರೆ. ಮೊದಲಿನಿಂದಲೂ ಕೂಡ ಗೌತಮ್ ಗಂಭೀರ್ ಅವರು ಸಮಾಜ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವುದು ನೀವು ಇಲ್ಲಿ ಗಮನಿಸಬಹುದಾಗಿದೆ.

Get real time updates directly on you device, subscribe now.